ಇಪಿಎಸ್ ಪಿಂಚಣಿದಾರರ 80ನೇ ಮಾಸಿಕ ಸಭೆ

80th Monthly Meeting of EPS Pensioners

ಇಪಿಎಸ್ ಪಿಂಚಣಿದಾರರ 80ನೇ ಮಾಸಿಕ ಸಭೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಇಪಿಎಸ್ ಪಿಂಚಣಿದಾರರ 80ನೇ ಮಾಸಿಕ ಸಭೆ, 1/9/2024 ರಂದು, ಲಾಲ್ ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಭೆಗೆ ನೂರಾರು ನಿವೃತ್ತರು ಆಗಮಿಸಿದ್ದು, ಸುಂದರ ಪರಿಸರದಲ್ಲಿ ಲಾಲ್ ಬಾಗ್ ನಡಿಗೆದಾರರ ಜೊತೆ ಹೆಜ್ಜೆ ಹಾಕುತ್ತಾ, ತಮ್ಮ ಹಳೆಯ ಸಹಪಾಟಿಗಳನ್ನು ಕಂಡೊಡನೆ ಎಲ್ಲಿಲ್ಲದ ನವೊಲ್ಲಾಸದಿಂದ, ಉಭಯ ಕುಶಲೊಪರಿ ವಿಚಾರಿಸುತ್ತಿದ್ದುದು ಸಾಮಾನ್ಯ ದೃಶ್ಯಾವಳಿಯಾಗಿತ್ತು. ಸಂಘದ ಸಂಘಟನಾ ಕಾರ್ಯದರ್ಶಿ ಆರ್ ಮನೋಹರ್ ರವರು ಎಲ್ಲ ಇಪಿಎಸ್ ನಿವೃತ್ತರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಎನ್ಎಸಿ ರಾಜ್ಯಾಧ್ಯಕ್ಷರಾದ, ಜಿಎಸ್ಎಂ ಸ್ವಾಮಿ ರವರನ್ನು ಸ್ವಾಗತಿಸಿ, ಹೋರಾಟದ ಸಂಪೂರ್ಣ ಚಿತ್ರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ರಾಜ್ಯಮಟ್ಟದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಅತ್ಯಂತ ಶಕ್ತಿಯುತವಾಗಿದ್ದು, ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷರಾದ, ಕಮಾಂಡರ್ ಅಶೋಕ್ ರಾವುತ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ, ನಾವೆಲ್ಲರೂ ಕೈಜೋಡಿಸಿರುವ ಬಗ್ಗೆ ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಸಭೆಯಲ್ಲಿ ಪ್ರಸ್ತಾಪಿಸಿ, ಮುಖಂಡರು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೇಯವರಾದ, ನಿರ್ಮಲಾ ಸೀತಾರಾಮನ್ ರವರನ್ನು ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ಅಹವಾಲನ್ನು ಮಂಡಿಸಿ, ಚರ್ಚೆ ನಡೆಸಿರುವ ಸಂಗತಿಯನ್ನು ತಿಳಿದು, ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದರು. ಇಪಿಎಸ್ ಪಿಂಚಣಿದಾರರ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಕೇಂದ್ರ ವಿತ್ತಸಚಿವೇಯವರ ಜೊತೆ ನಮ್ಮ ನಾಯಕರು ನಡೆಸಿರುವ ಮಾತುಕತೆ ಫಲಪ್ರದವಾಗಿದ್ದು, ಅಂತಿಮ ನಿರ್ಣಯಕ್ಕಾಗಿ ನಾವೆಲ್ಲರೂ ಎದುರು ನೋಡುತ್ತಿರುವುದಾಗಿ, ಎನ್ಎಸಿ ರಾಜ್ಯಾಧ್ಯಕ್ಷರಾದ ಜಿಎಸ್ಎಂ ಸ್ವಾಮಿ ರವರು ಸಭೆಯಲ್ಲಿ ತಿಳಿಸಿದ್ದು, ಆದರೆ ಅಂತಿಮ ಗುರಿ ಮುಟ್ಟುವರೆಗೂ ನಮ್ಮ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಕರೆ ನೀಡಿದರು. ಎನ್‌ಎಸಿ ಖಜಾಂಚಿ ಎಸ್ಎನ್ ಕುಲಕರ್ಣಿ ಮಾತನಾಡಿ, ಇಪಿಎಸ್ ನಿವೃತ್ತರು ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿರುವುದನ್ನು ಕಂಡು, ತಮ್ಮ ಹರ್ಷ ವ್ಯಕ್ತಪಡಿಸಿ, ಎಲ್ಲರಿಗೂ ಶುಭ ಹಾರೈಸಿದರು. ಈ ಸಭೆಗೆ ಚಿಕ್ಕಬಳ್ಳಾಪುರದ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಗಮಿಸಿದ್ದು, ಸಂಘದ ಪದಾಧಿಕಾರಿಗಳಾದ ರುಕ್ಮಿಶ್ ಹಾಗು ನಾಗರಾಜುರವರು ಹಾಜರಿದ್ದು, ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿರುತ್ತಾರೆ ಎಂದು, ನಂಜುಂಡೇಗೌಡ ರವರು ತಿಳಿಸಿದರು.