ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಪದಗ್ರಹಣ ಮತ್ತು ಯುವ ನ್ಯಾಯ ಗ್ಯಾರಂಟಿ ಬಿಡುಗಡೆ
ಬೆಂಗಳೂರು: ಭಾರತ್ ಜೋಡೋ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಮಂಜುನಾಥ ಗೌಡ ಪದಗ್ರಹಣ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಯುವ ನ್ಯಾಯ ಗ್ಯಾರಂಟಿ ಬಿಡುಗಡೆ ಸಮಾರಂಭ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ,ಕಾರ್ಯಾಧ್ಯಕ್ಷರು,ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಅರ್ಹದ್, ಕೆಪಿಸಿಸಿ. ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಯುವ ಕಾಂಗ್ರೆಸ್ ಅಧ್ಯಕ್ಷರಾದ ನಲ್ ಪಾಡ್, ಕಾರ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರವರು ಜಿಲ್ಲಾಧ್ಯಕ್ಷ ಗೌತಮ್, ಅಂಬೇಡ್ಕರ್ ಅಭಿವೃದಿ ನಿಗಮ ಅಧ್ಯಕ್ಷ ಸಂಪತ್ ರಾಜ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಿಜಯ್ ಮುಳಗುಂದ್, ಮೋಹನ್, ಆರ್.ಮಂಜುನಾಥ್, ಶಂಕರ್ ಗುಹಾ ಯುವ ಕಾಂಗ್ರೆಸ್ ಉಸ್ತುವಾರಿ ಬಂಟಿರವರು ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮಾತನಾಡಿ ದೇಶಕ್ಕೆ ಡೊಡ್ಡ ಅಧಾರ ಸ್ಥಂಭ ಯುವ ಸಮೂಹ, ರಾಜೀವ್ ಗಾಂಧಿರವರು ಯುವಕರ ಮೇಲೆ ಅಪಾರ ವಿಶ್ವಾಸವಿಟ್ಟು 18ವರ್ಷಕ್ಕೆ ಮತದಾನ ಹಕ್ಕು ನೀಡಿದರು. ದೇಶ ಎಲ್ಲ ಪಕ್ಷದವರು ವಿರೋಧ ಮಾಡಿದರು ಅಚಲವಾದ ನಂಬಿಕೆಯಿಂದ ದೇಶ ಹಳೆಯದಾದರು ಯುವ ಶಕ್ತಿ ತುಂಬಿದೆ. ಲಾಲು ಪ್ರಸಾದ್ ಯಾದವ್ ಅವರ ಸಹ ವಿರೋಧ ಪಾರ್ಟಿಯಲ್ಲಿ ಇದ್ದರು. ಯುವಕರ ಬಗ್ಗೆ ಟೀಕೆ, ಟಿಪ್ಪಣೆ ಮಾಡುತ್ತಿದ್ದರ, ಸೇನೆ, ವಾಯಸೇನೆ ನೇಮಕಾತಿ 16ವರ್ಷಕ್ಕೆ ಬಂದೂಕು ಕೊಟ್ಟು ದೇಶ ರಕ್ಷಣೆ ಮಾಡಲು ಕಳುಹಿಸುತ್ತೇವೆ .ಪಂಚಾಯ್ತಿ ಯಿಂದ ಪಾರ್ಲಿಮೆಂಟ್ ವರಗೆ ದೇಶ ಕಾಯುವ ಯುವ ಸಮೂಹಕ್ಕೆ ನಾವು ಮತದಾನ ಕೊಡಬೇಕು ಎಂದು 21ವರ್ಷದಿಂದ 18ವರ್ಷಕ್ಕೆ ಇಳಿಸಿದರು. ಕಾಂಗ್ರೆಸ್ ಪಕ್ಷ ದೇಶಕ್ಕೆ ಹಲವಾರು ಯುವ ನಾಯಕರನ್ನ ಕೊಟ್ಟಿದೆ. ವಿಧಾನಸಭೆಯಲ್ಲಿ 40ಯುವಕರಿಗೆ ಟಿಕೇಟು ನೀಡಲಾಯಿತು ಲೋಕಸಭಾ ಚುನಾವಣೆ 14ಯುವಕರಿಗೆ ಟಿಕೇಟು ನೀಡಲಾಗಿದೆ. ಮಹಿಳೆಯರು ಮತ್ತು ಯುವಕರ ಮೇಲೆ ನಂಬಿಕೆ ಇದೆ ನನಗೆ ಇದೆ. 2ಕೋಟಿ ಉದ್ಯೋಗ ಬಿಜೆಪಿ ಸರ್ಕಾರ ಭರವಸೆ ಹುಸಿಯಾಯಿತು, ಪಕೋಡ ಮಾರಿ ಎಂದು ಹೇಳುತ್ತಾರೆ ಇದರ ವಿರುದ್ದ ಹೋರಾಟ ಮಾಡಲಾಯಿತು. ರಾಹುಲ್ ರವರು ಯುವಕರ ಕುರಿತು ಅಪಾರ ಭರವಸೆ ಇಟ್ಟಿದ್ದಾರೆ. ಯುವ ನ್ಯಾಯ ಗ್ಯಾರಂಟಿ ಯೋಜನೆ 30ಲಕ್ಷ ಸರ್ಕಾರಿ ಉದ್ಯೋಗ ಭರ್ತಿ, ಮೊದಲ ಉದ್ಯೋಗ ಖಚಿತ ಒಂದು ವರ್ಷದಲ್ಲಿ 1ಲಕ್ಷದಂತೆ ಡಿಪ್ಲೋಮೊ ಹೊಂದಿರುವವರು, ಅಥವಾ 25ವರ್ಷದೊಳಗಿನ ಪದವೀಧರರಿಗೆ ಉದ್ಯೋಗ ಖಚಿತ. ಪ್ರಶ್ನೆ ಪತ್ರಿಕೆ ಸೋರಿಕೆ ಮುಕ್ತಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣ ಕಾನೂನು ಜಾರಿ. ಗಿಗ್ ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆಯ ಕಾನೂನು ಖಾತರಿ. ಯುವ ಬೆಳಕು ಯೋಜನೆ ಅಡಿಯಲ್ಲಿ ಪ್ರತಿಯೊಂದು ಎಲ್ಲ ಜಿಲ್ಲೆಗಳಿಗೆ 5000ಕೋಟಿ ಆರಂಭಿಕ ನಿಧಿ 40ವರ್ಷಕ್ಕಿಂತ ಕಡಿಮೆ ಇರುವ ಯುವ ಸಮುದಾಯಕ್ಕೆ ಪ್ರಯೋಜನ. ದೇಶದಲ್ಲಿ ಬದಲಾವಣೆ ತರಲು ಯುವಕರಿಂದ ಮಾತ್ರ ಸಾಧ್ಯ .ಪ್ರತಿ ಬೂತ್ ಗಳನ್ನು ಜವಾಬ್ದಾರಿ ತೆಗೆದುಕೊಂಡು ಚಳುವಳಿ ರೂಪದಲ್ಲಿ ಹೋರಾಟ ಮಾಡಬೇಕು. ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ. ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡಿ. ಡಬ್ಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಲೋಕಸಭಾ ಚುನಾವಣೆಯಲ್ಲಿ 20ಕ್ಷೇತ್ರಗಳಲ್ಲಿ ಜಯಗಳಿಸುವುದು ಎಂದು ಹೇಳಿದರು.
ದಿನೇಶ್ ಗುಂಡೂರಾವ್ ರವರು ಮಾತನಾಡಿ ಯುವ ಕಾಂಗ್ರೆಸ್ ಪಕ್ಷ ಸಧೃಡವಾಗಿ ಇದ್ದಾರೆ ಪಕ್ಷ ಬಲಿಷ್ಠವಾಗಿರುತ್ತಾದೆ. ರಾಜ್ಯದಲ್ಲಿ ಹಲವಾರು ನಾಯಕರುಗಳು ಯುವ ಕಾಂಗ್ರೆಸ್ ನಿಂದ ಬಂದಿದ್ದಾರೆ. ಬಿಜೆಪಿ ಪಕ್ಷ ಸಂಸ್ಥೆಗಳ ಬಳಸಿಕೊಂಡು ವಿರೋಧ ಪಕ್ಷದವರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ನಮ್ಮ ಪಕ್ಷಕ್ಕೆ ಬಂದರೆ ನಿಮ್ಮ ಮೇಲೆ ಏನು ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರೆ. ಜಾತಿ, ಜಾತಿ ನಡುವೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಬಂದಿದೆ ಇದರಲ್ಲಿ ಯುವಕರ ಪಾತ್ರ ಪ್ರಮುಖ ಎಂದು ಹೇಳಿದರು.
ಮಂಜುನಾಥ್ ಗೌಡರವರು ಮಾತನಾಡಿ ನನ್ನ ರಾಜಕೀಯ ಗುರುಗಳಾದ ಡಿ.ಕೆ.ಶಿವಕುಮಾರ್ ರವರ ಆಶೀರ್ವಾದದ ಫಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷ ನಿಷ್ಠೆ ಬದ್ದತೆಯಿಂದ ಕೆಲಸ ಮಾಡಬೇಕು . ನಾವು ಇದ್ದರು, ಇಲ್ಲದೇ ಹೋದರು ಪಕ್ಷ ನಡೆಯುತ್ತದೆ. ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ 5ಗ್ಯಾರಂಟಿ ಯೋಜನೆಯನ್ನು ನಾಡಿನ ಜನತೆಗೆ ಭರವಸೆ ನೀಡಿತ್ತು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 10ತಿಂಗಳ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿದೆ. ದೇಶ ಅಭಿವೃದ್ದಿ ಪಥದತ್ತ ಸಾಗಲು ಯುವಕರು ಸೇೇವೆ ಅತ್ಯಗತ್ಯ ಎಂದು ಹೇಳಿದರು.