ಎಸ್ ವಿ ಫಿದಾ ಶೀ-ರೋ ಪ್ರಶಸ್ತಿ 2024 ಮತ್ತು ಎಸ್ ವಿ ಫಿದಾ ಇಂಡಿಯನ್ ಲೆಜೆಂಡರಿ ಪ್ರಶಸ್ತಿ 2024 ಪ್ರದಾ‌ನ

ಎಸ್ ವಿ ಫಿದಾ ಶೀ-ರೋ ಪ್ರಶಸ್ತಿ 2024 ಮತ್ತು ಎಸ್ ವಿ ಫಿದಾ ಇಂಡಿಯನ್ ಲೆಜೆಂಡರಿ ಪ್ರಶಸ್ತಿ 2024 ಪ್ರದಾ‌ನ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಪ್ಯಾಷನ್ ಮತ್ತು ಸೌಂದರ್ಯ ಕ್ಷೇತ್ರದಲ್ಲಿ ಅತಿದೊಡ್ಡ ಸಂಸ್ಥೆಯಾದ ಸುಧಾ ವೆಂಚರ್ಸ್ ಸಂಸ್ಥೆಯು ಇದೀಗ ಮಹಿಳಾ ಸಬಲೀಕರಣಕ್ಕಾಗಿ ಹೊಸ ಹೆಜ್ಜೆ ಇರಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸುಧಾ ವೆಂಚರ್ಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಶೀ-ರೋ ಆವಾರ್ಡ್ 2024 ( ಶೀ ಈಸ್ ದಿ ಹೀರೋ) ಎಂಬ ಗೌರವ ನೀಡಿ ಸನ್ಮಾನಿಸಿದೆ. ಇದರ ಜೊತೆಗೆ ಹೇಗೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುವಳೋ ಹಾಗೇ ಯಶಸ್ವಿ ಮಹಿಳೆಯ ಹಿಂದೆ ಪುರುಷ ಶಕ್ತಿ ಜೊತೆಯಾಗಿರುತ್ತದೆ. ಇದೇ ಅಲೋಚನೆಯ ಹೊತ್ತು ಸ್ತ್ರೀ ಸಾಧಕಿಯರ ಜೊತೆಗೆ ನಿಂತ ಪುರುಷರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪುರುಷರನ್ನು ಗುರುತಿಸಿ ದ ಇಂಡಿಯನ್ ಲೆಂಜೆಂಡರಿ ಪ್ರಶಸ್ತಿ 2024 ನೀಡಿ ಸನ್ಮಾನಿಸಿದ್ದು ಸುಧಾ ವೆಂಚರ್ಸ್ ಸಂಸ್ಥೆಯ ವಿಭಿನ್ನತೆಗೆ ಸಾಕ್ಷಿ.. 

ಬೆಂಗಳೂರಿನ ವೈಟ್ ಫೀಲ್ಡ್ ಎಸ್ಸೆಟೋ ಹೋಟೆಲ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರರಂಗದ ಇಂದ್ರಜಿತ್ ಲಂಕೇಶ್, ತರುಣ್ ಸುದೀರ್, ಅನಿರುದ್ಧ ಜತಕರ, ಹರ್ಷಿಕಾ ಪೂಣಚ್ಚ, ಬರಹಗಾರರಾದ, ದೂರದರ್ಶನದ ಪ್ರೋಗ್ರಾಂ ಎಕ್ಸಿಕ್ಯುಟಿವ್ ಆರತಿ ಸೇರಿದಂತೆ ವಿವಿದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಎನ್ ಸಂತೋಷ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಹಾಗೂ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷರಾದ ಎ. ಅಮೃತ್ ರಾಜ್ ಆಗಮಿಸಿ ನಮ್ಮ ಈ ಸಾಮಾಜಿಕ ಕಳಕಳಿಯ ಪ್ರೋತ್ಸಾಹಿಸಿದರು. 

ಮಹಿಳಾ ಸಬಲೀಕರಣ ಮತ್ತು ಸಾಮಾಜದಲ್ಲಿ ಸಾಧನೆಗೈದು ಎಲೆಮರೆಕಾಯಿಗಳಿಂತಿರುವ ಸಾಧಕರ ಹೊರ ಜಗತ್ತಿಗೆ ಪರಿಚಯಿಸುವ ಒಂದೊಳ್ಳೆ ಉದ್ದೇಶದಿಂದ ಸುಧಾ ವೆಂಚರ್ಸ್ ಇಂತದ್ದೊಂದು ಕಾರ್ಯಕ್ರಮ ಆಯೋಜಿಸಿತ್ತು. ನೃತ್ಯ, ಸಂಗೀತದಂತಹ ಮನೋರಂಜನೆಯ ಜೊತೆಗೆ ಅತ್ಯದ್ಭುತ ಕಾರ್ಯಕ್ರಮ ನೆರವೇರಿತು.