ಭಾರತದಲ್ಲಿ ಸಾಮರಸ್ಯ ತುಂಬಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಸಚಿವ ಸಂತೋಷ್ ಲಾಡ್ ಮನವಿ

ಬಸವಣ್ಣ ನವರ ಆಶಯದ ಸಮಸಮಾಜ ಕಟ್ಟೋಣ : ಸಂತೋಷ್ ಲಾಡ್ ಕರೆ

ಭಾರತದಲ್ಲಿ ಸಾಮರಸ್ಯ ತುಂಬಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಸಚಿವ ಸಂತೋಷ್ ಲಾಡ್ ಮನವಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಧಾರವಾಡ: ಬಸವಣ್ಣನವರ ಸಿದ್ದಾಂತಗಳ ನೆಲೆಗಟ್ಟಿನ ಮೇಲೆ ನಡೆಯುತ್ತಿರುವ ಪಕ್ಷ ಕಾಂಗ್ರೆಸ್‌. ಕಾಂಗ್ರೆಸ್‌ಗೆ ಸಿದ್ದಾಂತಗಳೇ ಮುಖ್ಯವಾಗಿದ್ದು, ದೇಶದ ಉನ್ನತಿಗಾಗಿ ಸದಾ ಕೆಲಸ ಮಾಡುವ ಪಕ್ಷ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಹೇಳಿದರು. 

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಅವರು ಇಲ್ಲಿನ ಮಾತೆ ಮಹಾದೇವಿ ಆಶ್ರಮಕ್ಕೆ ಭೇಟಿ ನೀಡಿ ಮಾತನಾಡಿದರು. 

ಬಸವಣ್ಣನವರು ಆಸೆ ಪಟ್ಟಂತೆ ಸಮಸಮಾಜದ ವ್ಯವಸ್ಥೆ ಬರಬೇಕು ಎಂಬುದು ನಮ್ಮ ಅಭಿಲಾಷೆ. ಬಿಜೆಪಿಯವರು ಹಿಂದೂತ್ವದ ಬಗ್ಗೆ ಮಾತನಾಡಿ ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ. ಇದನ್ನು ಸರಿ ಮಾಡಲು ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಆ ಅಧಿಕಾರವನ್ನು ಜನರೇ ಕೊಡಿಸಬೇಕು ಎಂದು ಹೇಳಿದರು. 

ಸೂಫಿ, ಸಂತರನ್ನು ಮುಗಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಅವರಲ್ಲಿ ಯಾವ ತತ್ವ ಮತ್ತು ಸಿದ್ದಾಂತಗಳೂ ಈಗ ಉಳಿದಿಲ್ಲ. ಓಟಿಗಾಗಿ ರಾಮನನ್ನು ಹೊಗಳುತ್ತಾರೆ. ನಾಳೆ ಓಟು ಸಿಗುತ್ತೆ ಎಂದಾದರೆ ಮತ್ತೊಬ್ಬರನ್ನೂ ಹೊಗಳುತ್ತಾರೆ. ಒಟ್ಟಾರೆ ಅವರಿಗೆ ಓಟೇ ಮುಖ್ಯ. ರಾಮನ ಮೇಲೆ ಅವರಿಗೆ ಯಾವ ಭಕ್ತಿಯೂ ಇಲ್ಲ ಎಂದು ಲೇವಡಿ ಮಾಡಿದರು. 

ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರ ತತ್ವಗಳನ್ನು ಪಾಲಿಸುವ ಕಾಂಗ್ರೆಸ್‌ ಪಕ್ಷಕ್ಕೆ ಜನರ ಬೆಂಬಲ ಬೇಕಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠವನ್ನು ಜನರೇ ಕಲಿಸಲಿದ್ದಾರೆ. ವಿಶ್ವಗುರು ಬಸವಣ್ಣನವರ ಆಶಯದಂತೆ ಸಮಾನ ಅವಕಾಶದ ಸಮಾಜವನ್ನು ಕಟ್ಟೋಣ ಎಂದು ಆಶಯ ವ್ಯಕ್ತಪಡಿಸಿದರು.