ಕನ್ನಡ ಜ್ಯೋತಿ ರಥ ಯಾತ್ರೆಗೆ ಯಶವಂತಪುರದಿಂದ ಬೀಳ್ಕೊಡುಗೆ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ 50ರ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಬೆಂಗಳೂರು ನಗರ ಜಿಲ್ಲೆಯಿಂದ ರಾಮನಗರ ಜಿಲ್ಲೆಗೆ ರಥ ಬೀಳ್ಕೊಡುಗೆ ಸಮಾರಂಭ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆನ್ನೇನಹಳ್ಳಿ ಗ್ರಾಮದಿಂದ ಬೀಳ್ಕೊಡಲಾಯಿತು.
ಯಶವಂತಪುರ ಕ್ಷೇತ್ರ ಶಾಸಕ ಮಾಜಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ, ಹೆಚ್ ಎಸ್ ಸುಧೀಂದ್ರ ಕುಮಾರ್ ರಥಯಾತ್ರೆಗೆ ಪುಷ್ಪಾರ್ಚನೆ ನೆರವೇರಿಸಿ ಬೆಂಗಳೂರು ನಗರದಿಂದ ಬೀಳ್ಕೊಟ್ಟರು.
ಕರ್ನಾಟಕ ಸರ್ಕಾರ ಆಯೋಜಿಸಿರುವ ಈ ಕನ್ನಡ ಜೋತಿಯರತೆಯಾತ್ರೆ ಹೆಮ್ಮೆಯ ಸಂಗತಿ ಎಂದು ಶಾಸಕ ಸೋಮಶೇಖರ್ ಈ ಸಂದರ್ಭದಲ್ಲಿ ಮಾತನಾಡಿದರು ಯಶವಂತಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್ಎಸ್ ಸುಧೀಂದ್ರ ಕುಮಾರ್ ಮಾತನಾಡಿ ಕನ್ನಡದ ನಿಜವಾದ ಶಾಸಕ ಕನ್ನಡದ ಕ್ಯೆಂಕರ್ಯ ಗಳಿಗೆ ಸದಾ ಸಹಕಾರ ನೀಡುವ ಎಸ್ ಟಿ ಸೋಮಶೇಖರ್ ಅವರು ರಥಯಾತ್ರೆಗೆ ಬೀಳ್ಕೊಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಕ್ಷೇತ್ರದ ಪರವಾಗಿ ಶಾಲು ಹೊಂದಿಸಿ ಪುಷ್ಪ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪ್ರಥಯಾತ್ರೆಯನ್ನು ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ಜನಪದ ಕಲಾತಂಡಗಳು ಸ್ವಾಗತಿಸಿದವು ಕನ್ನಡದ ವಿವಿಧ ಸಂಘಟನೆಗಳ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.