ಸಹಕಾರ ಸಂಘಗಳ ಕಾಯ್ದೆ ಅಧ್ಯಯನ ಸಮಿತಿ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆ

Cooperative Societies Act Study Committee submits final report to Govt

ಸಹಕಾರ ಸಂಘಗಳ ಕಾಯ್ದೆ ಅಧ್ಯಯನ ಸಮಿತಿ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ಸೌಹಾರ್ದ ಕಾಯ್ದೆ ಹಾಗೂ ನಿಯಮಗಳ ಅಧ್ಯಯನ ಸಮಿತಿಯ ಅಂತಿಮ ವರದಿಯನ್ನು ಸಮಿತಿಯ ಅಧ್ಯಕ್ಷ ಲಕ್ಷ್ಮಣ ಎಸ್. ಸವದಿ ಅವರು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ನಡೆದ ಸಭೆಯಲ್ಲಿ ಸಲ್ಲಿಸಿದರು.

ಇದೇ ವೇಳೆ ಸಮಿತಿಯ ಸದಸ್ಯರಾದ ಶಾಸಕ ಕೆ.ಷಡಾಕ್ಷರಿ, ಮಾಜಿ ಸಚಿವ ಎಸ್.ಆರ್.ಪಾಟೀಲ್, ರಾಜ್ಯ ಮಾರಾಟ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಎ.ಸಿ.ದಿವಾಕರ್, ಅಪರ ನಿಬಂಧಕ ಕೆ.ಎಸ್. ನವೀನ್, ಜಂಟಿ ನಿಬಂಧಕ ಕಲ್ಲಪ್ಪ ಓಬಣ್ಣಗೋಳ, ಲಕ್ಷ್ಮೀಪತಯ್ಯ, ನಿವೃತ್ತ ಅಪರ ನಿಬಂಧಕರುಗಳಾದ ಎಚ್.ಎಸ್.ನಾಗರಾಜಯ್ಯ, ಜಿ.ಎಸ್. ರಮಣರೆಡ್ಡಿ, ಸಿ.ಎನ್. ದೇವರಾಜ್ ಅವರು ಸೇರಿದಂತೆ ఇలాటియ పిరియ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮಗಳು 1960 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ಮತ್ತು ನಿಯಮಗಳು 2004ಗಳಿಗೆ ಕಾನೂನಾತ್ಮಕ ತಿದ್ದುಪಡಿ ತರುವ ಸಂಬಂಧ ಸಹಕಾರಿ ಮುಖಂಡರುಗಳು ಮತ್ತು ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿಗಳ ತಂಡದ ಅಧ್ಯಯನ ಸಮಿತಿಯನ್ನು ಶಾಸಕ ಲಕ್ಷ್ಮಣ ಎಸ್. ಸವದಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ರಚಿಸಲಾಗಿತ್ತು ಎಂದು ರಾಜ್ಯ ಸಹಕಾರ ಮಹಾಮಂಡಳದ ಕಾರ್ಯದರ್ಶಿ ಲಕ್ಷ್ಮೀಪತಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.