ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಗಮನಾರ್ಹ ಕೊಡುಗೆ ದಕ್ಕಿದೆ : ತೇಜಸ್ವಿ ಸೂರ್ಯ

ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಗಮನಾರ್ಹ ಕೊಡುಗೆ ದಕ್ಕಿದೆ : ತೇಜಸ್ವಿ ಸೂರ್ಯ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಕಳೆದ 5 ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 1,3 ಲಕ್ಷ ಕೋಟಿ ರೂ, ಮೊತ್ತದ ಅನುದಾನವನ್ನು ಒದಗಿಸಿದೆ ಎಂದು ತೇಜಸ್ವಿ ಸೂರ್ಯ ರವರು ಹೇಳಿದ್ದಾರೆ.

 ಬೆಂಗಳೂರಿನಲ್ಲಿ ಇಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ರವರು ಮಾತನಾಡಿ ಕೇವಲ 10 ವರ್ಷಗಳ ಹಿಂದೆ ವಿಶ್ವದ ದುರ್ಬಲ ಆರ್ಥಿಕತೆಯಲ್ಲಿ ಒಂದಾಗಿದ್ದ ಭಾರತ ಇಂದು ಪ್ರಬಲ 5 ದೊಡ್ಡ ಅರ್ಥಿಕತೆಗಳ ಸಾಲಿನಲ್ಲಿ ಸೇರ್ಪಡೆಯಾಗಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಭಾರತವು, ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗುತ್ತಿರುವುದು ಅವರ ಅಭಿವೃದ್ಧಿ & ಜನಪರ ಆಡಳಿತಕ್ಕೆ ಸಾಕ್ಷಿ. 

ಕಳೆದ 5 ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 1,3 ಲಕ್ಷ ಕೋಟಿ ರೂ, ಮೊತ್ತದ ಅನುದಾನವನ್ನು ಒದಗಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಮ್ಮ ಮೆಟ್ರೋ, ಯು ಎಸ್ ರಾಯಭಾರ , ಎನ್ ಐ ಎ ಕಚೇರಿ ಸ್ಥಾಪನೆ ಸಾಧ್ಯವಾಗಿದ್ದು ಬಿಜೆಪಿ ಸರ್ಕಾರದ ವತಿಯಿಂದ ಎಂಬುದು ಗಮನಾರ್ಹ, 2014 ಕ್ಕಿಂತಲೂ ಮುಂಚಿನ & ನಂತರದ ಆಡಳಿತಕ್ಕೆ ಆಕಾಶ - ಭೂಮಿಯಷ್ಟು ಅಂತರವಿದೆ. 

ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಭಾರತವು, ಗಮನಾರ್ಹ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕುತ್ತಿದೆ. ಬೆಂಗಳೂರು ಇಡೀ ದೇಶದಾದ್ಯಂತ ಬಿಜೆಪಿ ಪರವಾದ ದೊಡ್ಡ ಅಲೆಯೇ ಇದೆ " ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ರವರ ಸಹಕಾರ ನೆನಪಿಸಿಕೊಂಡ ಸಂಸದ ಸೂರ್ಯ ರವರು ಬೆಂಗಳೂರು ದಕ್ಷಿಣದ ಸಂಸದನಾಗಿ ಕಳೆದ 5 ವರ್ಷಗಳಿಂದ ಅವರಿಂದ ನನಗೆ ದೊರೆತ ಸಲಹೆ, ಸಹಕಾರ & ಮಾರ್ಗದರ್ಶನ ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ್ದು " ಎಂದು ತಿಳಿಸಿದರು.

 ಬಿ. ಎಸ್ ಯಡಿಯೂರಪ್ಪ, ಬಿ ವೈ ವಿಜಯೇಂದ್ರ, ಆರ್ ಅಶೋಕ್ ಸೇರಿದಂತೆ ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.