ಏಪ್ರಿಲ್ 7ರಂದು ಲಾಲ್ ಬಾಗ್ ಆವರಣದಲ್ಲಿ ಜರುಗಿದ ಇಪಿಎಸ್ ಪಿಂಚಣಿದಾರರ 75ನೇ ಮಾಸಿಕ ಸಭೆ
ಬೆಂಗಳೂರು: ಇಪಿಎಸ್ 95 ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಪಿಂಚಣಿದಾರರ 75ನೇ ಮಾಸಿಕ ಸಭೆ ಲಾಲ್ ಬಾಗ್ ಆವರಣದಲ್ಲಿ ಜರುಗಿತು. ಈ ವೇಳೆ ಸಂಘದ ಸಂಘಟನಾ ಕಾರ್ಯದರ್ಶಿ ಆರ್ ಮನೋಹರ್ ರವರು ಎಲ್ಲಾ ಸದಸ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.
. ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ರವರು ಮಾತನಾಡಿ, ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕರಾದ ರಮಾಕಾಂತ ನರಗುಂದರವರು, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ನಮ್ಮ ಮುಖಂಡರು ಶೀಘ್ರ ಗುಣಮುಖರಾಗಿ ಹೊರಬರಲಿ ಎಂದು ಸದಸ್ಯರೆಲ್ಲರೂ ಶುಭ ಹಾರೈಸಿದರು. ಸೆಪ್ಟೆಂಬರ್ 1, ಪೂರ್ವ ಹಾಗೂ ನಂತರ ನಿವೃತ್ತರಾದವರು ಕಾನೂನಿನ ದೃಷ್ಟಿಯಲ್ಲಿ ಇಬ್ಬರೂ ಒಂದೇ. ಹಾಗಾಗಿ ಚುನಾವಣಾ ಪ್ರಕ್ರಿಯೆ ಆಕೈರಾದ ನಂತರ ಕಾನೂನಾತ್ಮಕ ಹೋರಾಟ ತೀವ್ರಗೊಳ್ಳಲಿದ್ದು, ಈ ಅಂತಿಮ ಹೋರಾಟದಲ್ಲಿ ನಮಗೆ ಜಯ ಶತಸಿದ್ಧ ಎಂದಿರುತ್ತಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಜಿಎಸ್ಎಂ ಸ್ವಾಮಿ ರವರು ಮಾತನಾಡಿ, ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥರಾದ ಶ್ರೀ ಅಶೋಕ್ ರಾವುತ್ ರವರ ನೇತೃತ್ವದಲ್ಲಿ ಕಳೆದ ವಾರ ನವದೆಹಲಿಯಲ್ಲಿ ನಡೆದ ಸಂಧಾನ ಸಭೆಗೆ ರಾಜ್ಯದಿಂದ ರಮಾಕಾಂತ ನರಗುಂದ ಹಾಗೂ ತಾವು ಭಾಗವಹಿಸಿದ್ದು, ಕೇಂದ್ರ ಸರ್ಕಾರದ ಉನ್ನತ ಸಚಿವರು ಹಾಗೂ ಇಪಿಎಫ್ಓ ಅಧಿಕಾರಿಗಳ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಚುನಾವಣಾ ನೀತಿ ಸಹಿತೆ ಜಾರಿಯಾದ ಪ್ರಯುಕ್ತ, ಕನಿಷ್ಟ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಚುನಾವಣಾ ನಂತರ ಈಡೇರಿಸುವ ಭರವಸೆಯನ್ನು ನೀಡಿದ್ದು, ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿರುತ್ತಾರೆ. ಇಪಿಎಸ್ ಪಿಂಚಣಿದಾರರಿಗೆ ನ್ಯಾಯ ಒದಗಿಸಿಕೊಡಲು ರಾಷ್ಟ್ರೀಯ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಇದಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿರುತ್ತಾರೆ.
ಜಂಟಿ ಕಾರ್ಯದರ್ಶಿ ರುಕ್ಮೇಶ್ ರವರು ಇಂದಿನ ಮಾಸಿಕ ಸಭೆಯ ಎಲ್ಲಾ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿ, ಜೊತೆಗೆ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.