ಆ.8ರಿಂದ 19ರವರೆಗೆ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಸಕಲ ಸಿದ್ಧತೆ
The Independence Day flower show at Lalbagh will kick off on August 8 and continue until August 19.
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು ಈ ಬಾರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಗಾಥೆಯನ್ನು ತಿಳಿಸುವಂತಹ ಕಾರ್ಯವಾಗುತ್ತಿದೆ.
ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವು ಆ.8ರಂದು ಆರಂಭವಾಗಲಿದ್ದು 19ರವರೆಗೆ ನಡೆಯಲಿದೆ. ಇದು ಪುಷ್ಪ ಪ್ರದರ್ಶನದ 216ನೇ ಆವೃತ್ತಿಯಾಗಿದ್ದು, ತೋಟಗಾರಿಕಾ ಇಲಾಖೆಯು ಈ ವರ್ಷದ ಕೇಂದ್ರ ವಿಷಯವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಹೂಗಳಲ್ಲಿ ಅನಾವರಣಗಳಿಸಲಾಗುತ್ತಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಎಂ.ಜಗದೀಶ ಮಾಹಿತಿ ನೀಡಿದ್ದಾರೆ.
ಬಹು ನಿರೀಕ್ಷಿತ ಕಾರ್ಯಕ್ರಮಕ್ಕೆ ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ 10 ದಿನಗಳಲ್ಲಿ ಅಂತಿಮ ವಿಷಯಾಧಾರಿತ ಪರಿಕಲ್ಪನೆ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಪುಷ್ಪ ಪ್ರದರ್ಶನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ಆದರೆ, ನಾವು ಇನ್ನೂ ಈ ಪರಿಕಲ್ಪನೆಯನ್ನು ಅಂತಿಮಗೊಳಿಸಬೇಕಾಗಿದೆ. ಸೂಕ್ತವಾದ ವಿವರಗಳನ್ನು ರೂಪಿಸಬೇಕಾಗಿದೆ. ನಾವು ಅವರ ಜೀವನ ಮತ್ತು ಸಾಧನೆಗಳನ್ನು ಚಿತ್ರಿಸಲು ತಜ್ಞರು ಮತ್ತು ಸಂಶೋಧಕರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ತೋಟಗಾರಿಕಾ
ಇಲಾಖೆಯು ವಿದ್ವಾಂಸರು ಮತ್ತು ಸಂಶೋಧಕರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ. ಡಾ.ಅಂಬೇಡ್ಕರ್ ಅವರ ಪರಂಪರೆಯ ಸಮಗ್ರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮುಂಬರುವ ದಿನಗಳಲ್ಲಿ ಕನಿಷ್ಠ 50 ಹೆಚ್ಚುವರಿ ತಜ್ಞರೊಂದಿಗೆ ತೊಡಗಿಸಿಕೊಳ್ಳಲು ಉದ್ದೇಶಿಸಿದೆ.
ಫಲಪುಷ್ಪ ಪ್ರದರ್ಶನ ಸಂಘಟಕರು ಡಾ.ಬಿ.ಆರ್.ಅಂಬೇಡ್ಕರ್ ಜೀವನ ಪಯಣದಲ್ಲಿನ ವಿವಿಧ ಮೈಲಿಗಲ್ಲುಗಳು ಮತ್ತು ಅವರ ಪ್ರಭಾವಶಾಲಿ ಭಾಷಣಗಳನ್ನು ಚಿತ್ರಿಸುವ ವಿಡಿಯೋಗಳನ್ನು ಪ್ರದರ್ಶಿಸಲು ಲಾಲ್‌ಬಾಗ್ ಉದ್ಯಾನದಾದ್ಯಂತ ಸುಮಾರು 8 ಪರದೆಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ. ಅವರ
ಆಕರ್ಷಣಿಯ ಸ್ಥಳವಾಗಿರುವ ಅಂಬೇಡ್ಕರ್ ಅವರ ಬಾಲ್ಯದಿಂದ ಅವರ ನಂತರದ ವರ್ಷಗಳವರೆಗಿನ ಜೀವನ ಪಯಣವನ್ನು 'ಜೀವನ ದರ್ಶನ'ದಂತೆ ಚಿತ್ರಿಸುವ ಪ್ರದರ್ಶನಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಇದು ಮಾತ್ರವಲ್ಲದೆ, ಈ ಬಾರಿ ಪರದೆಗಳನ್ನು ಅಳವಡಿಸಿ ಅಂಬೇಡ್ಕರ್ ಅವರನ್ನು ಕಾಣುವ ಹಾಗೂ ಅವರ ಮಾತುಗಳನ್ನು ಆಲಿಸುವಂತಹ ಕಾರ್ಯವನ್ನೂ ಮಾಡಲಾಗುತ್ತಿದೆ.