ಎಲ್ ಆಂಡ್ ಟಿ ಫೈನಾನ್ಸ್‌ನಿಂದ ಬೆಂಗಳೂರಿನಲ್ಲಿ

ಎಲ್ ಆಂಡ್ ಟಿ ಫೈನಾನ್ಸ್‌ನಿಂದ ಬೆಂಗಳೂರಿನಲ್ಲಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ರಿಟೇಲ್ ಫೈನಾನ್ಸಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಲ್ ಆಂಡ್ ಟಿ ಫೈನಾನ್ಸ್ ಲಿಮಿಟೆಡ್ (ಎಲ್‌ಟಿಎಫ್) ಬೆಂಗಳೂರಿನ ಗ್ರಾಹಕರಿಗಾಗಿ ತಮ್ಮ ಕನಸಿನ ಮನೆಯನ್ನು ಸಾಕಾರಗೊಳಿಸಲು "ಸಂಪೂರ್ಣ ಗೃಹ ಸಾಲ* ಯೋಜನೆಯನ್ನು ಪರಿಚಯಿಸಿದೆ. ಡಿಜಿಟಲ್ ಪ್ರಕ್ರಿಯೆಯ ಮೂಲಕವೇ, ವ್ಯಕ್ತಿಗತ ರಿಲೇಷನ್‌ಷಿಪ್ ಮ್ಯಾನೇಜರ್‌ವೊಬ್ಬರ ನೆರವಿನ ಮೂಲಕ ಈ ಸಂಪೂರ್ಣ ಸಾಲ ಗ್ರಾಹಕರಿಗೆ ಅನಾಯಾಸವಾಗಿ ದೊರೆಯಲಿದೆ. ಜೊತೆಗೆ ಗೃಹಾಲಂಕಾರಕ್ಕಾಗಿ ಹಣಕಾಸಿನ ನೆರವೂ ಸಿಗಲಿದೆ.

ಗೃಹಾಲಂಕಾರದ ಹಣಕಾಸು ನೆರವಿನಡಿ ಕಂಪೆನಿ ಅನುಕೂಲಕರ ವಾಸಕ್ಕಾಗಿ ಅಗತ್ಯವಿರುವ ಪೀಠೋಪಕರಣ ಮತ್ತಿತರ ಆಲಂಕಾರಿಕ ವಸ್ತುಗಳನ್ನು ಖರೀದಿಸಲು ಸಹಾಯ ಮಾಡುವ ಉದ್ದೇಶ ಹೊಂದಿದೆ. ಡಿಜಿಟಲೀಕರಣ ಪ್ರಕ್ರಿಯೆಯಿಂದಾಗಿ ತಂತ್ರಜ್ಞಾನದ ನೆರವಿನಿಂದಾಗಿ ಗ್ರಾಹಕರು ಸುಲಭ ಮತ್ತು ಸರಳವಾಗಿ ಸಾಲ ಪಡೆಯಬಹುದು. ವ್ಯಕ್ತಿಗತ ಸೇವೆಗೆ ರಿಲೇಷನ್‌ಷಿಪ್ ಮ್ಯಾನೇಜರ್ ಸಾಲ ಅನುಮೋದನೆ ಪ್ರಕ್ರಿಯೆಯುದ್ದಕ್ಕೂ ಗ್ರಾಹಕರೊಂದಿಗೆ ಇದ್ದು ಸಹಕರಿಸಲಿದ್ದಾರೆ.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

 

ಈ ಕೊಡುಗೆಗಳ ಪ್ರಚಾರಕ್ಕಾಗಿ ಕಂಪೆನಿ ಇತ್ತೀಚೆಗೆ ಹೊಸ ಟೀವಿ ಜಾಹೀರಾತುಗಳನ್ನೂ ಪರಿಚಯಿಸಿದೆ. ಹಾಸ್ಯ ಮತ್ತು ಸಾಂದರ್ಭಿಕ ಕ್ಷಣಗಳನ್ನು ಬೆರೆಸಿರುವ ಈ ಜಾಹೀರಾತುಗಳು "ಕಮ್ ನಹೀ, ಕಂಪ್ಲಿಟ್" ಘೋಷವಾಕ್ಯ ಹೊಂದಿವೆ. ಮೊದಲ ಟೀವಿ ಜಾಹೀರಾತು "ಹೋಮ್ ಡೆಕೊರ್ ಫೈನಾನ್ಸ್" ಪರಿಚಯಿಸಿದರೆ, ಎರಡು ಮತ್ತು ಮೂರನೇ ಜಾಹೀರಾತುಗಳಲ್ಲಿ "ಡಿಜಿಟಲ್ ಪ್ರಕ್ರಿಯೆ" ಮತ್ತು "ಡೆಡಿಕೇಟೆಡ್ ರಿಲೆಷನ್‌ಷಿಪ್ ಮ್ಯಾನೇಜರ್" ಪರಿಕಲ್ಪನೆಯನ್ನು ಪ್ರಚಾರಪಡಿಸಲಿವೆ.

ಹೊಸ ಯೋಜನೆಯನ್ನು ಪರಿಚಯಿಸಿ ಮಾತನಾಡಿದ ಎಲ್‌ಟಿಎಫ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸುದೀಪ್ತಾ ರಾಯ್ ಅವರು “ಗ್ರಾಹಕರ ಬದಲಾಗುವ ಅಗತ್ಯತೆಗಳಿಗೆ ಸ್ಪಂದಿಸಲು ನಾವು ಈ "ಸಂಪೂರ್ಣ ಗೃಹಸಾಲ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಗ್ರಾಹಕರನ್ನು ಕೇಂದ್ರವಾಗಿಟ್ಟುಕೊಂಡು ಸಾಲ ಪಡೆಯುವಾಗ ಅವರ ಅನುಭವವನ್ನು ಉತ್ತಮಗೊಳಿಸಲು ಹೊಸತನವನ್ನು ನೀಡುವ ನಮ್ಮ ಬದ್ಧತೆಯನ್ನು ಈ ಮೂಲಕ ಮುಂದುವರೆಸುತ್ತಿದ್ದೇವೆ. ಆಳವಾದ ಮಾರುಕಟ್ಟೆ ಅಧ್ಯಯನದ ಮೂಲಕ ನಾವು ಗ್ರಾಹಕರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ನಮ್ಮ ಈಗ ಇರುವ ಸಾಲ ಯೋಜನೆಗಳನ್ನು ಪರಿಷ್ಕರಿಸಿ ಗೃಹ ಸಾಲಕ್ಕಾಗಿ ಒನ್ ಸ್ಟಾಪ್ ಪರಿಹಾರ ನೀಡುತ್ತಿದ್ದೇವೆ. ಗ್ರಾಹಕರು, ಪಾಲುದಾರರು ಮತ್ತು ಷೇರುದಾರರಿಗೆ ಮೌಲ್ಯವನ್ನು ಸೃಷ್ಟಿಸಲು ಗಮನ ಹರಿಸುತ್ತಿದ್ದೇವೆ. ನಮ್ಮ ಹೊಸ ಟೀವಿ ಜಾಹೀರಾತುಗಳು ಕಂಪೆನಿಯ ಬ್ರಾಂಡ್ ಅಸ್ತಿತ್ವವನ್ನು ವಿಸ್ತರಿಸಲಿದ್ದು, ನಮ್ಮ ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲಿವೆ. ಇವು ಗ್ರಾಹಕರನ್ನು ತಲುಪಿ ಗೃಹ ಸಾಲಗಳು ಹೆಚ್ಚು ಕೈಗೆಟಕುವಂತೆ ಮಾಡಲಿವೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

ಎಲ್‌ಟಿಎಫ್ ಅರ್ಬನ್ ಫೈನಾನ್ಸ್‌ನ ಚೀಫ್ ಎಕ್ಸಿಕ್ಯೂಟಿವ್ ಸಂಜಯ್ ಗರ್ಯಾಲಿ ಅವರು ಮಾತನಾಡಿ "ಬೆಂಗಳೂರು ನಮಗೆ ಪ್ರಮುಖ ಮಾರುಕಟ್ಟೆಯಾಗಿದ್ದು, "ಸಂಪೂರ್ಣ ಗೃಹಸಾಲ" ಯೋಜನೆಯ ಮೂಲಕ

ನಾವು ಮೊದಲ ಬಾರಿ ಮನೆ ಖರೀದಿಸಲು ಮತ್ತು ನಿರ್ಮಿಸಲು ಇಚ್ಚಿಸುವ ಗ್ರಾಹಕರನ್ನು ತಲುಪಲು ಉದ್ದೇಶಿಸಿದ್ದೇವೆ. ಗ್ರಾಹಕರ ಸ್ವಭಾವವನ್ನು ಅರ್ಥ ಮಾಡಿಕೊಂಡು ರೂಪಿಸಿರುವ "ಸಂಪೂರ್ಣ ಗೃಹ ಸಾಲ" ಯೋಜನೆ ಗ್ರಾಹಕರಿಗೆ ಅನುಕೂಲಕರ ಪರಿಹಾರಗಳನ್ನು ಒದಗಿಸಲಿದೆ. ಡಿಜಿಟಲ್ ಪ್ರೊಸೆಸಿಂಗ್, ಕಿರಿಕಿರಿಗಳಿಲ್ಲದ ದಾಖಲೀಕರಣ ಮತ್ತು ಆಕರ್ಷಕ ಬಡ್ಡಿದರ ಸೇರಿದಂತೆ ಉತ್ತಮ ಸೇವೆಗಳು ಗ್ರಾಹಕರಿಗೆ ಮೌಲ್ಯವರ್ಧಿಸಲಿವೆ. ಜೊತೆಗೆ ಗೃಹಾಲಂಕಾರಕ್ಕಾಗಿಯೂ ನೆರವು ದೊರೆಯುತ್ತಿರುವುದು ಅವರಿಗೆ ಇನ್ನಷ್ಟು ಅನುಕೂಲರವಾಗಲಿದೆ” ಎಂದು ಅಭಿಪ್ರಾಯಪಟ್ಟರು.

ಜಾಹೀರಾತು ಅಭಿಯಾನದ ಭಾಗವಾಗಿ ಕಂಪೆನಿ ಐಪಿಎಲ್‌ನ ಕೋ ಪ್ರೆಸೆಂಟಿಂಗ್ ಪ್ರಾಯೋಜಕ ಕಂಪೆನಿಗಳಲ್ಲಿ ಒಂದಾಗಿದ್ದಲ್ಲದೇ ಐಪಿಎಲ್ ಪಂದ್ಯಗಳ ವೇಳೆ ಜಿಯೋ ಸಿನಿಮಾ ಚಾನೆಲ್‌ನಲ್ಲಿ ಜಾಹೀರಾತುಗಳನ್ನೂ ನೀಡುತ್ತಿದೆ. ಜೊತೆಗೆ ಚುನಾವಣಾ ಪೂರ್ವ ಹಾಗೂ ಮತ ಎಣಿಕೆ ದಿನದಂದೂ ಪ್ರಮುಖ ಸುದ್ದಿ ಚಾನೆಲ್‌ಗಳಲ್ಲಿ ಕಂಪೆನಿ ಜಾಹೀರಾತುಗಳನ್ನು ನೀಡುತ್ತಿದೆ. ಅನೇಕ ಸೋಷಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ಡಿಜಿಟಲ್ ಅಭಿಯಾನವನ್ನೂ ನಡೆಸುತ್ತಿದೆ.

ಇವುಗಳಲ್ಲದೇ ಎಲ್‌ಟಿಎಫ್ ಬ್ರಾಂಡನ್ನು ಔಟ್‌ಡೋರ್ ಜಾಹೀರಾತು ಫಲಕಗಳು, ಏರ್‌ಪೋರ್ಟ್ ಅರ್ಡ್ವಟೈಸಿಂಗ್, ಆನ್‌ಗೌಂಡ್ ಬಿಲ್ಡರ್ ಒಪ್ಪಂದ ಮತ್ತು ಬೆಂಗಳೂರು ಹಾಗೂ ಭಾರತದ ಇತರ ಪಟ್ಟಣಗಳಲ್ಲಿ ನಡೆಯುವ ಗೃಹಸಂಬಂಧಿ ಉತ್ಸವಗಳಲ್ಲಿಯೂ ಪಾಲ್ಗೊಳ್ಳುತ್ತಿವೆ.

ಟೀವಿ ಜಾಹೀರಾತುಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:

Home Décor Finance: https://youtu.be/o6FVmT7466E

Digitized Process: https://youtu.be/XvDJeBn5HOI

Dedicated Relationship Manager: https://youtu.be/TlbMt8NnCCQ

https://www.ltfs.com 

“ಸಂಪೂರ್ಣ ಗೃಹ ಸಾಲ"ಕ್ಕೆ ಅರ್ಜಿ ಸಲ್ಲಿಸಲು +91 9004555111 ಇಲ್ಲಿ ಮಿಸ್ ಕಾಲ್ ನೀಡಿ ಅಥವಾ