ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರ ಬ್ರಷ್ಟಾಚಾರದ ಪ್ರಕರಣವನ್ನು ತನಿಖೆ ನಡೆಸಬೇಕು: ಎಸ್ ಮನೋಹರ್
Corruption case of BJP and JDS party leaders should be probed: S Manohar
ಬೆಂಗಳೂರು: ಬಿಜೆಪಿ ಜೆಡಿಎಸ್ ಪಕ್ಷದ ನಾಯಕರ ಭ್ರಷ್ಟಾಚಾರದ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ರವರು ಆಗ್ರಹಿಸಿದ್ದಾರೆ.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಒತ್ತಡದ ಮೂಲಕ ಮತ್ತು ಬಿಜೆಪಿ ಜೆಡಿಎಸ್ ಹಾಗೂ ಖಾಸಗಿ ವ್ಯಕ್ತಿಗಳ ಸುಳ್ಳು ದೂರನ್ನು ಆಧರಿಸಿ ಪ್ರಾಮಾಣಿಕ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಶೋಕಸ್ ನೋಟಿಸ್ ನೀಡಿರುವ ಗೌರವಾನ್ವಿತ ರಾಜ್ಯಪಾಲರೇ ಕೂಡಲೇ ತಾವು ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂದಕ್ಕೆ ಪಡೆದು ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಜೆಡಿಎಸ್ ಪಕ್ಷದ ನಾಯಕರ ಭ್ರಷ್ಟಾಚಾರದ ಪ್ರಕರಣವನ್ನು ತನಿಖೆ ನಡೆಸಬೇಕು. ಭಾರತೀಯ ಜನತಾ ಪಕ್ಷ ಹಾಗೂ ಜನತಾದಳದ ದುರಾಡಳಿತದ ಅವಧಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತಾರು ನಿವೇಶನಗಳು ಅಕ್ರಮವಾಗಿ ಮಂಜೂರಾತಿ ಮಾಡಲಾಗಿದೆ ಇದರ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗಿದೆ, ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮರೆಮಾಚಲು ಮಾನ್ಯ ಮುಖ್ಯಮಂತ್ರಿಗಳ ಧರ್ಮಪತ್ನಿ ರವರ ಸಹೋದರ ನೀಡಿರುವ ಭೂಮಿಯನ್ನು ಅಕ್ರಮವೆಂದು ಬಿಜೆಪಿ ಬಿಂಬಿಸುತ್ತಿದೆ ಅಕ್ರಮ ನಡೆದಿರುವ ಬಗ್ಗೆ ಎಲ್ಲಿ ಮಾಹಿತಿ ಇದೆ? ಎಲ್ಲಿ ಯಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಥವಾ ಹಿಂದಿನ ಬಿಜೆಪಿ ಸರ್ಕಾರ ಈ ಪ್ರಕರಣದಲ್ಲಿ ಭ್ರಷ್ಟಾಚಾರ ಅಡಗಿದೆ ಎಂಬುವ ಮಾಹಿತಿಯನ್ನು ಯಾವ ತನಿಖಾ ಸಂಸ್ಥೆಯಿಂದ ವರದಿಯನ್ನು ಪಡೆದಿದೆ ಎಂಬುದನ್ನು ತಿಳಿಸಬೇಕು.
ಈಗ ಕಾಂಗ್ರೆಸ್ ಸರ್ಕಾರ ತನಿಖೆಗೆ ಆದೇಶಿಸಿದೆ ಎಂಬುವ ಪರಿಜ್ಞಾನವನ್ನು ಸಹ ಬಿಜೆಪಿ ನಾಯಕರು ಇಲ್ಲದ ಹಾಗೆ ಆಡುತ್ತಿದ್ದಾರೆ, ಬಿಜೆಪಿ ಅವಧಿಯಲ್ಲಿ ಮಂಜೂರಾತಿ ಆದ ಭೂಮಿಯನ್ನ ಬಿಜೆಪಿಯವರು ಇಂದು ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ಭ್ರಷ್ಟಾಚಾರ ನಡೆದಿದ್ದರೆ ಏಕೆ ಕ್ರಮ ಕೈಗೊಳ್ಳಲು ಈ ಹಿಂದೆ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ವಿಫಲವಾಯಿತು ಎಂಬುದನ್ನು ನೀವು ಅವರ ಬಳಿ ಮಾಹಿತಿ ಪಡೆಯಬೇಕು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಆದರೆ ಅದನ್ನ ಹೊರತುಪಡಿಸಿ ಭೂಮಿ ಕಳೆದುಕೊಂಡು ಈಗ ಮೂಡ ನೀಡಿರುವ ಪರ್ಯಾಯ ನಿವೇಶನಾದ ಬಗ್ಗೆ ಭ್ರಷ್ಟಾಚಾರ ನಡೆದಿದೆ ಎಂಬುವ ಸುಳ್ಳು ಆರೋಪಕ್ಕೆ ತಾವು ಕಿವಿಗೊಡಬಾರದು, ಯಾರು ತಮಗೆ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಹಾಗೂ ಪತ್ರ ನೀಡಿದ್ದಾರೋ ಅಂತಹ ಬಿಜೆಪಿಯವರೆ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುವ ಮಾಹಿತಿಯನ್ನು ತಾವು ಕಲೆ ಹಾಕಿದರೇ ಅವರ ವಿರುದ್ಧ ತಾವುಗಳೇ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೀರಾ, ಆದ್ದರಿಂದ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ರಾಜಕೀಯ ಒತ್ತಡಕ್ಕೆ ಮಣಿಯದೆ ತಾವು ನೀಡಿರುವ ನೋಟಿಸ್ಅನ್ನು ಹಿಂದಕ್ಕೆ ಪಡೆಯಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದರು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿ ಜನಾರ್ಧನ್, ಎ.ಆನಂದ್, ಪ್ರಕಾಶ್, ಪುಟ್ಟರಾಜು, ಹೇಮರಾಜ್, ಚಂದ್ರಶೇಖರ್, ರಂಜಿತ್, ಉಮೇಶ್, ರವಿಕುಮಾರ್, ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.