ಲಯನ್ಸ್ ಕ್ಲಬ್ ವತಿಯಿಂದ ಮನೆ ಮನೆಗೆ ಮಣ್ಣಿನ ಗಣಪ 2024 ಕಾರ್ಯಗಾರ ಆಯೋಜನೆ
Door-to-door Soil Ganapa 2024 Action Plan by Lions Club
ಬೆಂಗಳೂರು : ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ವತಿಯಿಂದ ಬಿಜಿಎಸ್‌ಕೆಎಚ್ ಎಜುಕೇಶನಲ್ ಟ್ರಸ್ಟ್ ಹಾಗೂ ಬಿ ಪ್ಯಾಕ್ ಸಹಾಯದೊಂದಿಗೆ ಮನೆ ಮನೆಗೆ ಮಣ್ಣಿನ ಗಣಪ 2024 ಶೀರ್ಷಿಕೆಯಲ್ಲಿ ಮಕ್ಕಳಿಂದ ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪನನ್ನು ಮಾಡುವ ಕಾರ್ಯಗಾರವನ್ನು ಮಹಾಲಕ್ಷ್ಮಿಪುರದ ಬಿಜಿಎಸ್ ವರ್ಲ್ಡ್ಸ್ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯ ಹಾಗೂ ಲಯನ್ಸ್ ರಾಜ್ಯಪಾಲರಾದ ಲಯನ್ ಎನ್ ಮೋಹನ್ ಕುಮಾರ್ ರವರು, ರಾಜ್ಯಸಭಾ ಸದಸ್ಯರಾದ ಚಂದ್ರಶೇಖರ್ ರವರು ಕಾರ್ಯಗಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲಯನ್ಸ್ ಸಂಪುಟ ಕಾರ್ಯದರ್ಶಿ ಲಯನ್ ರಾಮಚಂದ್ರ, ಜಿಎಸ್‌ಟಿ ಲಯನ್ ರಾಘವೇಂದ್ರ, ಜಿಎಂಟಿ ಲಯನ್ ವೆಂಕಟೇಶ್, ಜಿಎಲ್‌ಟಿ ಲಯನ್ ಶ್ರೀನಾಥ್, ಡಿಸಿ ಲಯನ್ ರಾಮಕೃಷ್ಣಪ್ಪ, ಲಯನ್ ಅಶೋಕ್ ಕುಲಕರ್ಣಿ, ರಿಜನ್ ಚೇರ್ ಪರ್ಸನ್ ಲಯನ್ ಮನೋಜ್ ಕುಮಾರ್, ಕೃಷ್ಣಮೂರ್ತಿ, ಶಶಿಕಲಾ, ಸೋಮಲತಾ ಹಾಗೂ ಡಾ. ಸುಮಿತ್ರಾ ಗೌಡ, ಕೇಶವ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಮಂಜುನಾಥ್ ರೆಡ್ಡಿ, ಸುರೇಶ್ ,ಲಯನ್ ಶೀಲಾ, ಡಾ. ವಿಜಯಶಂಕರ್, ಲಯನ್ ಪ್ರಭಾವತಿ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.