ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.

ಉದ್ಘಾಟನೆಯನ್ನು ಆಡಳಿತಗಾರರಾದ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿರವರು, ವಿಶೇಷ ಆಯುಕ್ತರುಗಳಾದ ಶ್ರೀಮತಿ ಪ್ರೀತಿ ಗೆಹ್ಲೋಟ್,ಕೆ.ಹರೀಶ್ ಕುಮಾರ್, ವಲಯ ಆಯುಕ್ತರುಗಳಾದ ಶ್ರೀಮತಿ ಸ್ನೇಹಲ್ ಆರ್, ಶ್ರೀಮತಿ ಅರ್ಚನಾ ಎಂ.ಎಸ್.ಕರೀಗೌಡ, ಕೆ.ಎನ್.ರಮೇಶ್, ಮತ್ತು ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಚಲನಚಿತ್ರ ನಟಿ ಶ್ರೀಮತಿ ವಿನಯಪ್ರಸಾದ್ ರವರು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಮಾಡಿದರು.

ಶ್ರೀಮತಿ ಭಾರತಿ ವಿಷ್ಣುವರ್ಧನ್ ರವರು ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು, ವೇದ, ಪುರಾಣ ಕಾಲದಿಂದಲು ಹೆಣ್ಣಿನ ಶಕ್ತಿ ಏನು ಎಂಬುದು ತಿಳಿದಿದೆ. ಹೆಣ್ಣು ಎಂದರೆ ಜೀವನಪೂರ್ತಿ ತ್ಯಾಗವೆ. ಅಮ್ಮ ಎಂದರೆ ನೋವು ನುಂಗಿಕೊಂಡು ತ್ಯಾಗ ಮಾಡಿ ದಿಟ್ಟತನ ತೋರಿಸುತ್ತಾಳೆ. ಮಹಿಳೆಯರಿಗೆ ದಿಟ್ಟತನ ಇರಬೇಕು, ಆಸೆಗಳ ಹಿಂದೆ ಹೋಗಬಾರದು, ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಜೀವನ ಸಾಗಿಸಬೇಕು.

ದೇವರ ಇಚ್ಚೆ ಮುಂದೆ ನಮ್ಮ ಇಚ್ಚೆ ನಡೆಯುವುದಿಲ್ಲ, ಭಗವಂತ ಮತ್ತು ತಂದೆ, ತಾಯಿಯ ಅನುಗ್ರಹ, ಆಶೀರ್ವಾದದಿಂದ ನಾಡಿನ ಜನರ ಪ್ರೀತಿ, ವಿಶ್ವಾಸ, ಪ್ರಶಸ್ತಿ ಲಭಿಸಿದೆ. ಮಕ್ಕಳು, ಆಳಿಯ, ಮೊಮ್ಮಕ್ಕಳು ಒಳ್ಳೆಯ ಗಂಡ ದೇವರ ಕೊಟ್ಟಿದ್ದಾರೆ ಎಂದು ಹೇಳಿದರು

ನಟಿ ಗೀತಾ ರವರು ಮಾತನಾಡಿ 20ವರ್ಷಗಳ ನಂತರ ಕನ್ನಡ ನಟಿಯರು, ನಿರ್ಮಾಪಕಿ ನೋಡುವ ಸೌಭಾಗ್ಯ ನನ್ನದಾಗಿದೆ. ಕನ್ನಡ ನಾಡಿನ ಜನರನ್ನು ನೋಡಿ ನನಗೆ ಬಹಳ ಸಂತೋಷವಾಯಿತು.

ನಟಿ ಜಯಮಾಲ ರವರು ಮಾತನಾಡಿ ಮಹಿಳೆಯರು ಎಲ್ಲರು ಅಭಿನಂದನಾ ಅರ್ಹರು, ಬೆಳ್ಳಗೆ ಎದ್ದು ನಗರ ಸ್ವಚ್ಚತೆ ಮಾಡುವ ಪೌರ ಕಾರ್ಮಿಕ ಮಹಿಳೆಯರು ಇನ್ನೊಬ್ಬರ ಬದುಕು ಹಸನ ಮಾಡುವ ಸ್ವಚ್ಚತಾ ವಾರಿಯರ್ಸ್ ಗಳು. 

ಕನ್ನಡ ಚಲನಚಿತ್ರ ರಂಗದ ದಿಟ್ಟ ಮಹಿಳೆ ಎಂದರೆ ಪಾರ್ವತಮ್ಮ ರಾಜ್ ಕುಮಾರ್ ರವರು , ಆನೇಕ ಕಲಾವಿದರಿಗೆ ಅವಕಾಶ ನೀಡಿದ್ದರು. ವಿಷ್ಣುವರ್ಧನ್ ಮತ್ತು ಭಾರತಿ ರವರ ಚಿತ್ರಗಳು ಸಮಾಜಕ್ಕೆ ಮಾದರಿಯಯಾಗಿದ್ದವು.ಧೃತಿಗೆಡದೆ ದಿಟ್ಟತನದಿಂದ ಮಹಿಳೆಯರು ಸಾಗಬೇಕು ಎಂದು ಹೇಳಿದರು.

ನಟಿ ಸರಿತಾ ಪ್ರತಿದಿನ ಮಹಿಳಾ ದಿನಾಚರಣೆಯಾಗಬೇಕು. ಮಹಿಳೆ ಸ್ವಾಭಿಮಾನಿ ಸ್ವಾವಲಂಭಿಯಾಗಿ ಬದುಕುತ್ತಾಳೆ. ಒಂದು ಹೆಣ್ಣಿನ ಹಿಂದೆ ಪುರುಷರ ಸಹಕಾರ ಇರಬೇಕು.

ಐ.ಎ.ಎಸ್. ಮತ್ತು ಐಪಿಎಸ್ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಪ್ರತಿದಿನ ಸಾಧನೆ ಮಾಡುತ್ತಿದ್ದಾಳೆ. ನಾನು ಸಹ ಉನ್ನತ ವ್ಯಾಸಂಗ ಮಾಡಬೇಕು ಎಂಬ ಹಂಬಲವಿತ್ತು ಅದರೆ ಅದು ಆಗಲ್ಲಿಲ. ಡಾ||ರಾಜ್ ಕುಮಾರ್ ಮತ್ತು ಪಾರ್ವತಮ್ಮರವರ ಅವರನ್ನ ಮರೆಯುವಂತಿಲ್ಲ. ಚಿತ್ರರಂಗದಲ್ಲಿ ಮೊದಲು ಜಯಮಾಲ ಉತ್ತಮ ಸಹಕಾರ ನೀಡಿದ್ದರು.

ನಟಿ ಅಂಬಿಕಾ ರವರು ಮಾತನಾಡಿ ಮಹಿಳಾ ಸಾಧಕಿಯರು ಗುರುತಿಸುವ ಕೆಲಸವಾಗಿದೆ. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಸಹಕಾರ, ಬೆಂಬಲ ನೀಡಬೇಕು. ಮಹಿಳೆ ಎಂದರೆ ಶಕ್ತಿ ಸ್ವರೂಪಿಣಿ ಎಂದು ಹೇಳಿದರು.

ವಿನಯ ಪ್ರಸಾದ್ ರವರು ಕನ್ನಡ ಚಲನಚಿತ್ರ ರಂಗದ ಅಮೂಲ್ಯರತ್ನ, ಬಂಗಾರದ ಗೊಂಬೆಗಳು ಇವರು. ಪ್ರತಿಯೊಬ್ಬ ನಾರಿಮಣಿಯರು ದಿಟ್ಟ ಮಹಿಳೆಯರು. ನಾವು ಪುರುಷರ ದ್ವೇಷಿಗಳಲ್ಲ ಅವರ ಜೊತೆ ನಾವು, ನಮ್ಮ ಜೊತೆಯಲ್ಲಿ ಅವರು ಇದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಶ್ರೀಮತಿ ಪೂರ್ಣಿಮ ರಾಮ್ ಕುಮಾರ್ ಮಹಿಳೆ ಅಕ್ಕ, ತಂಗಿ, ತಾಯಿ, ಅತ್ತೆಯಾಗಿ ಎಲ್ಲರ ಜೀವನದಲ್ಲಿ ಪಾತ್ರವಹಿಸುತ್ತಾಳೆ. ಪ್ರತಿದಿನ ಮಹಿಳೆ ಸಾಧನೆ ಮಾಡುತ್ತಾಳೆ ಕನ್ನಡ ಚಲನಚಿತ್ರ ರಂಗದ ಎಲ್ಲ ಕಲಾವಿದರು ನಮ್ಮ ಕುಟುಂಬದಂತೆ.

ಎ.ಅಮೃತ್ ರಾಜ್ ರವರು ಮಾತನಾಡಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ನಾಡು, ನುಡಿ ಮತ್ತು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ. ಕನ್ನಡ ಭಾಷೆ ಉಳಿಸಿ, ಬೆಳಸಲು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು. ಮಹಿಳಾ ಸಾಧಕಿಯರನ್ನ ಗುರುತಿಸಿ ನಮ್ಮ ಸಂಘದ ವತಿಯಿಂದ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರುಗಳಾದ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಚಲನಚಿತ್ರ ನಟಿಯರಾದ ಶ್ರೀಮತಿ ಭಾರತಿ ವಿಷ್ಣುವರ್ಧನ್, ಶ್ರೀಮತಿ ಜಯಮಾಲ ರಾಮಚಂದ್ರ, ಶ್ರೀಮತಿ ಸರಿತಾ, ಅಂಬಿಕಾ, ಗೀತಾ, ನಿರ್ಮಾಪಕಿಯರುಗಳಾದ ಶ್ರೀಮತಿ ಲಕ್ಷ್ಮಿ ಗೋವಿಂದರಾಜು, ಶ್ರೀಮತಿ ಪೂರ್ಣಿಮ ರಾಮ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ, ದೂರದರ್ಶನ ಮುಖ್ಯಸ್ಥರಾದ ಶ್ರೀಮತಿ ಆರತಿ ಹೆಚ್.ಎಸ್. ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ ಪ್ರಶೀಲ, ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಶ್ರೀಮತಿ ಸೌಮ್ಯ, ಖ್ಯಾತ ವಕೀಲೆ ಶ್ರೀಮತಿ ಶೃತಿ, ಟಿ.ವಿ.9ನಿರೂಪಕಿ ಶ್ರೀಮತಿ ಮಧುನಾಗರಾಜ್ ಹಾಗೂ ಜೀ ಕನ್ನಡ ನಿರೂಪಕಿ ಶ್ರೀಮತಿ ಕಾವಶ್ರೀ ರಾಘವಸೂರ್ಯ, ಸುವರ್ಣ ನ್ಯೂಸ್ ನಿರೂಪಕಿ ಶ್ರೀಮತಿ ಪ್ರಗತಿ, ಶ್ರೀಮತಿ ರಶ್ಮಿರಾವ್ (Rapid ರಶ್ಮಿ) , ಸಮೃದ್ದಿ ಚಿಕಿತ್ಸಾ ಕೇಂದ್ರ ಶ್ರೀಮತಿ ಡಾ||ಪೂರ್ವಿ ಜಯರಾಜ್ ರವರು ಹಾಗೂ ಬಿಬಿಎಂಪಿ ಮಹಿಳಾ ಅಧಿಕಾರಿ, ನೌಕರರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಖ್ಯಾತ ಹಿನ್ನಲೆ ಗಾಯಕಿ ಆನುರಾಧ ಭಟ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದರು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಎಲ್.ಆ‌ರ್.ಮಂಜುನಾಥ್,ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಕೆ.ಮಂಜೇಗೌಡ, ವಿ.ಉಮೇಶ್, ಆ‌ರ್.ರೇಣುಕಾಂಬ,ಎಸ್.ಜಿ.ಸುರೇಶ್, ಮಂಜುನಾಥ್, ಸಂತೋಷ್ ಕುಮಾರ್ ನಾಯ್ಕ, ಶ್ರೀಧರ್, ಸಂತೋಷ್ ಕುಮಾರ್ ರವರು ಉಪಸ್ಥಿತರಿದ್ದರು.