ಶಾಸಕ ಎಸ್.ಸುರೇಶ್ ಕುಮಾರ್ ರವರಿಂದ ಜನಸ್ಪಂದನಾ ಪಾದಯಾತ್ರೆ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಿವನಗರ ಮತ್ತು ಶ್ರೀರಾಮಮಂದಿರ ವಾರ್ಡ್ ನಲ್ಲಿ ಸಾರ್ವಜನಿಕರ ಸಮಸ್ಯೆ ಮತ್ತು ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆಯನ್ನು ಮಾಜಿ ಶಿಕ್ಷಣ ಸಚಿವ, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಪಾದಯಾತ್ರೆ ಮೂಲಕ ಮಾಡಿದರು.
ಕಾರ್ಯಪಾಲಕ ಅಭಿಯಂತರಾದ ಗಂಗಾಧರ್, ಮಾಜಿ ಪಾಲಿಕೆ ಸದಸ್ಯ ಹೆಚ್.ವಿಜಯಕುಮಾರ್, ತೋಟಗಾರಿಕೆ ಅಧೀಕ್ಷರಾದ ಮಹಮದ್ ಅಲಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಯೋಗೇಶ್, ಜನಮಂಡಳಿ ಎಇಇ. ಹರೀಶ್ ನಾಯ್ಕ್ ರವರು ಬಿಬಿಎಂಪಿ ಆರೋಗ್ಯ ಇಲಾಖೆ ಮತ್ತು ಸಂಚಾರಿ ಪೊಲೀಸ್, ಬೆಸ್ಕಾಂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ 7 ವಾರ್ಡ್ ಗಳಲ್ಲಿ ಪ್ರತಿ ವಾರ ಒಂದು ವಾರ್ಡ್ ನಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡಲಾಗುತ್ತಿದೆ. ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹಾರಿಸಲು ಸಮಸ್ಯೆ ಇರುವ ಸ್ಥಳಕ್ಕೆ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳಲಾಗುತ್ತಿದೆ. ಸಮಸ್ಯೆಗಳನ್ನು ಖುದ್ದಾಗಿ ನೋಡಿದಾಗ ಶಾಶ್ವತ ಪರಿಹಾರ ಮಾಡಲು ಸಾಧ್ಯ.
ಸಮರ್ಪಕವಾಗಿ ಕಸ ವಿಲೇವಾರಿ ಕುರಿತು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪುಟ್ ಪಾತ್ ಇರಲಿ, ಬೀಳುವ ವಯಸ್ಸಾದಂತಹ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಮತ್ತು ಪಾರ್ಕ್ ಗಳನ್ನು ದುರಸ್ತಿ ಮತ್ತು ಮಾದರಿ ಬಾಕ್ಸ್ ಮಾದರಿ ಚರಂಡಿ, ಅಧುನಿಕ ಶೈಲಿಯ ಪುಟ್ ಪಾತ್ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಸಮರ್ಪಕವಾಗಿ ಉಪಯೋಗುವಾಗುವಂತೆ ಕಾಮಗಾರಿಗಳ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಯಶಸ್ ನಾಯಕ್, ಕಿರಣ್, ಗಿರೀಶ್ ಗೌಡ, ಪ್ರವೀಣ್ ರವರು ಭಾಗವಹಿಸಿದ್ದರು.