ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಎಸ್.ಐ.ಟಿ.ಬಂಧಿಸಿ ವಿಚಾರಣೆ ಮಾಡಬೇಕು: ಎಸ್ ಮನೋಹರ್

ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಎಸ್.ಐ.ಟಿ.ಬಂಧಿಸಿ ವಿಚಾರಣೆ ಮಾಡಬೇಕು: ಎಸ್ ಮನೋಹರ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಪೆನ್ ಡ್ತೈವ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡರವರು ಕಾಂಗ್ರೆಸ್ ಪಕ್ಷದ ಮೇಲೆ ಅಪಪ್ರಚಾರ ಮತ್ತು ಬ್ಲಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಿ ಎಸ್.ಐ.ಟಿ.ಕೊಡಲೆ ಇವರನ್ನ ಬಂಧಿಸಬೇಕು ಎಂದು ಅಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನೆಡಿಸಿದರು.

.   ಎಸ್.ಮನೋಹರ್ ರವರು ಮಾತನಾಡಿ ಬಿಜೆಪಿ ಮುಖಂಡ ದೇವರಾಜೇಗೌಡ ರವರು ಮತ್ತು ಹೆಚ್.ಡಿ.ರೇವಣ್ಣರವರ ಕುಟುಂಬದ ವಿರುದ್ದ ಹೋರಾಟ ಮಾಡುತ್ತಾ ಬಂದಿದ್ದಾರೆ. ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಬಿಜೆಪಿ ಮುಖಂಡ ದೇವರಾಜೇಗೌಡನಿಗೆ ಪೆನ್ ಡ್ತೃೆವ್ ಕೊಟ್ಟಿದ್ದೇನೆ ನಾನು ಯಾರಿಗೂ ಕೊಟ್ಟಿಲ್ಲ ಎಂದು ಹೇಳಿದ್ದಾನೆ. ಹಾಸನದಲ್ಲಿ ರಸ್ತೆಗಳಲ್ಲಿ ಮತ್ತು ಎಲ್ಲರ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ಹಗರಣ ಪೆನ್ ಡ್ತೃೆವ್ ಹರಿದಾಡಲು ದೇವರಾಜೇಗೌಡ ರವರ ಕಾರಣ ಎಂದು ತಿಳಿದು ಬರುತ್ತದೆ.

.    ಪ್ರಜ್ವಲ್ ರೇವಣ್ಣಗೇ ಟಿಕೇಟು ನೀಡಬಾರದು ಮತ್ತು ಸಂಸದ ಸದಸ್ಯ ರದ್ದು ಮಾಡಬೇಕು ಎಂದು ಹೋರಾಟ ಮಾಡಿದ್ದು ದೇವರಾಜೇಗೌಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಮೇಲೆ ವಿನಾಕಾರಣ ಅರೋಪ ಮಾಡುತ್ತಿದ್ದಾರೆ ಹಾಗೂ ದೇವರಾಜೇಗೌಡರು ಜೆಡಿಎಸ್ ಪಕ್ಷದ ಏಜೆಂಟರಂತೆ ಬಿಜೆಪಿ ಪಕ್ಷ ಬಚಾವ್ ಆಗಲು ಪ್ರಯುತ್ನ ಮಾಡುತ್ತಿದ್ದಾರೆ. ಕೊಡಲೆ ಎಸ್.ಐ.ಟಿ.ಇಲಾಖೆ ದೇವರಾಜ್ ಗೌಡರವರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂಬ ಮನವಿ.

.   ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ , ಜಿಲ್ಲಾಧ್ಯಕ್ಷ ನಂದಕುಮಾರ್, ಪರಿಸರ ರಾಮಕೃಷ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಮಲ್ಲೇಶ್, ರಾಜೇಂದ್ರ ಮತ್ತು ಪರಿಸರ ರಾಮಕೃಷ್ಣ, ಪ್ರಕಾಶ್, ಹೇಮರಾಜ್, ಚೇತನ್, ಪುಟ್ಟರಾಜು, ರಂಜಿತ್, ಚಿನ್ನಿಪ್ರಕಾಶ್, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು