ಜಾಗ್ವಾರ್ ಸಣ್ಣಪ್ಪ ಅವರ ಶ್ರೀ ರಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿಂದ ಸಾಂಸ್ಕೃತಿಕ ಸಂಭ್ರಮ

A cultural extravaganza by Jaguar Sannappa's Sri Raksha Sports and Cultural Trust

ಜಾಗ್ವಾರ್ ಸಣ್ಣಪ್ಪ ಅವರ ಶ್ರೀ ರಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿಂದ ಸಾಂಸ್ಕೃತಿಕ ಸಂಭ್ರಮ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಸಿನಿಮಾರಂಗದ ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ ಅವರ ನೇತೃತ್ವದ ಶ್ರೀ ರಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ 2024ರ ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನ ನಂದಿನಿ ಲೇಔಟ್ ಸರ್ಕ್ಯುಲರ್ ಉದ್ಯಾನವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ,ಪ್ರತಿಭಾನ್ವಿತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಕವಿ,ಚಲನಚಿತ್ರ ಸಾಹಿತ್ಯ ರಚನೆಕಾರ ಡಾ.ನಾಗೇಂದ್ರ ಪ್ರಸಾದ್, ಯಾವುದೇ ಪೋಷಕರು ಮಕ್ಕಳನ್ನು ನಿರಂತರ ಒದು,ಬರಹದಲ್ಲಿ ತಲೀನರಾಗಿಸಿದರೆ ಕೇವಲ ಸಂಬಳ ಗಳಿಕೆಯ ನೌಕರನಾಗಬಹುದು,ಆದರೆ ಮಕ್ಕಳು ಒದುವಿನ ಜೊತೆಗೆ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಾಗಿಯಾದರೆ ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳಯಬಹುದು, ಜಾಗ್ವಾರ್ ಸಣ್ಣಪ್ಪ ಐದನೂರು ಚಲನಚಿತ್ರದಲ್ಲಿ ನಟನೆ, ನೂರಕ್ಕೂ ಅಧಿಕ ಚಲನ ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಜತೆಗೆ ನಂದಿನಿ ಲೇಔಟ್ ಭಾಗದ ಮಕ್ಕಳಿಗೆ ಉಚಿತವಾಗಿ ತಮ್ಮ ಟ್ರಸ್ಟ್ ಮೂಲಕ ಟೆಕ್ವಾಂಡೋ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇವರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಜಾಗ ನೀಡುವುದು ಸೂಕ್ತ ಎಂದು ಮನವಿ ಮಾಡಿದರು.

ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮಾತನಾಡಿ, ಜಾಗ್ವಾರ್ ಸಣ್ಣಪ್ಪ ಉಚಿತವಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಟೆಕ್ವಾಂಡೋ,ಜಿಮ್ನಾಸ್ಟಿಕ್, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ,ಸರ್ಕಾರದಿಂದ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಮಕ್ಕಳು ಕಂಸಾಳೆ, ಡೊಳ್ಳು ಕುಣಿತ, ಯಕ್ಷಗಾನ, ಸಿಂಗರ್ ನಾಟಕ, ಕೊಡವ ನೃತ್ಯ, ಯೋಗ ಪ್ರದರ್ಶನ, ಟೆಕ್ವಾಂಡೋ, ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಎಸ್. ರಾಘವೇಂದ್ರ ಶೆಟ್ಟಿ, ಬ್ರಾಹ್ಮಣ ಮಹಾಸಭಾದ ವೆಂಕಟ ಶಾಸ್ತ್ರಿ,ನಂದಿನಿ ಲೇಔಟ್ ಬಿಜೆಪಿ ಮಂಡಲ ಅಧ್ಯಕ್ಷ ಲೋಕೇಶ್,ಚಲನ ಚಿತ್ರ ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀ ಸಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.