ಓಟಿಎಸ್ ಮೂಲಕ ತೆರಿಗೆ ಪಾವತಿಗೆ ಸೆ.30ರ ತನಕ ಅವಕಾಶ ವಿಸ್ತರಣೆ
Extension of opportunity for payment of tax through OTS till September 30
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ.
ನಿಜ, ಓಟಿಎಸ್ ಮೂಲಕ ತೆರಿಗೆ ಪಾವತಿಗೆ ಸೆ.30ರ ತನಕ ಅವಕಾಶ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಅಧಿಕೃತ ಆದೇಶ ಹೊರಡಿಸಿವೆ. ಈ ಹಿಂದೆ ಜು.31ರ ತನಕ ಮಾತ್ರ ಡೆಡ್‌ಲೈನ್ ನೀಡಿದ್ದರು. ತೆರಿಗೆದಾರರಿಂದ ವಿಸ್ತರಣೆಗೆ ಮನವಿ ಹಿನ್ನೆಲೆಯಲ್ಲಿ ಒಂದು ತಿಂಗಳು ವಿಸ್ತರಣೆ ಚಿಂತನೆ ನಡೆದಿತ್ತು.
ಇದೀಗ 2 ತಿಂಗಳವರೆಗೆ ಒಟಿಎಸ್ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯಂತೆ ವಿಸ್ತರಣೆ ಮಾಡಲಾಗಿದೆ. ಸೆ.30ರ ತನಕ ಆಸ್ತಿ ತೆರಿಗೆ ಬಾಕಿ ಪಾವತಿಗೆ ಅವಕಾಶ ಕೊಟ್ಟ ಪಾಲಿಕೆ ತದನಂತರ ವಿಸ್ತರಣೆ ಇಲ್ಲ ಎಂದಿದೆ. ಒಟಿಎಸ್ ಅವಕಾಶದಲ್ಲಿ ತೆರಿಗೆ ಮೇಲಿನ ಸಂಪೂರ್ಣ ಬಡ್ಡಿಮನ್ನಾ ಜೊತೆಗೆ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಪಾಲಿಕೆ ನೀಡಿದೆ.
ಬೆಂಗಳೂರು ನಗರ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವನ್ನು ಸುಗಮಗೊಳಿಸಲು ಮತ್ತೆ ಆದಾಯವನ್ನು ಹೆಚ್ಚಿಸಲು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಎಂದಿಗೂ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರದ ಆಯ್ಕೆಯನ್ನು ಅವರು ಈ ಯೋಜನೆಯ ಅಡಿಯಲ್ಲಿ ಘೋಷಿಸಿದ್ದರು.
ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಪಾವತಿ ವಿಂಡೋವನ್ನು ಈ ವರ್ಷ ಏ.30ರಿಂದ ಜು.31ರವರೆಗೆ ವಿಸ್ತರಸಲಾಗಿತ್ತು. ಜು.31ರ ಗಡುವು ಮೀರಿದ ಬಳಿಕ ಅವಧಿ ವಿಸ್ತರಣೆಗೆ ತೆರಿಗೆ ಪಾವತಿ ಬಾಕಿದಾರರಿಂದ ಒತ್ತಾಯ ಬಂದಿತ್ತು.