ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮಹಾಶಿವರಾತ್ರಿ ಅಚರಣೆ
Mahashivratri celebrated by BBMP Officers and Employees Welfare Association

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೌಕರರ ಸಂಘದ ಎದುರು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನಾ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಶೇಷ ಪೂಜೆ, ಶಿವಮಂತ್ರ ಪಠಣೆ ಮತ್ತು ಅಧಿಕಾರಿ, ನೌಕರರಿಂದ ಭಕ್ತಿ ಗೀತೆ ಗಾಯನ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಶಿವನಾ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಎ.ಅಮೃತ್ ರಾಜ್ ರವರು ಎಲ್ಲವನ್ನು ಕರುಣಿಸುವ ಮತ್ತು ಬೇಡಿದ ವರ ನೀಡುವ ದೇವರು, ಶಿವ ನಾಮ ಸ್ಮರಣೆಯಿಂದ ಬಂದ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ, ಶಾಂತಿ ನೆಮ್ಮದ್ದಿ ಲಭಿಸುತ್ತದೆ ಶಿವ ದೇವರ ಅರಾಧನೆಯಿಂದ. ಶಿವ ಒಲಿದರೆ ಭಯವಿಲ್ಲ ಎಂದರೆ ಪ್ರತಿ ದಿನವು ಶಿವನಾಮ ಸ್ಮರಣೆಯಿಂದ ಕಾರ್ಯ ಮಾಡಿದರೆ ಯಾವುದೇ ಅಡಚಣೆ ಬರುವುದಿಲ್ಲ. ನಮ್ಮ ಸಂಘದ ವತಿಯಿಂದ ಮಹಾಶಿವರಾತ್ರಿ ಹಬ್ಬ ಅಚರಿಸಲಾಗುತ್ತಿದೆ.
ಬೆಂಗಳೂರುನಗರ ಇಂದು ವಿಶ್ವದ 10 ಸುಂದರ ನಗರಗಳಲ್ಲಿ ಒಂದು ಎಂಬ ಕೀರ್ತಿ ಗಳಿಸಿದೆ ಇದಕ್ಕೆ ಕಾರಣ ಜನಪ್ರತಿನಿಧಿಗಳ ಜೊತೆಯಲ್ಲಿ ಬಿಬಿಎಂಪಿ ಅಧಿಕಾರಿಗಳ, ನೌಕರರು ಹಗಲಿರುಳು ದುಡಿದ ಶ್ರಮ ಕಾರಣ. ಅಧಿಕಾರಿಗಳು, ನೌಕರರು ಸತತ ಕೆಲಸದ ಒತ್ತಡದಿಂದ ಮಾನಸಿಕ, ದೃಹಿಕವಾಗಿ ಕುಗ್ಗಿಹೋಗುತ್ತಿದ್ದಾರೆ. ಬಿಬಿಎಂಪಿಯಲ್ಲಿ ಕಂದಾಯ, ಆರೋಗ್ಯ ಮತ್ತು ಇಂಜನಿಯರ್ ವಿಭಾಗಗಳಲ್ಲಿ ಅಧಿಕಾರಿ ಮತ್ತು ನೌಕರರ ವಿವಿಧ ಬೇಡಿಕೆಗಳು ಸರ್ಕಾರ ಮತ್ತು ಮುಖ್ಯ ಆಯುಕ್ತರು ಗಮನಕ್ಕೆ ಮತ್ತು ಮನವಿ ಸಲ್ಲಿಸಲಾಗಿದೆ.
ಬೆಂಗಳೂರುನಗರ ಸರ್ವತೋಮುಖ ಅಭಿವೃದ್ದಿಯಾಗಬೇಕು ಮತ್ತು ಬಿಬಿಎಂಪಿ ಅಧಿಕಾರಿಗಳ, ನೌಕರರ ಬೇಡಿಕೆಗಳು ಈಡೇರಬೇಕು, ಒತ್ತಡದ ಕೆಲಸ ನಿವಾರಣೆಯಾಗಬೇಕು ಎಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಲಾಗುತ್ತಿದೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಮಂಜೇಗೌಡ, ಆರ್.ರೇಣುಕಾಂಬ,ಎಸ್.ಜಿ.ಸುರೇಶ್, ಮಂಜುನಾಥ್, ಸಂತೋಷ್ ಕುಮಾರ್ ನಾಯ್ಕ, ಶ್ರೀಧರ್, ಸಂತೋಷ್ ಕುಮಾರ್ ರವರು ಉಪಸ್ಥಿತರಿದ್ದರು.