ಪಂಜಾಬ್ ನ ಹೊಷಿಯಾರ್ ಪುರದಲ್ಲಿ ವಿಶ್ವದ ಅತ್ಯಂತ ದೊಡ್ಡ ಏಕೀಕೃತ ಟ್ರಾಕ್ಟರ್ ಉತ್ಪಾದನಾ ಸೌಲಭ್ಯ
ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾಕ್ಟರ್ಸ್ ಪಂಜಾಬ್ ರಾಜ್ಯದಲ್ಲಿ ಮುಂಚೂಣಿಯ ಒಇಎಂಗಳಲ್ಲಿ ಒಂದಾಗಿದೆ ಮತ್ತು ಈಗಾಗಲೇ ತನ್ನ ಅತ್ಯಂತ ದೊಡ್ಡ ಉತ್ಪಾದನಾ ಘಟಕದಿಂದ ಹೊಷಿಯಾರ್ ಪುರವನ್ನು ವಿಶ್ವದ ಭೂಪಟದಲ್ಲಿ ಸ್ಥಾನ ಒದಗಿಸಿದೆ. ಕಂಪನಿಯು ರಾಜ್ಯದಲ್ಲಿ ಎರಡು ಹೊಸ ಘಟಕಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪಂಜಾಬ್ ಮುಖ್ಯಮಂತ್ರಿ ಶ್ರೀ ಭಗವಂತ್ ಮನ್ನ್ ನೆರವೇರಿಸಿದರು. ಕಳೆದ ವರ್ಷ ಹೊಸ ಸುತ್ತಿನ ಹೂಡಿಕೆಯನ್ನು ತರಲು ತನ್ನ ಬದ್ಧತೆಗೆ ಪೂರಕವಾಗಿ ಸೊನಾಲಿಕಾ ಹೊಸ ಟ್ರಾಕ್ಟರ್ ಜೋಡಣೆ ಘಟಕ ಪ್ರಾರಂಭಿಸಲು ರೂ.1000 ಕೋಟಿ ಹೂಡಿಕೆ ಮಾಡಲಿದೆ ಮತ್ತು ಹೆಚ್ಚುವರಿಯಾಗಿ ಹೊಸ ಹೈ-ಪ್ರೆಷರ್ ಫೌಂಡ್ರಿ ಪ್ರಾರಂಭಿಸಲು ರೂ.300 ಕೋಟಿ ಹೂಡಿಕೆ ಮಾಡಲಿದೆ.
ಮುಖ್ಯಮಂತ್ರಿ ಮನ್ನ್ ಹೊಷಿಯಾರ್ ಪುರದಲ್ಲಿ ಸೊನಾಲಿಕಾ ಗ್ರೂಪ್ ನ ದೂರದೃಷ್ಟಿಯ ವಿಸ್ತರಣೆಯ ಯೋಜನೆಗೆ ಚಾಲನೆ ನೀಡಿದ್ದು ಇದು ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲಾಗಿದೆ. ಈ ಅತ್ಯಾಧುನಿಕ ಟ್ರಾಕ್ಟರ್ ಜೋಡಣೆ ಸೌಲಭ್ಯವು ಸೊನಾಲಿಕಾ ಸಮೂಹದ ರಫ್ತು ಬದ್ಧತೆಗಳಿಗೆ ಮೀಸಲಾಗಿದೆ ಮತ್ತು ಪೂರ್ಣ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಹೆಚ್ಚುವರಿ 1 ಲಕ್ಷ ಟ್ರಾಕ್ಟರ್ ಗಳಿಗೆ ವಾರ್ಷಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ. ಡಿ.ಆರ್.ಎ.ಎಸ್. ಹೈ ಪ್ರೆಷರ್ ಫೌಂಡ್ರಿ ಘಟಕವು ಸಿದ್ಧವಾದ ನಂತರ ಅತ್ಯಂತ ದೊಡ್ಡ ಕ್ಯಾಸ್ಟಿಂಗ್ ಘಟಕವಾಗಲಿದೆ. ಈ ಘಟಕವನ್ನು 150ಕ್ಕೂ ಹೆಚ್ಚು ದೇಶಗಳಿಗೆ ಸೊನಾಲಿಕಾದ ಹೆಜ್ಜೆ ಗುರುತನ್ನು ದಕ್ಷತೆಯಿಂದ ವಿಸ್ತರಿಸಲು ನೆರವಾಗುತ್ತದೆ.
ಸೊನಾಲಿಕಾ ಟ್ರಾಕ್ಟರ್ಸ್ ಉಪಾಧ್ಯಕ್ಷ ಡಾ.ಅಮೃತ್ ಸಾಗರ್ ಮಿಟ್ಟಲ್, “ಸೊನಾಲಿಕಾದ ಹೊಷಿಯಾರ್ ಪುರದ ಹೊಸ ಹೂಡಿಕೆಗಳ ಸುತ್ತು ವಿಶ್ವದ ಅತ್ಯಂತ ದೊಡ್ಡ ಟ್ರಾಕ್ಟರ್ ಉತ್ಪಾದನಾ ಘಟಕದ ಹೆಮ್ಮೆಯ ಮಾಲೀಕರಾಗಿ ನಮ್ಮ ಸ್ಥಾನವನ್ನು ಸದೃಢಗೊಳಿಸಲಿದೆ. ಸರ್ಕಾರದ ಬೆಂಬಲವು ಪಂಜಾಬ್ ನಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಿಂಗಲ್ ವಿಂಡೋ ಮಾರ್ಗದ ಮೂಲಕ ಬೆಂಬಲಿಸುತ್ತಿದೆ. ಖಾಸಗಿ ವಲಯ ಮತ್ತು ಸರ್ಕಾರದ ನಡುವೆ ಈ ಸಹಯೋಗದ ಪ್ರಯತ್ನಗಳು ಉದ್ಯಮದ ಪ್ರಗತಿ ಮತ್ತು ಆವಿಷ್ಕಾರಕ್ಕೆ ಪೂರಕ ವಾತಾವರಣ ಕಲ್ಪಿಸಲಿವೆ” ಎಂದರು.
ಸೊನಾಲಿಕಾ ಟ್ರಾಕ್ಟರ್ಸ್ ಡೆವಲಪ್ ಮೆಂಟ್ ಅಂಡ್ ಕಮರ್ಷಿಯಲ್ ನಿರ್ದೇಶಕ ಶ್ರೀ ಅಕ್ಷಯ್ ಸಂಗ್ವಾನ್, “ನಮ್ಮ ಹೆವಿ-ಡ್ಯೂಟಿ ಟ್ರಾಕ್ಟರ್ ಶ್ರೇಣಿಯು ಗುಣಮಟ್ಟ ಮತ್ತು ವಿಸ್ತರಣೆಯ ದೃಷ್ಟಿಯಲ್ಲಿ ಪ್ರಮುಖ ಉತ್ತೇಜನ ಪಡೆಯಲಿದ್ದು ನಮ್ಮ ಕ್ಯಾಸ್ಟಿಂಗ್ ಘಟಕವು ವಾರ್ಷಿಕ 1 ಲಕ್ಷ ಮೆಟ್ರಿಕ್ ಟನ್ ಮೇಲ್ಪಟ್ಟು ಕರಗಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಜರ್ಮನಿಯ ನಿರ್ಮಾಣದ ಕುಂಕೆಲ್ ವ್ಯಾಗ್ನರ್ ಹೈ-ಪ್ರೆಷರ್ ಮೌಲ್ಡಿಂಗ್ ಲೈನ್ ಹೊಂದಿರುವ ಡಿ.ಆರ್.ಎ.ಎಸ್. ಅತ್ಯುತ್ತಮ ಗುಣಮಟ್ಟದ ಕ್ಯಾಸ್ಟಿಂಗ್ ಮೂಲಕ ಟ್ರಾಕ್ಟರ್ ಗಳ ಗುಣಮಟ್ಟ ಹೆಚ್ಚಿಸಲು ಸಜ್ಜಾಗಿದೆ” ಎಂದರು.
ಮುಖ್ಯಮಂತ್ರಿ ಮನ್ನ್ ಹೊಸ ಟ್ರಾಕ್ಟರ್ ಉತ್ಪಾದನಾ ಘಟಕದಲ್ಲಿ ಸಂಚರಿಸಿದರು ಮತ್ತು ಪ್ರತಿ 2 ನಿಮಿಷಕ್ಕೆ ಹೊಸ ಟ್ರಾಕ್ಟರ್ ಉತ್ಪಾದಿಸುವ ಸಾಮರ್ಥ್ಯ ವೀಕ್ಷಿಸಿದರು.