ವಿನೋಬಾ ಬಾವೆ ಅನಾಥಾಶ್ರಮದಲ್ಲಿ ಬಸವ ಪಂಚಮಿ ಆಚರಣೆ
Basava Panchami Celebration at Vinoba Bawe Ashrama
ಬೆಂಗಳೂರು: ವಿಧ್ಯಾರ್ಥಿ ಬಂಧುತ್ವ ವೇದಿಕೆ- ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ವತಿಯಿಂದ ದಿನಾಂಕ: 9/8/2024ರ ಶುಕ್ರವಾರದಂದು ಬೆಂಗಳೂರಿನ ಗಾಂಧಿನಗರದ ವಿನೋಬಾ ಬಾವೆ ಅನಾಥ ಆಶ್ರಮದಲ್ಲಿ ಬಸವ ಪಂಚಮಿ" ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ
ಈ ಬಸವರಾಜು ಭಾಗವಹಿಸಿ ಬಸವ ಪಂಚಮಿ ಬಗ್ಗೆ ತಿಳಿಸಿದರು. ಪತ್ರಕರ್ತ ಆಲ್ಬೂರುಶಿವರಾಜ: ರವರು ಬಸವ ಪಂಚಮಿ ಆಚರಿಸುವ ಕುರಿತು ಅದರಿಂದ ಪರಿಸರ ಹಾನಿಯಾಗುವ ಬಗ್ಗೆ (ಇತ್ತೀಚಿನ ನಾಗರಪಂಚಮಿ ಯಿಂದ ಪರಿಸರಕ್ಕೆ ಹಾನಿ)ವಿಶೇಷ ಅರಿವು ಮೂಡಿಸುವ ಮಾತನಾಡಿದರು. MBVಯ ಜಿಲ್ಲಾ ಸಮಿತಿಯ ಡಿ ವೀರಣ್ಣ ಹಾಗೂ ಆಶ್ರಮದ ಮುಖ್ಯಸ್ಥರು ಉಪಸ್ಥಿತರಿದ್ದರು ಮತ್ತು ಆಶ್ರಮದ ವಿದ್ಯಾರ್ಥಿಗಳೂ , ಭಾಗವಹಿಸಿದ್ದರು. ಸಂಚಾಲಕರಾದ ತೋರಣ್ ಕುಮಾರ್ ಕಾರ್ಯಕ್ರಮವನ್ನು ಆಯೋಜಿಸಿ, ಯಶಸ್ವಿಯಾಗಿ ನಡೆಸಿಕೊಟ್ಟರು.ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ.. ಆಶ್ರಮದಲ್ಲಿರುವ ವಯೋವೃದ್ಧರಿಗೂ.ಜನರಿಗೂ ಕುಡಿಯಲು ಬಾದಾಮಿ ಹಾಲು ಮತ್ತು ಹಣ್ಣು .ಬಿಸ್ಕೆಟ್. ನೀಡಲಾಯಿತು.