ದಿವಂಗತ ಶ್ರೀ ಕೇಶವರಾವ್ ನಿಟ್ಟೂರಕರ್ (ಪಟವಾರಿ) ಅವರ ಸ್ಮರಣಾರ್ಥ ‘ನುಡಿ ನಮನ’ ಕಾರ್ಯಕ್ರಮ

'Nudi Namana' program in memory of Late Shri Keshavarao Nittoorkar (Patwari)

ದಿವಂಗತ ಶ್ರೀ ಕೇಶವರಾವ್ ನಿಟ್ಟೂರಕರ್ (ಪಟವಾರಿ) ಅವರ ಸ್ಮರಣಾರ್ಥ ‘ನುಡಿ ನಮನ’ ಕಾರ್ಯಕ್ರಮ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಭಾಲ್ಕಿ : ಭಾಲ್ಕಿಯ ಬಿಕೆಐಟಿ ಕಾಲೇಜಿನಲ್ಲಿ ಶತಾಯುಷಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ, ದಿವಂಗತ ಶ್ರೀ ಕೇಶವರಾವ್ ನಿಟ್ಟೂರಕರ್ (ಪಟವಾರಿ) ಅವರ ಸ್ಮರಣಾರ್ಥ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಸಚಿವ ಈಶ್ವರ್ ಖಂಡ್ರೆ ರವರು ಭಾಗವಹಿಸಿ, ಕೇಶವರಾವ್ ನಿಟ್ಟೂರಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಧಿಸಿದರು.

ಈ ವೇಳೆ  ಸಚಿವ ಈಶ್ವರ್ ಖಂಡ್ರೆ ರವರು ಮಾತನಾಡಿ ಶ್ರೀ ಕೇಶವರಾವ್ ನಿಟ್ಟೂರಕರ್ ಅವರ ದೇಶಪ್ರೇಮ, ಶಿಕ್ಷಣ ಪ್ರೋತ್ಸಾಹ ಮತ್ತು ತ್ಯಾಗಮಯ ಜೀವನ ಸದಾ ಪ್ರೇರಣೆಯಾಗಿವೆ. ಗಾಂಧಿಯ ಆದರ್ಶಗಳಿಂದ ಪ್ರಭಾವಿತರಾಗಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಶ್ರೇಷ್ಠ ಪಾತ್ರವನ್ನು ನಿರ್ವಹಿಸಿದರು. ಅವರ ಸಮಾಜಮುಖಿ ಚಟುವಟಿಕೆಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಸೇವೆಯು ಇಂದಿಗೂ ಜನತೆಗೆ ದಾರಿದೀಪವಾಗಿದೆ. ಅವರ ಆದರ್ಶಗಳು ಯುವಕರ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೂ ಮಾದರಿಯಾಗಿದೆ.

ಗಾಂಧೀಜಿಯವರ ತತ್ವಗಳಿಂದ ಪ್ರೇರಿತರಾದ ಶ್ರೀ ನಿಟ್ಟೂರಕರ್ ಅವರು, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದರು. ಸತ್ಯ, ಅಹಿಂಸೆ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಿರಂತರವಾಗಿ ನಡೆದು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿದರು.

ಶ್ರೀ ಕೇಶವರಾವ್ ನಿಟ್ಟೂರಕರ್ ಮತ್ತು ಶತಾಯುಷಿ ಪೂಜ್ಯ ಡಾ. ಭೀಮಣ್ಣ ಖಂಡ್ರೆ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಅವರಿಬ್ಬರ ನಡುವಿನ ಸಂಬಂಧ ಆಪ್ತತೆಯಲ್ಲದೆ, ಗಾಂಧಿಯ ಆದರ್ಶಗಳ ಬಲವಾಗಿ ಬೆಸೆಯಲ್ಪಟ್ಟಿತ್ತು. ಸಮಾಜಮುಖಿ ಚಟುವಟಿಕೆಗಳಲ್ಲಿ ಅವರು ಪರಸ್ಪರವನ್ನು ಪ್ರೋತ್ಸಾಹಿಸುತ್ತಾ, ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಉಪನ್ಯಾಸಕರು, ಹಿರಿಯ ಸದಸ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.