ಹನುಮ ಜಯಂತಿ ಪ್ರಯುಕ್ತ ನಾಗರಭಾವಿಯಲ್ಲಿ ಅನ್ನ ಸಂತರ್ಪಣೆ

ಹನುಮ ಜಯಂತಿ ಪ್ರಯುಕ್ತ ನಾಗರಭಾವಿಯಲ್ಲಿ ಅನ್ನ ಸಂತರ್ಪಣೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಶ್ರೀ ಹನುಮ ಜಯಂತಿ ಪ್ರಯುಕ್ತ ನಾಗರಭಾವಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಧರ್ಮಸಂಸ್ಥೆ, ಶ್ರೀ ಶೇಷಮಹಾಗಣಪತಿ ದೇವಸ್ಥಾನ ಹಾಗೂ ಜೈಮಾರುತಿ ನಾಗರಭಾವಿ ಯುವಕರ ಸಂಘದಿಂದ ಬಿಬಿಎಂಪಿ ವಾರ್ಡ್ ನಂಬರ್ 127ರ ಮಾಜಿ ಸದಸ್ಯರಾದ ದಾಸೇಗೌಡ. ಸಿ ಅವರ ನೇತೃತ್ವದಲ್ಲಿ ಶುಕ್ರವಾರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ, ಹಾಗೂ ಲಡ್ಡು ವಿತರಣೆ ಕಾರ್ಯಕ್ರಮ ಮಾಡಲಾಯಿತು. 

ಇದಕ್ಕೂ ಮುನ್ನ ಹನುಮ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ 'ರಾಮ ತಾರಕ ಹೋಮ’ ಪೂರ್ಣಾಹುತಿ, ಪ್ರಸಾದ ವಿನಿಯೋಗ ಜರುಗಿತು. ನಾಗರಭಾವಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೂವು-ಹಣ್ಣುಗಳಿಂದ ಅಲಂಕಾರ, ದೀಪಾಲಂಕಾರ ಮಾಡಿರುವುದು ಭಕ್ತರನ್ನು ಸೆಳೆಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಬಿಬಿಎಂಪಿ ಮಾಜಿ ಸದಸ್ಯರಾದ ದಾಸೆ ಗೌಡ, ಪಲ್ಲವಿ ಚನ್ನಪ್ಪ, ಮೋಹನ್ ಕುಮಾರ್, ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ಜಿಮ್ ರವಿ,ಜಗದೀಶ್, ಸೇರಿದಂತೆ ಇನ್ನಿತರರ ಪಾಲ್ಗೊಂಡಿದ್ದರು.