ನಾವೀನ್ಯತೆಯನ್ನು ಸಂಭ್ರಮಿಸಿ, ಪ್ರತಿಭೆಗಳನ್ನು ಪುರಸ್ಕರಿಸಿದ ಎಲ್&ಟಿ ಟೆಕ್ನಾಲಜಿ ಸರ್ವೀಸಸ್

ನಾವೀನ್ಯತೆಯನ್ನು ಸಂಭ್ರಮಿಸಿ, ಪ್ರತಿಭೆಗಳನ್ನು ಪುರಸ್ಕರಿಸಿದ ಎಲ್&ಟಿ ಟೆಕ್ನಾಲಜಿ ಸರ್ವೀಸಸ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಲ್ಪಡುವ ಭಾರತದ ಅತಿದೊಡ್ಡ ನಾವೀನ್ಯತಾ ವೇದಿಕೆಯಾದ ಟೆಕ್ಜಿಯಂ® (TECHgium®)ನ ಏಳನೇ ಆವೃತ್ತಿಯು ಗುರುವಾರ ಮುಕ್ತಾಯಗೊಂಡಿದೆ. ಎಲ್ಟಿಟಿಎಸ್ನ ಹೊಸ ಬೆಂಗಳೂರು ಕ್ಯಾಂಪಸ್ನಲ್ಲಿ ನಡೆದ ಈ ವಾರ್ಷಿಕ ತಂತ್ರಜ್ಞಾನ ಸ್ಪರ್ಧೆಗೆ ದೇಶಾದ್ಯಂತ ಇರುವ 503 ಎಂಜಿನಿಯರಿಂಗ್ ಸಂಸ್ಥೆಗಳ 36,765ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.

2016 ರಲ್ಲಿ ಪ್ರಾರಂಭವಾದ ಲ್&ಟಿ ಟೆಕ್ನಾಲಜಿ ಸರ್ವೀಸಸ್ (ಎಲ್ ಟಿ ಟಿ ಎಸ್) ಆಯೋಜಿಸುವ ಶೈಕ್ಷಣಿಕ- ಔದ್ಯಮಿಕ ಎಂಜಿನಿಯರಿಂಗ್ ನಾವೀನ್ಯತಾ ಹ್ಯಾಕಥಾನ್ ಆಗಿರುವ ಟೆಕ್ಜಿಯಂ® (TECHgium®) ಈಗ ಭಾರಿ ಜನಪ್ರಿಯವಾಗಿದೆ. ಈ ವರ್ಷದ ಸ್ಪರ್ಧೆಯಲ್ಲಿ ಅಗ್ರ ಸ್ಥಾನ ಪಡೆದ ವಿಜೇತರು ಒಟ್ಟು ರೂ.18 ಲಕ್ಷಕ್ಕಿಂತಲೂ ಹೆಚ್ಚಿನ ನಗದು ಬಹುಮಾನ ಪಡೆದುಕೊಂಡರು. ಭಾರತದ ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ತಾವು ವಹಿಸಿದ ಪ್ರಮುಖ ಪಾತ್ರಕ್ಕಾಗಿ ಭಾರತದ ಕ್ಷಿಪಣಿ ಮಹಿಳೆ ಎಂದು ಜನಪ್ರಿಯವಾಗಿರುವ ಡಾ. ಟೆಸ್ಸಿ ಥಾಮಸ್ ಅವರು ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಅವರ ಉಪಸ್ಥಿತಿ ಮತ್ತು ಅವರ ಮಾತಿನಲ್ಲಿ ದಕ್ಕಿದ ಒಳನೋಟಗಳಿಂದ ನೆರೆದಿದ್ದ ಪ್ರೇಕ್ಷಕರು ಸ್ಫೂರ್ತಿ ಪಡೆದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ಟೆಸ್ಸಿ ಥಾಮಸ್, “ದೇಶಾದ್ಯಂತ ಇರುವ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ತಾಂತ್ರಿಕ ಆವಿಷ್ಕಾರಗಳನ್ನು ನೋಡುವುದೇ ಆನಂದದಾಯಕವಾದ ವಿಚಾರವಾಗಿದೆ. ಅಂತಹ ತಂತ್ರಜ್ಞಾನ ಆವಿಷ್ಕಾರಗಳು ಭವಿಷ್ಯಕ್ಕೆ ಹೊಂದುವ ಎಂಜಿನಿಯರಿಂಗ್ ಅಪ್ಲಿಕೇಶನ್ಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿವೆ. ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಈ ಶ್ಲಾಘನೀಯ ಉಪಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ಕಳೆದ ಏಳು ವರ್ಷಗಳಲ್ಲಿ ಯುವ ಮನಸ್ಸುಗಳು ನಾವೀನ್ಯತೆಯ ಅನ್ವೇಷಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ಮಾಡಿದೆ. ಯುವ ಇಂಜಿನಿಯರ್ಗಳ ನವೀನ ಆಲೋಚನೆಗಳನ್ನು ಒಟ್ಟುಗೂಡಿಸುವ ಮೂಲಕ ಟೆಕ್ಜಿಯಂ® (TECHgium®) ನಂತಹ ವೇದಿಕೆಗಳು ನಮ್ಮ ರಾಷ್ಟ್ರದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತದ #EngineeringTheChange ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ" ಎಂದು ಹೇಳಿದರು.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಎರಡು ದಿನಗಳ ಕಾಲ ನಡೆದ ಈ ಹ್ಯಾಕಥಾನ್ ನಲ್ಲಿ ಯುಎವಿಗಳು, ಮೆಡಿಕಲ್ ಡಯಾಗ್ನಾಸ್ಟಿಕ್ಸ್, ರೋಬೊಟಿಕ್ಸ್, ಕಂಪ್ಯೂಟ್ ವಿಷನ್, ಅನಾಲಿಟಿಕ್ಸ್, ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ವೈರ್ಲೆಸ್ ಟ್ರಾನ್ಸ್ ಮಿಷನ್ ಮುಂತಾದ ಚಲನಶೀಲತೆ, ಸುಸ್ಥಿರತೆ ಮತ್ತು ಹೈ-ಟೆಕ್ ವಿಚಾರಗಳನ್ನು ಒಳಗೊಂಡಿರುವ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ನೈಜ- ಪ್ರಪಂಚದ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರಗಳನ್ನು ಕಂಡುಹಿಡಿಯುವ ಮೂಲಕ ಸಮಸ್ಯೆ ಪರಿಹರಿಸಲು ಪ್ರೇರೇಪಿಸಲಾಯಿತು. ಜೊತೆಗೆ ಅವರಿಗೆ ಟೆಕ್ಜಿಯಂ® (TECHgium®) ಇನ್ನೋವೇಟರ್ಸ್ ಎಂಬ ಮನ್ನಣೆ ನೀಡುವ ಮತ್ತು ಎಲ್ ಟಿ ಟಿ ಎಸ್ ನಲ್ಲಿ ಕೆಲಸ ಮಾಡುವ ಅವಕಾಶ ಇರುವುದಾಗಿ ತಿಳಿಸಲಾಯಿತು.

ಟೆಕ್ಜಿಯಂ® (TECHgium®) 2024ರ 7 ನೇ ಆವೃತ್ತಿಯ ವಿಜೇತ ಸ್ಥಾನವನ್ನು ಬಿ ವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತೆಲಂಗಾಣ ತಂಡ ಪಡೆದಿದ್ದು, ಅವರು ತಮ್ಮ ಇವಿಟಿಓಎಲ್ (eVTOL) ಡಿಟೆಕ್ಟ್ ಆಂಡ್ ಅವಾಯ್ಡ್ ಸಿಸ್ಟಮ್ಸ್ ಗಾಗಿ ಎಐ ಆಧಾರಿತ ಸಿಚುವೇಷನಲ್ ಅವೇರ್ ನೆಸ್ ಅಲ್ಗಾರಿದಮ್ ಕುರಿತ ಪ್ರಾಜೆಕ್ಟ್ ನ ಮೂಲಕ ಗಮನ ಸೆಳೆದರು. ದ್ವಿತೀಯ ಸ್ಥಾನವನ್ನು ಶ್ರೀ ರಾಮಕೃಷ್ಣ ಎಂಜಿನಿಯರಿಂಗ್ ಕಾಲೇಜು, ಕೊಯಂಬತ್ತೂರು ತಂಡದ ವಿದ್ಯಾರ್ಥಿಗಳು ಪಡೆದಿದ್ದು, ಅವರು ಟ್ವಿನ್ಸ್ಕೇಪ್ ಆಯಿಲ್ ವೆಲ್ ಮಾನಿಟರ್ ಪ್ರೊಟೊಟೈಪ್ ಅಭಿವೃದ್ಧಿ ಕಾನ್ಸೆಪ್ಟ್ ಅನ್ನು ಸಲ್ಲಿಸಿದ್ದರು. ಮೂರನೇ ಸ್ಥಾನವನ್ನು ಅಮೃತಾ ವಿಶ್ವವಿದ್ಯಾಪೀಠಂ, ಚೆನ್ನೈನ ವಿದ್ಯಾರ್ಥಿಗಳು ಪಡೆದರು. ಅವರು ಇಂಟೆಲಿಜೆಂಟ್ ರೇಡಿಯಾಲಜಿಸ್ಟ್ ಅಸಿಸ್ಟೆಂಟ್ ಎಂಆರ್ಐ, ನೀ ಇಂಜುರಿ ಡಿಟೆಕ್ಷನ್ ಸಿಸ್ಟಮ್ (ಮೊಣಕಾಲು ಗಾಯ ಪತ್ತೆ ವ್ಯವಸ್ಥೆ) ಯೋಜನೆಯನ್ನು ಸಲ್ಲಿಸಿ ಮೆಚ್ಚುಗೆ ಗಳಿಸಿದರು. ಹೆಚ್ಚುವರಿಯಾಗಿ, ವಿಶೇಷ ತೀರ್ಪುಗಾರರ ಬಹುಮಾನವನ್ನು ಸ್ಥಾನವನ್ನು ಬಿ ವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತೆಲಂಗಾಣ ತಂಡವು, ಅವರ ನಗರ ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಸ್ಥಳಗಳ ಗುರುತಿಸುವಿಕೆಯ ಯೋಜನೆಗಾಗಿ ಪಡೆಯಿತು. ವಿಶೇಷವಾಗಿ ಪ್ರೇಕ್ಷಕರ ಆಯ್ಕೆಯ ಪ್ರಶಸ್ತಿಯು (ಇನ್ಸ್ಟಿಟ್ಯೂಟ್), (ಸ್ಥಳ) ತಂಡಕ್ಕೆ ಹೋಯಿತು.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಒಂಬತ್ತು ತಿಂಗಳುಗಳಿಗೂ ಹೆಚ್ಚು ಕಾಲ ತಮ್ಮನ್ನು ತಾವು ಈ ಸ್ಪರ್ಧೆಗೆ ಸಮರ್ಪಿಸಿಕೊಂಡಿದ್ದರು, ಈ ಸಂದರ್ಭದಲ್ಲಿ ಎಲ್ ಟಿ ಟಿ ಎಸ್ ನ ತಾಂತ್ರಿಕ ತಜ್ಞರು ಮತ್ತು ವಿಷಯ ತಜ್ಞರಿಂದ ಮಾರ್ಗದರ್ಶನ ಪಡೆದರು. ಪ್ರೂಫ್ ಆಫ್ ಕಾನ್ಸೆಪ್ಟ್ (ಪಿಓಸಿಗಳು) ಅಭಿವೃದ್ಧಿ ಸಲುವಾಗಿ ಮೌಲ್ಯಮಾಪನಗಳು ಮತ್ತು ಪರಿಕಲ್ಪನಾ ಕಾರ್ಯಕ್ರಮ ಸರಣಿಗಳು ನಡೆದುವು. ಅವುಗಳನ್ನು ಆಧರಿಸಿ ಅಗ್ರ 32 ಎಂಜಿನಿಯರಿಂಗ್ ತಂಡಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಫೈನಲಿಸ್ಟ್ ಗಳು ತಮ್ಮ ಸೃಜನಶೀಲ ಮೂಲಮಾದರಿಗಳನ್ನು ಉದ್ಯಮದ ಪರಿಣತರು, ಶಿಕ್ಷಣ ತಜ್ಞರು ಮತ್ತು ವಿಶ್ಲೇಷಕರನ್ನು ಒಳಗೊಂಡ ತೀರ್ಪುಗಾರರ ತಂಡದ ಮುಂದೆ ಪ್ರದರ್ಶಿಸಿದರು. ಸಂಪೂರ್ಣ ಮೌಲ್ಯಮಾಪನದ ನಂತರ, ಟೆಕ್ಜಿಯಂ® (TECHgium®) ಮೂಲಕ ಸಾಧಿಸಿದ ಅತ್ಯುತ್ತಮ ನಾವೀನ್ಯತಾ ಪರಿಹಾರಗಳನ್ನು ಪ್ರದರ್ಶಿಸಿದ ಮೂರು ವಿಜೇತರನ್ನು ಘೋಷಿಸಲಾಯಿತು.

ಈ ವರ್ಷದ ಸ್ಪರ್ಧೆಯಲ್ಲಿ ಅಂತಿಮ ಹಂತದ ಸ್ಪರ್ಧಿಗಳು ಕಾರ್ಬನ್ ಚೈನ್, ಸವಾಲಿನ ಪರಿಸ್ಥಿತಿಗಳಲ್ಲಿ ಉತ್ತಮ ಟ್ರಾಫಿಕ್ ಸೈನ್ ಡಿಟೆಕ್ಷನ್, ಇವಿಟಿಓಎಲ್ಗಳಿಗಾಗಿ ಸ್ಮಾರ್ಟ್ ಏರ್ ಟ್ರಾಫಿಕ್ ಮ್ಯಾನೇಜ್ಮೆಂಟ್, ಅಟೋನಾಮಸ್ ಸ್ಟಾಕ್ ಚೆಕಿಂಗ್ ರೋಬೋಟ್, ಆರ್ಎಫ್ಐಡಿ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಎಕ್ಸ್ ಎಎಸ್ಆರ್ಎಸ್ (ಅಟೋಮೇಟೆಡ್ ಸ್ಟೋರೇಜ್ ಆಂಡ್ ರಿಟ್ರೀವಲ್ ಸಿಸ್ಟಮ್ಸ್), ವಿಶುವಲ್ ಇನ್ ಸ್ಪೆಕ್ಷನ್ ಸಿಸ್ಟಮ್(ದೃಶ್ಯ ತಪಾಸಣಾ ವ್ಯವಸ್ಥೆ) ಸೇರಿದಂತೆ ವ್ಯಾಪಕ ಶ್ರೇಣಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಧರಿಸಿದ ಪಿಓಸಿಗಳನ್ನು ಪ್ರಸ್ತುತಪಡಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿನ ಎಲ್ ಟಿ ಟಿ ಎಸ್ ಬದ್ಧತೆಯನ್ನು ಪುನರುಚ್ಛರಿಸುತ್ತಾ ಮಾತನಾಡಿದ ಎಲ್&ಟಿ ಟೆಕ್ನಾಲಜಿ ಸರ್ವೀಸಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅಭಿಷೇಕ್ ಸಿನ್ಹಾ, "ಟೆಕ್‌ಜಿಯಂ® (TECHgium®) ಜಾಗತಿಕ ಮಟ್ಟದ ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಶೈಕ್ಷಣಿಕ ಸಮುದಾಯಗಳಿಂದ ನಡೆಸಲ್ಪಡುವ ಪ್ರಮುಖ ವೇದಿಕೆಯಾಗಿದೆ. 

ಮಹತ್ವಾಕಾಂಕ್ಷಿ ಇಂಜಿನಿಯರ್‌ಗಳಲ್ಲಿ ನಾವೀನ್ಯತೆ ಮತ್ತು ಪರಿಣತಿಯನ್ನು ಬೆಳೆಸುವ ಪ್ರಮುಖ ಉಪಕ್ರಮವಾದ ಟೆಕ್‌ಜಿಯಂ® (TECHgium®) ನಂತಹ ವೇದಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಸಾಧಾರಣ ಪ್ರತಿಭೆಗಳನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಈ ಕಾರ್ಯಕ್ರಮ ತೋರಿಸುತ್ತದೆ. ಈ ಉಪಕ್ರಮದಿಂದ ಆಗುವ ದೊಡ್ಡ ಪರಿಣಾಮ ಏನೆಂದರೆ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದು, ಇವೆರಡೂ ಕ್ಷೇತ್ರಗಳ ಮಧ್ಯೆ ಸೇತುವೆ ಆಗುವುದು, ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಬೆಳೆಸುವುದು. ಇದೆಲ್ಲಾ ಕಾರಣಗಳಿಂದಾಗಿ ಕಾರ್ಯಕ್ರಮದ ಪ್ರಾರಂಭದಿಂದಲೂ ಈಗಿನವರೆಗೆ ನೋಂದಣಿಗಳು ಮತ್ತು ಕಾನ್ಸೆಪ್ಟ್ (ಪರಿಕಲ್ಪನೆ) ಸಲ್ಲಿಕೆಯ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೆ ಮತ್ತು ವಿಜೇತರಿಗೆ ತಮ್ಮ ಅಪೂರ್ವ ಸಾಧನೆಗಳಿಗಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು ಸಲ್ಲುತ್ತವೆ. ನಿಮ್ಮ ಸಾಧನೆಗಳು ಉದ್ಯಮದ ಪ್ರಗತಿಗೆ ಕೊಡುಗೆ ನೀಡುವುದಲ್ಲದೆ ಹೊಸ ದಾರಿಯನ್ನು ಅನ್ವೇಷಿಸಲು ನಮ್ಮನ್ನು ಪ್ರೇರೇಪಿಸುತ್ತದೆ" ಎಂದು ಹೇಳಿದರು.