ಸೇವೆ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಬಿಬಿಎಂಪಿ ಜನಸ್ನೇಹಿ ನೌಕರ ರಾಮಚಂದ್ರರಾವ್ ರವರಿಗೆ ಗೌರವ ಸನ್ಮಾನ

ಸೇವೆ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಬಿಬಿಎಂಪಿ ಜನಸ್ನೇಹಿ ನೌಕರ ರಾಮಚಂದ್ರರಾವ್ ರವರಿಗೆ ಗೌರವ ಸನ್ಮಾನ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಕಾರ್ಯಾಲಯದಲ್ಲಿ ಕಾರ್ಯನಿರ್ಹಿಸುತ್ತಿರುವ ರಾಮಚಂದ್ರರಾವ್ ರವರ 24ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದು ಈ ಶುಭ ಸಂದರ್ಭದಲ್ಲಿ ಕೌನ್ಸಿಲ್ ಕಾರ್ಯದರ್ಶಿ ಎಸ್.ಕೆ.ರಾಮೇಗೌಡರು, ಆಡಳಿತಾಧಿಕಾರಿ ವಿಶೇಷಾಧಿಕಾರಿ ನಾರಾಯಣಸ್ವಾಮಿ, ಅಪ್ತ ಕಾರ್ಯದರ್ಶಿ ಜೈರಾಜ್ ಮತ್ತು ಕಂದಾಯ ಅಧಿಕಾರಿ ಸುರೇಶ್ ವಿಶೇಷಧಿಕಾರಿ ಮಲ್ಲಿಕಾರ್ಜುನ್ ರವರು ರಾಮಚಂದ್ರರಾವ್ ರವರನ್ನು ಗೌರವಿಸಿ ಸನ್ಮಾನಿಸಿದರು. ರಾಮಚಂದ್ರರಾವ್ ರವರು ಬಿಬಿಎಂಪಿಯಲ್ಲಿ 24ವರ್ಷ ಸೇವೆ ಸಲ್ಲಿಸಿದ್ದು ಜನಸ್ನೇಹಿ ನೌಕರ ಎಂದು ಖ್ಯಾತಿ ಗಳಿಸಿದ್ದಾರೆ.

ಮಾಜಿ ಮಹಾಪೌರರುಗಳಾದ ಕಟ್ಟೆ ಸತ್ಯನಾರಾಯಣ್, ಮಂಜುನಾಥ್ ರೆಡ್ಡಿ, ಜಿ.ಪದ್ಮಾವತಿ, ಗೌತಮ್ ಕುಮಾರ್ ಮತ್ತು ಆಡಳಿತ ಪಕ್ಷದ ನಾಯಕರುಗಳಾದ ಎನ್.ಆರ್.ರಮೇಶ್ ಎನ್.ನಾಗರಾಜು ರವರ ಕಛೇರಿಯಲ್ಲಿ ಉತ್ತಮ ಕಾರ್ಯನಿರ್ವಹಣೆಯಿಂದ ರಾಮಚಂದ್ರರಾವ್ ರವರು ಹೆಸರಗಳಿಸಿದ್ದರು.

ಕೌನ್ಸಿಲ್ ಕಾರ್ಯದರ್ಶಿ ರಾಮೇಗೌಡರವರು ಮಾತನಾಡಿ ರಾಮಚಂದ್ರರಾವ್ ಸ್ನೇಹಮಯಿ, ಅಧಿಕಾರಿಗಳ ಮತ್ತು ಜನರ ನಡುವೆ ಉತ್ತಮ ಸಂಪರ್ಕವಿತ್ತು. ಸದಾ ಅಧಿಕಾರಿ ನೌಕರರ ಜನರ ಹಿತ ಬಯಸುವ ವ್ಯಕ್ತಿತ್ವದವರು. ನಿವೃತ್ತಿಯಾದರು ಜೀವನದಲ್ಲಿ ಸಂತೋಷಮಯವಾಗಿ ಸದಾ ಯುವಕರಂತೆ ಜೀವನ ಸಾಗಿಸಲಿ ಎಂದು ಹೇಳಿದರು.

ನಾರಾಯಣಸ್ವಾಮಿರವರು ಮಾತನಾಡಿ ಕಳೆದ 15ವರ್ಷಗಳಿಂದ ರಾಮಚಂದ್ರರಾವ್ ರವರ ಸೇವೆ ಮಾಡುವುದನ್ನ ಗಮನಿಸಿದ್ದೇನೆ, ಎಲ್ಲರ ನಡುವೆ ಸ್ನೇಹಮಯವಾಗಿದ್ದರು. ಕೆಲಸದಲ್ಲಿ ತಾಳ್ಮೆ, ಮುಖದಲ್ಲಿ ನಗು ಇವರು ಜೀವನಪೂರ್ತಿ ಆಳವಡಿಸಿಕೊಂಡಿದ್ದರು ಇದೇ ಅವರ ಯಶ್ವಸಿಗೆ ಕಾರಣವಾಯಿತು. ಅಧಿಕಾರಿ ಮತ್ತು ನೌಕರರ ಮತ್ತು ಜನರ ನಡುವೆ ಉತ್ತಮ ಒಡನಾಟ ಮತ್ತು ಜನಸ್ನೇಹಿ ವಾತವರಣವನ್ನು ರಾಮಚಂದ್ರರಾವ್ ರವರು ಇವರ ಕಡೆ ಇರುತ್ತಿತ್ತು. ಆದ್ದರಿಂದ ಅವರು ರಾಜಕಾರಣಿಗಳು, ಜನರ ಪ್ರೀತಿಪಾತ್ರರಾದರು.

ಕೌನ್ಸಿಲ್ ಕಾರ್ಯಾಲಯದ ವೀರಸ್ವಾಮಿ, ರಾಜೇಶ್ವರಿ, ದಕ್ಷಿಣಮೂರ್ತಿ, ವಿಜಯಬಾಯಿ, ನಿರ್ಮಲ, ವಿಜಯ, ಲತಾ, ದಿವಾಕರ್, ನವೀನ್,ಪುಷ್ಪ , ರವಿ,ರಮೇಶ್, ಶಶಿಕುಮಾರ್, ಜೋಸೆಫ್, ಉಮೇಶ್, ಶಿವಣ್ಣ, ಕೊಳೈಂದೈ ಸ್ವಾಮಿ ನಾಗರಾಜ್ ರವರು ಭಾಗವಹಿಸಿದ್ದರು.