ಬೆಂಗಳೂರಿನ ಪಿಜಿಗಳಿಗೆ ಪೊಲೀಸರಿಂದ ಮಾರ್ಗ ಸೂಚಿ ಪ್ರಕಟ

New guidelines for Bangalore PGs by cops

ಬೆಂಗಳೂರಿನ ಪಿಜಿಗಳಿಗೆ ಪೊಲೀಸರಿಂದ ಮಾರ್ಗ ಸೂಚಿ ಪ್ರಕಟ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಕಳೆದ ತಿಂಗಳು ಕೋರಮಂಗಲದಲ್ಲಿ ನಡೆದಿದ್ದ ಕೃತಿ ಕುಮಾರಿಯ ಭೀಕರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ನಗರ ಪೊಲೀಸರು ಪಿಜಿಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ನಗರದ ಎಲ್ಲಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ನಗರದ ಪಿಜಿಗಳ ಮಾಹಿತಿ ಸಂಗ್ರಹಿಸುವಂತೆ ಹಾಗೂ ಪಿಜಿಗಳ ಪಾಲಿಸಬೇಕಾದ ಒಟ್ಟು ఒట్టు 13 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.

ಮಾರ್ಗಸೂಚಿ: ಪಿಜಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಬೇಕು, ಪಿಜಿಯಲ್ಲಿ ವಾಸ ಮಾಡುವ ಪ್ರತಿಯೊಬ್ಬರ ಸಂಗ್ರಹಿಸಬೇಕು ಹಾಗೂ ಕೆವೈಸಿ ಮಾಡಿಸಬೇಕು, ಹೊಸದಾಗಿ ಸಾಫ್ಟ್‌ವೇರ್‌ನಲ್ಲಿ ಜಾರಿಗೆ ತಂದಿರೋ ఎల్లా ಮಾಹಿತಿ ಅಪ್ಲೋಡ್ ಮಾಡಬೇಕು, ಮಾಲೀಕರು

ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಆಹಾರದ ಗುಣಮಟ್ಟದ ಬಗ್ಗೆ ಮಾಲೀಕರು ಗಮನಹರಿಸಬೇಕು, ಪಿಜಿಗಳ ಟ್ರೇಡ್ ಲೆಸೆನ್ಸ್‌ ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು, ಅನಧಿಕೃತ ಎಂದು ಕಂಡು ಬಂದ್ರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು, ಅಕ್ರಮ, ಅನೈತಿಕ ಚಟುವಟಿಕೆ ನಡೆಯುತ್ತಿದ್ರೆ, ಮಾಹಿತಿ ಕಲೆಹಾಕಬೇಕು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಪ್ರಕರಣ ದಾಖಲಿಸಿಬೇಕು, ತಿಂಗಳಿಗೊಮ್ಮೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳ ಪರಿಶೀಲನೆ ಮಾಡಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದಾರೆ.

ಒಟ್ಟಾರೆ ಪೊಲೀಸರ ಈ ಹೊಸ ನಿಯಮಗಳು ಮುಂದಿನ ದಿನಗಳ ಯಾವ ಜಾರಿಯಾಗಲಿದೆ ಪಿಜಿಗಳಲ್ಲಿ ಸುರಕ್ಷತಾ ಕ್ರಮ ಎಷ್ಟರ ಮಟ್ಟಿಗೆ ಇರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.