ದೆಹಲಿ ಮಾದರಿ ರೀತಿಯಲ್ಲಿ ರಾಜ್ಯದಲ್ಲಿಯೂ ಆಟೋ ಚಾಲಕರುಗಳಿಗೆ ಉಚಿತ ವಿಮೆ ಹಾಗೂ ಮಕ್ಕಳಿಗಾಗಿ ಉಚಿತ ಕೋಚಿಂಗ್ ಸೌಲಭ್ಯ ಕಲ್ಪಿಸಲು ಆಮ್ ಆದ್ಮಿ ಪಕ್ಷ ದಿಂದ ಒತ್ತಾಯ
ಬೆಂಗಳೂರು: ದೆಹಲಿ ಸರ್ಕಾರ ಘೋಷಿಸಿರುವ ರಾಜ್ಯದಲಿನ ಆಟೋ ಚಾಲಕರುಗಳಿಗೆ ಉಚಿತ 10 ಲಕ್ಷ ರೂಗಳ ವಿಮೆ, 5 ಲಕ್ಷ ರೂಗಳ ಅಪಘಾತ ವಿಮೆ, ಆಟೋ ಚಾಲಕರ ಹೆಣ್ಣು ಮಕ್ಕಳ ಮದುವೆಗೆ ಒಂದು ಲಕ್ಷ ರೂಗಳ ಧನಸಹಾಯ,ಯೂನಿಫಾರಂ ಖರೀದಿಗಾಗಿ 2500 ರೂಪಾಯಿಗಳ ಧನಸಹಾಯ, ಆಟೋ ಚಾಲಕರುಗಳಿಗಾಗಿ ಸರ್ಕಾರಿ ದಿಂದಲೇ ಪ್ರತ್ಯೇಕ ಮೊಬೈಲ್ ಯ್ಯಪ್ ಹಾಗೂ ಆಟೋ ಚಾಲಕರುಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ಕೋಚಿಂಗ್ ವ್ಯವಸ್ಥೆ ಗಳನ್ನು ರಾಜ್ಯದಲ್ಲಿಯೂ ಕೂಡಲೇ ಜಾರಿಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಆಟೋ ಘಟಕದ ರಾಜ್ಯಾಧ್ಯಕ್ಷ ಅಯುಬ್ ಖಾನ್, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ನಾರಾಯಣಗೌಡ ಸೇರಿದಂತೆ ನಿಯೋಗ ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿ ರವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಮಂತ್ರಿಗಳು ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಎಲ್ಲ ಸಂಘಟನೆಗಳ ಸಭೆಯನ್ನು ಆಯೋಜಿಸಿ ಜಾರಿಗೆ ತರುವಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಆಯುಬ್ ಖಾನ್ ಸುದ್ದಿಗಾರರೊಂದಿಗೆ ತಿಳಿಸಿದರು. ಇದೆ ಸಂದರ್ಭದಲ್ಲಿ ಪೀಸ್ ಆಟೋ ಸಂಘಟನೆಯ ರಘು ಮತ್ತು ಅತಿಕ್ ಅಹಮದ್ ಮಾತನಾಡಿ ಅರವಿಂದ್ ಕೇಜ್ರಿವಾಲ್ ರವರ ದೆಹಲಿ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಬಹಳ ವರ್ಷಗಳಿಂದ ಆಟೋ ಚಾಲಕರು ಹಾಗೂ ಅವರ ಕುಟುಂಬಗಳಿಗೆ ಯಾವುದೇ ಸರ್ಕಾರಗಳು ಜೀವನವನ್ನು ರೂಪಿಸಿಕೊಳ್ಳುವಂತಹ ಈ ರೀತಿಯ ಮಹತ್ವದ ಯೋಜನೆಗಳನ್ನು ಮಾಡಿಲ್ಲ ಈಗಲಾದರೂ ಕಾಂಗ್ರೆಸ್ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.