ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣ ಪರಿಷತ್ ವತಿಯಿಂದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಸಮಾರಂಭ

Nadaprabhu Kempegowda's 515th Jubilee Ceremony by Karnataka State Okkaligara Hitrarakshan Parishad

ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣ ಪರಿಷತ್ ವತಿಯಿಂದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಸಮಾರಂಭ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಅಂದಿನ ವಿಜಯನಗರ ಸಾಮ್ರಾಜ್ಯದಲ್ಲಿ ಹಲವು ಸವಲತ್ತುಗಳೊಂದಿಗೆ ಬೆಂಗಳೂರು ಶ್ರೇಷ್ಠನಗರ ಎಂಬ ಖ್ಯಾತಿಗಳಿಸಿಕೊಂಡಿದ್ದರೆ ಅದು ನಾಡಪ್ರಭು ಕೆಂಪೇಗೌಡ ಅವರ ಅವಿರತ ಪರಿಶ್ರಮವೇ ಮೂಲ ಕಾರಣ ಎಂಬುದನ್ನು ನಾವು ಎಂದಿಗೂ ಮರೆಯಬಾರದು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣ ಪರಿಷತ್ ವತಿಯಿಂದ ಕಬ್ಬನ್‌ಪಾರ್ಕ್‌ ಎನ್‌ಜಿಓ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಸಾಮಂತ ರಾಜರಲ್ಲಿ ಕೆಂಪೇಗೌಡರ ಅದ್ಭುತ ಕಾರ್ಯಗಳು ಆವಿಸ್ಮರಣೀಯವಾದಂತಹವುಗಳು ಎಂದು ಹೇಳಿದರು. ಒಂದು ಸುಸಜ್ಜಿತ ನಗರಕ್ಕೆ ಬೇಕಾದ ಎಲ್ಲಾ ತರಹದ ಸೌಲಭ್ಯಗಳನ್ನು ಓದಗಿಸಿ ಆ ಮೂಲಕ ಜನಪ್ರದೇಶವು ಕ್ರಿಯಾತ್ಮಕವಾಗಿ ಬೆಳವಣಿಗೆ ಸಾಧಿಸಲು ಕಾರಣಕರ್ತರಾದವರು ಕೆಂಪೇಗೌಡರು ಎಂಬುದು ಗಮನಾರ್ಹ. ನಗರಕ್ಕೆ ಅವಶ್ಯಕವೆನಿಸುವ ಎಲ್ಲಾ ಮಾರುಕಟ್ಟೆಗಳನ್ನು ಸ್ಥಾಪಿಸಿ ಆ ಮೂಲಕ ವ್ಯಾಪಾರ ಚಟುವಟಿಕೆಗಳಿಗೂ ಆದ್ಯತೆ ನೀಡಿದರು. ಜೊತೆಗೆ ಸಾಕಷ್ಟು ಕೆರೆಗಳನ್ನು ನಿರ್ಮಿಸುವ ಮೂಲಕ ಮಾದರಿಯಾದವರು. ಸಾಕಷ್ಟು ದೇವಾಲಯಗಳ ನಿರ್ಮಾಣಕ್ಕೂ ಕೆಂಪೇಗೌಡರು ಕಾರಣಕರ್ತರಾದರು. ಜೊತೆಗೆ ಹಲವು ಧರ್ಮಗಳಿಗೂ ಪ್ರಾಧ್ಯಾನತೆ ನೀಡಿ. ಭಾವೈಕ್ಯತೆ ಮೆರೆದಿದ್ದರು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣಾ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಪರಿಸರವಾದಿ ಡಾ.ನಂದಿದುರ್ಗ ಬಾಲುಗೌಡು ಮಾತನಾಡಿ, ಕೆಂಪೇಗೌಡರು ಮಾಡಿದು ಅಭಿವೃದ್ಧಿ ಚಟುವಟಿಕೆಗಳನ್ನು ನಾವು ಮತ್ತೆ ಮತ್ತೆ ಪುನರ್‌ಮನನ ಮಾಡಿಕೊಳ್ಳಬೇಕು. ಜೊತೆಗೆ ಅವರ ಕೈಂಕಾರ್ಯಗಳು ಇಂದಿಗೂ ಪ್ರಸ್ತುತ ಎಂಬುದನ್ನು ನಾವುಗಳು ಶಾಲಾ- ಕಾಲೇಜುಗಳಲ್ಲಿ ಮನವರಿಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ರಾಜ್ಯ ಯುವಚೇತನ ಯುವಜನ ಕೇಂದ್ರದ ಉಪಾಧ್ಯಕ್ಷ ಡಾ.ಹಿತೇಶ್ ಅರುಣ್ ಎಸ್, ಡಾ.ಕೃಪಾ ಎಸ್.ಶಂಕರ್, ಎಂ.ಎನ್.ನಟರಾಜ್, ಎಸ್.ಬಾಲಾಜಿ, ಪರಿಷತ್ ಪ್ರಧಾನ ಕಾರ್ಯದರ್ಶಿ ಕಾಡಿನಮಿತ್ರ ನಿಸರ್ಗ, ಮಹೇಶ್ವರಿ ಪಟೇಲ್ ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಶಾಲಾ– ಕಾಲೇಜು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.