ಎಚ್‌ಡಿ ದೇವೇಗೌಡರಿಗೆ ಮೋದಿ ಕರೆ ಯೋಗಕ್ಷೇಮದ ವಿಚಾರಣೆ

Modi calls HD Deve Gowda to inquire about his welfare

ಎಚ್‌ಡಿ ದೇವೇಗೌಡರಿಗೆ ಮೋದಿ ಕರೆ ಯೋಗಕ್ಷೇಮದ ವಿಚಾರಣೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಕರೆ ಮಾಡಿದ ಪ್ರಧಾನಿ ನರೇಂದ್ರಮೋದಿ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವಿಷಯವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ದೇವೇಗೌಡರು, ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ನರೇಂದ್ರಮೋದಿ ಅವರು ತಮಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರಲ್ಲದೆ ಹೊಸ ಸರ್ಕಾರದ ಆಲೋಚನೆಗಳು ಮತ್ತು ಚಿಂತನೆಗಳನ್ನು ತಮ್ಮೊಂದಿಗೆ ಹಂಚಿಕೊಂಡರೆಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರ ಈ ಕಾಳಜಿಗೆ ತಾವು ಅವರಿಗೆ ಅಭಾರಿಯಾಗಿರುವುದಾಗಿ ಹೇಳಿಕೊಂಡಿರುವ ದೇವೇಗೌಡರು, ಮೋದಿ ಮಾತು ತಮ್ಮನ್ನು ಭಾವುಕವಾಗಿಸಿದೆ. ಭಾರತವನ್ನು ವೈಭವದ ಅಂಚಿಗೆ ಕರೆದೊಯ್ದಲು ಆ ಭಗವಂತನು ಅವರಿಗೆ ಸಕಲ ಶಕ್ತಿ ಹಾಗೂ ಆರ್ಶೀವಾದ ನೀಡಬೇಕೆಂದು ಹಾರೈಸಿದ್ದಾರೆ.