ಬಿಕೆ ಹರಿಪ್ರಸಾದ್ ಅವರು ಪೇಜಾವರ ಶ್ರೀಗಳ ವಿರುದ್ಧ ನೀಡಿರುವ ಹೇಳಿಕೆ ಅತ್ಯಂತ ಖಂಡನಾರ್ಹ : ಶಾಸಕ ಎಲ್.ಎ ರವಿ ಸುಬ್ರಹ್ಮಣ್ಯ

ಬೆಂಗಳೂರು : ಬಿಕೆ ಹರಿಪ್ರಸಾದ್ ಅವರು ಪೇಜಾವರ ಶ್ರೀಗಳ ವಿರುದ್ಧ ನೀಡಿರುವ ಹೇಳಿಕೆ ಅತ್ಯಂತ ಖಂಡನಾರ್ಹ ಎಂದು ಶಾಸಕ ಎಲ್ ಎ ರವಿ ಸುಬ್ರಹ್ಮಣ್ಯ ರವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಬ್ಬ ಯತಿಗಳ ವಿಚಾರದಲ್ಲಿ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದು ಆಸ್ತಿಕ ಬಾಂಧವರಲ್ಲಿ ಅವರ ಭಾವನೆಗಳಿಗೆ ಧಕ್ಕೆ ತರುವಂತಿದೆ ಒಬ್ಬ ಪ್ರಭುದ್ಧ ರಾಜಕಾರಣಿಯಾಗಿ ಸಮಾಜದ ಭಾವನೆಗಳನ್ನು ಅರ್ಥ ಮಾಡಿಕೊಂಡು ಯತಿಗಳಿಗೆ ಕೊಡುವ ಗೌರವವನ್ನು ಹರಿಪ್ರಸಾದ್ ಅವರು ಕೊಡುವುದನ್ನು ಕಲಿಯಲಿ ಬೇಶರತ್ ಕ್ಷಮೆಯನ್ನು ಯಾಚಿಸುವ ಮೂಲಕ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದುಶಾಸಕ ಎಲ್ ಎ ರವಿ ಸುಬ್ರಹ್ಮಣ್ಯ ರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.