ಸೂಕ್ತ ಅಧ್ಯಯನ ಇಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಬಾರದು : ಶ್ರೀ ಸೈನಾ ಭಗತ್ ಗುರೂಜಿ

ಸೂಕ್ತ ಅಧ್ಯಯನ ಇಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಬಾರದು : ಶ್ರೀ ಸೈನಾ ಭಗತ್ ಗುರೂಜಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ರಾಜ್ಯ ಸರ್ಕಾರವು ಸೂಕ್ತ ಅಧ್ಯಯನ ಇಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಒಳ-ಮೀಸಲಾತಿ ಜಾರಿಗೊಳಿಸಲು ನಡೆಯುತ್ತಿರುವ ಷಡ್ಯಂತ್ರ ಎಂದು ಸೈನಾ ಭಗತ್ ಗುರೂಜಿ ರವರು ತಿಳಿಸಿದರು.

       ಬಂಜಾರ ಧರ್ಮ ಗುರುಗಳ ಮಹಾಸಭಾ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪರಿಶಿಷ್ಟರ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯದಲ್ಲಿ ಇರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮಾಡಬಾರದು. ಪರಿಶಿಷ್ಟರ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕಸ್ಥಿತಗಳು, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸಿಯೇ ಒಳಮೀಸಲಾತಿ ಹಂಚಿಕೆ ನಿರ್ಧಾರ ಕೈಗೆತ್ತಿಕೊಳ್ಳಬೇಕು ಎಂದರು.

      ಬಳಿಕ ಶ್ರೀ ಶಿವಪ್ರಕಾಶ್ ಮಹಾರಾಜರು ಮಾತನಾಡಿ 2011ರ ನಂತರ ಜನಗಣತಿ ನಡೆದಿರುವುದಿಲ್ಲ ಬಂಜಾರಾ ಜನಾಂಗದಲ್ಲಿ 'ಗೂಳೆ ಹೋಗುವುದು' ಒಂದು ಪಿಡಗಾಗಿದ್ದು. ಜನಸಂಖ್ಯಾ ಮಾಹಿತಿ ಇಲ್ಲದೆ ಮತ್ತು ಜಾತಿ ಜನಗಣತಿ ಆಗದೆ ಒಳಮೀಸಲಾತಿ ಮತ್ತು ವರ್ಗೀಕರಣದ ವಿಚಾರ ಅಥವಾ ಪ್ರಯತ್ನ ಸಮಂಜಸವಾಗಿರುವುದಿಲ್ಲ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವ ಎಲ್ಲ ಬಂಜಾರಾ ಜನಾಂಗದ ಜನಗಣತಿಯನ್ನು ಅಚ್ಚುಕಟ್ಟಾಗಿ ಮತ್ತು ಅತಿ ಹೆಚ್ಚಿನ ಕಾಳಜಿವಹಿಸಿ ನಡೆಸಬೇಕು ಮತ್ತು ಅದರ ದತ್ತಾಂಶವನ್ನು ಯಾವುದೇ ಲೋಪ ವಿಲ್ಲದೆ ಪಾರದರ್ಶಕವಾಗಿ ಬಹಿರಂಗಗೊಳಿಸಬೇಕು ಎಂದರು. 

     ನಂತರ ಸರ್ದಾ‌ರ್ ಸೇವಾಲಾಲ್ ಸ್ವಾಮೀಜಿ ರವರು ಮಾತನಾಡಿ ಪರಿಶಿಷ್ಟ ಸಮುದಾಯಗಳ ನಡುವೆ ಒಳಮಿಸಲಾತಿ ಮತ್ತು ವರ್ಗೀಕರಣದ ವಿಷಯಗಳಲ್ಲಿ ಹುಟ್ಟುತ್ತಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮತ್ತು ಸಮುದಾಯಗಳ ನಡುವೆ ಯಾವುದೇ ದ್ವೇಷ ಭಾವನೆ ಹುಟ್ಟದೇ ಇರುವ ಹಾಗೆ ರಾಜ್ಯ ಸರ್ಕಾರ ಸರಿಯಾದ ನಿರ್ಧಾರವನ್ನ ತೆಗೆದುಕೊಳ್ಳಬೇಕು. ಮೀಸಲಾತಿ, ಒಳಮೀಸಲಾತಿ ಮತ್ತು ವರ್ಗೀಕರಣದ ಅಧ್ಯಯನ ಪರಿಶಿಷ್ಟರ ನಡುವೆ ಇರುವ ಐಕ್ಯತೆಗೆ ಯಾವುದೇ ಧಕ್ಕೆ ತರಬಾರದು. ಎಲ್ಲ ಪರಿಶಿಷ್ಟರ ಹಿತವನ್ನ ಕಾಪಾಡಲು ಸರ್ಕಾರ ಸರಿಯಾದ ಕ್ರಮವಹಿಸಬೇಕು ಎಂದರು.

     ಈ ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ರಾಜ್ಯದ ಬಂಜಾರಾ ಧರ್ಮಗುರುಗಳ ಮಹಾಸಭಾ, ಮತ್ತು ನೂರಾರು ಗೋರ್ಜನಾಂಗದ ಕಾರ್ಯಕರ್ತರು ಮತ್ತು ಸ್ವಾಭಿಮಾನಿ ಗೋರ್ಬಂಜಾರಾ ಜನಾಂಗದ, ಹಿತ ಚಿಂತಕರು ಭಾಗವಹಿಸಿದ್ದರು.