ಕನ್ನಡ ಭಾಷೆಯ ಬಗ್ಗೆ ಪ್ರತಿಯಾಬ್ಬರೂ ಅಭಿಮಾನ ಹೊಂದಿರಬೇಕು : ಸರ್ವೋತ್ತಮ ಶೆಟ್ಟಿ
Everyone should have admiration for Kannada language: Sarvottama Shetty
ಬೆಂಗಳೂರು : ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಹರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗು ಹೋಗುಗಳ ಬಗ್ಗೆ ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು ಎಂದು ಅಬುಧಬಿಯ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ರವರು ಹೇಳಿದರು.
ಹೃದಯವಾಹಿನಿ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸರ್ವೋತ್ತಮ ಶೆಟ್ಟಿ ರವರು ಸಮ್ಮೇಳನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿ ಕನ್ನಡ ಭಾಷೆಯ ಬಗ್ಗೆ ಪ್ರತಿಯಾಬ್ಬರೂ ಅಭಿಮಾನ ಹೊಂದಿರಬೇಕು ಕನ್ನಡಿಗರೆಲ್ಲರನ್ನೂ ಒಂದು ಭಾವದಲ್ಲಿ ಬೆಸೆಯುವ ಇಂತಹ ಸಮ್ಮೇಳನಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಅನಿವಾಸಿ ಕನ್ನಡಿಗರು ಮಾತೃಭಾಷೆಯ ಬಗ್ಗೆ ಹೊಂದಿರುವ ಅಭಿಮಾನದಿಂದ ಸ್ವದೇಶದಿಂದ ದೂರವಿದ್ದೂ ಕನ್ನಡದ ಕೆಲಸ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವವರನ್ನು ಕರೆತಂದು ಪುರಸ್ಕರಿಸುವ ಹೃದಯವಾಹಿನಿ ಪತ್ರಿಕೆಯ ಸಂಪಾದಕ ಕೆ.ಪಿ.ಮಂಜುನಾಥ್ ಸಾಗರ್ ಅವರ ಸೇವೆ ಶ್ಲಾಘನೀಯ ಎಂದರು.
ಈ ಸಮ್ಮೇಳನದಲ್ಲಿ ಸಮಾಜಕ್ಕೆ ಹಾಗೂ ಕನ್ನಡ ಮಾತೃಭಾಷೆಗಾಗಿ ಉತ್ತಮ ಸೇವೆ ಸಲ್ಲಿಸಿದ ಅನಿವಾಸಿ ಕನ್ನಡಿಗರಿಗೆ ನವ ಕರ್ನಾಟಕ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಈ ವೇಳೆ ಲಿಖಿತ ರಸಪ್ರಶ್ನೆ, ಕವನ ರಚನಾ ಸ್ಪರ್ಧೆ, ಅನಿವಾಸಿ ಕನ್ನಡಿಗರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ, ಡೊಳ್ಳು ಕುಣಿತ, ರಸಮಂಜರಿ, ವಾದ್ಯಗೋಷ್ಠಿ, ಹಾಸ್ಯ, ಜಾದು ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಹೃದಯವಾಹಿನಿ ಪತ್ರಿಕೆಯ ಕೆ.ಪಿ.ಮಂಜುನಾಥ್ ಸಾಗರ್, ಗೌರವಾಧ್ಯಕ್ಷರಾದ ರೊ. ಕಡಬಂ ರಮೇಶ್, ಡಾಕ್ಟರ್ ಎಸ್ ರಾಮಾನುಜ, ಅಶ್ರಫ್ ಷಾ ಮಂತೂರು, ಮೊಹಮ್ಮದ್ ರಫಿ ಪಾಷ ಸೇರಿದಂತೆ ಇತರರು ಉಪಸ್ಥಿತರಿದ್ದರು.