ಮಹಾನಗರ ಪಾಲಿಕೆ ನೌಕರರ ಮೇಲೆ ಮಲತಾಯಿ ಧೋರಣೆ, ತಾರತಮ್ಯ ನೀತಿ ಯಾಕೆ: ಎ.ಅಮೃತ್ ರಾಜ್

Appeal to the Chief Secretary to the Government to fulfill the demands of the Karnataka State Mahanagara Corporation employees

ಮಹಾನಗರ ಪಾಲಿಕೆ ನೌಕರರ ಮೇಲೆ ಮಲತಾಯಿ ಧೋರಣೆ, ತಾರತಮ್ಯ ನೀತಿ ಯಾಕೆ: ಎ.ಅಮೃತ್ ರಾಜ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ವಿವಿಧ 5 ಬೇಡಿಕೆಗಳ ಈಡೇರಿಕೆಗಾಗಿ ತುರ್ತು ಸಭೆಯನ್ನು ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರ ನೇತೃತ್ವದಲ್ಲಿ ನಡೆಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಷಡಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ರಮೇಶ್ ಸಂಗ, ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ವಿ.ವೆಂಕಟರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯರವರು, ಸಂಚಾಲಕರಾದ ಪ್ರಹ್ಲಾದ್ ಕುಲಕರ್ಣಿರವರು ಭಾಗವಹಿಸಿದ್ದರು.

ಎ.ಅಮೃತ್ ರಾಜ್ ರವರು ಮಾತನಾಡಿ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆ, ಕೆಲಸದ ಒತ್ತಡದಿಂದ ಮಾನಸಿಕ, ಧೈಹಿಕವಾಗಿ ಕುಗ್ಗಿಹೋಗಿದ್ದಾರೆ. ನಗರಾಭಿವೃದ್ದಿ ಇಲಾಖೆ ಸಚಿವರು ಮತ್ತು ನಗರಾಭಿವೃದ್ದಿ ಇಲಾಖೆಗೆ ನಮ್ಮ ಬೇಡಿಕೆ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರು, ಯಾವುದೇ ಪ್ರಯೋಜನವಾಗಿಲ್ಲ, ಅದ್ದರಿಂದ 10ಮಹಾನಗರ ಪಾಲಿಕೆ ಅಧ್ಯಕ್ಷರು, ಪದಾಧಿಕಾರಿಗಳ ಜೊತೆಯಲ್ಲಿ ತುರ್ತು ಸಭೆ. ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು ಹಾಗೂ ಪಾಲಿಕೆ ನೌಕರರು ಒತ್ತಡದಲ್ಲಿ ಕೆಲಸ ಮತ್ತು ವಯೋಸಹಜವಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ರಾಜ್ಯ ಸರ್ಕಾರದ ನೌಕರರಿಗೆ ಜಾರಿಗೆ ಮಾಡಿರುವಂತೆ ಆರೋಗ್ಯ ಸಂಜೀವಿನಿ ಯೋಜನೆ ಮಹಾನಗರಪಾಲಿಕೆ ನೌಕರರಿಗೆ ಯೋಜನೆ ಜಾರಿಗೆ ಮಾಡಬೇಕು. ರಾಜ್ಯ ಸರ್ಕಾರಿ ನೌಕಕರಿಗೆ ಸಿಗುವ ಕೆ.ಜಿ.ಐ.ಡಿ ಮತ್ತು ಜಿ.ಪಿ.ಎಫ್ ಯೋಜನೆ ಮಹಾನಗರ ಪಾಲಿಕೆ ನೌಕರರಿಗೆ ಆನ್ವಯವಾಗಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡುತ್ತಾರೆ ಅದೇ ಮಾದರಿಯಲ್ಲಿ ಮಹಾನಗರ ಪಾಲಿಕೆ ನೌಕರರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಬೇಕು. ಸರ್ಕಾರಿ ನೌಕರರು ಮತ್ತು ಮಹಾನಗರ ಪಾಲಿಕೆ ನೌಕರರು ಎಲ್ಲರು ಒಂದೇ ಸರ್ಕಾರ ತಾರತಮ್ಯ ನೀತಿ ಯಾಕೆ ಮಾಡುತ್ತಿದೆ. ಎಲ್ಲ ನೌಕರರನ್ನು ಸಮಾನವಾಗಿ ನೋಡಬೇಕು, ಪಾಲಿಕೆ ನೌಕರರಿಗೆ ಹಕ್ಕು, ಸೌಲಭ್ಯಗಳು ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದರು.

ಕೆ.ಷಡಕ್ಷರಿರವರು ಮಾತನಾಡಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ಸಚಿವರು, ಇಲಾಖೆಗೆ ಮನವಿ ಸಲ್ಲಿಸಿದರು ಸ್ಪಂದಿಸಲಿಲ್ಲ ಸರ್ಕಾರಗಳು ನೌಕರರನ್ನ ಗೌರವಯುತ ನಡೆಸಿಕೊಳ್ಳಬೇಕು. ವೃಂದ ಮತ್ತು ನೇಮಕಾತಿ ತಿದ್ದುಪಡಿ ಕುರಿತು ಕಾರ್ಯದರ್ಶಿಗಳ ಜೊತೆಯಲ್ಲಿ ಸಭೆ ನಡೆಸಲಾಗಿದೆ. ಮಹಾನಗರ ಪಾಲಿಕೆ ನೌಕರರ ಸಮಸ್ಯೆಗಳಿಗೆ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು. ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಮಹಾನಗರ ಪಾಲಿಕೆ ನೌಕರರಿಗೂ ಸಿಗಬೇಕು ವೃಂದ ಮತ್ತು ನೇಮಕಾತಿ ನಿಯಮ ಹೇಳುತ್ತದೆ. ಆರೋಗ್ಯ ಸಂಜೀವಿನಿ ಯೋಜನೆ ಉತ್ತಮವಾಗಿದೆ ರಾಜ್ಯ ಸರ್ಕಾರ ನೌಕರರು, ಮಹಾನಗರ ಪಾಲಿಕೆ, ನಿಗಮ, ಮಂಡಳಿ ಎಲ್ಲರಿಗೂ ಈ ಯೋಜನೆ ಆನ್ವಯವಾಗಲಿ. ಮಹಾನಗರ ಪಾಲಿಕೆ ಕ್ರೀಡಾಕೂಟಕ್ಕೆ ಸರ್ಕಾರ ಸಹಾಯಧನ ನೀಡಲಿ ಎಂದು ಹೇಳಿದರು.

ರಮೇಶ್ ಸಂಗಾ ರವರು ಮಾತನಾಡಿ ನೌಕರರಿಗೆ ಅವಶ್ಯಕತೆ ಇರುವ ಬೇಡಿಕೆಗಳನ್ನು ಮಹಾನಗರ ಪಾಲಿಕೆ ನೌಕರರು ಹೇಳುತ್ತಿದ್ದಾರೆ, ಸರ್ಕಾರ ಮನ್ನಣೆ ಕೊಡಬೇಕು. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಯಲ್ಲಿ ಕ್ರೀಡಾಕೂಟ ಆಯೋಜನೆ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಮಾಡಿದರೆ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ಕೆಜಿಐಡಿ ಉತ್ತಮ ಯೋಜನೆ ಇದರಿಂದ ನೌಕರರಿಗೆ ಉತ್ತಮ ಲಾಭ ಸಿಗುತ್ತದೆ. ಹೋರಾಟ ಅನಿವಾರ್ಯವಾಗಿದೆ, ಹೋರಾಟದ ಮೂಲಕ ನ್ಯಾಯ ಪಡೆಯುವ ಸಂದರ್ಭ ಬಂದಿದೆ ಎಂದು ಹೇಳಿದರು.

ರಾಜ್ಯ ಸಮಿತಿ ನಿರ್ದೇಶಕರುಗಳಾದ ಸಾಯಿಶಂಕರ್, ಎ.ಜಿ.ಬಾಬು, ಬಿ.ರುದ್ರೇಶ್, ಕೆ.ನರಸಿಂಹ ಹಾಗೂ ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ ಕಾರ್ಯದರ್ಶಿ ಎಂ.ಬಸವಣ್ಣ,, ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘ ಅಧ್ಯಕ್ಷರಾದ ಗೋವಿಂದರಾಜು, ಹುಬ್ಬಳಿ- ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಪ್ರಸಾದ್ ಪೆರೂರ, ಬೆಳಗಾಂ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಗುಂಡಪ್ಪನವರ್, ಬಳ್ಳಾರಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಗೋವಿಂದಬಾಬು ಎಂ.ಕೆ, ಗುಲ್ಬರ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಟಂಗಳಿ, ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ನೌಕರರ ಸಂಘ ಮಂಗಳೂರು ಅಧ್ಯಕ್ಷರಾದ ಬಾಲು, ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎನ್.ಗೋವಿಂದ್, ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘ, ತುಮಕೂರು ಮಹಾನಗರ ಪಾಲಿಕೆ ನೌಕರರ ಸಂಘ ಉಪಾಧ್ಯಕರಾದ ನಟರಾಜ್ ಪದಾಧಿಕಾರಿಗಳು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಮಂಜೇಗೌಡ, ಹೆಚ್.ಬಿ.ಹರೀಶ್, ಮಂಜುನಾಥ್, ರೇಣುಕಾಂಬ, ಸಂತೋಷ್ ಕುಮಾರ್ ನಾಯ್ಕ್ ಉಮಾದೇವಿರವರು ಭಾಗವಹಿಸಿದ್ದರು.