ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ರವರ ಪರ ಭರ್ಜರಿ ಬೈಕ್ ಜಾಥ
ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರವರ ಪರ ಮತಯಾಚನೆ ಮಾಡಲು ಬೃಹತ್ ಬೈಕ್ ಜಾಥ ಕಾರ್ಯಕ್ರಮ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರ್ ಸ್ವಾಮಿರವರು, ದಕ್ಷಿಣ ಜಿಲ್ಲಾ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯರವರು, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು, ಬಿಜೆಪಿ ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರು, ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್.ಪ್ರಕಾಶ್, ಪಾಲಿಕೆ ಮಾಜಿ ಸದಸ್ಯರುಗಳಾದ ಗಂಗಭೈರಯ್ಯ, ರಾಮಪ್ಪ ಮೋಹನ್ ಕುಮಾರ್, ದಾಸೇಗೌಡರವರು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ದ್ವಿಚಕ್ರ ವಾಹನ ಮೂಲಕ ಬಿಜೆಪಿ ಮತ ನೀಡುವಂತೆ ಮಾತಯಾಚನೆ ಮಾಡಿದರು.
ಚಂದ್ರ ಬಡಾವಣೆ ಗಣಪತಿ ದೇವಸ್ಥಾನದಿಂದ ಆರಂಭವಾಗಿ ಮೂಡಲಪಾಳ್ಯ ಮುಖ್ಯರಸ್ತೆ, ಪ್ರಶಾಂತ್ ನಗರ, ಪಟ್ಟೇಗಾರಪಾಳ್ಯ, ಕಾವೇರಿಪುರ, ಕಾಮಾಕ್ಷಿಪಾಳ್ಯ, ಜೈ ಮುನಿರಾವ್ ಸರ್ಕಲ್ 25ಕಿಲೋ ಮೀಟರ್ ವರಗೆ ಬೈಕ್ ಜಾಥ ನಡೆಯಿತು. ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ದೇಶಕ್ಕೆ ಮೋದಿ ಗ್ಯಾರಂಟಿ ಮತ್ತು ದೇಶದ ಸುಭದ್ರತೆ ಐಕ್ಯತೆಗಾಗಿ, ಬೆಂಗಳೂರು ಸರ್ವಾಂಗೀಣ ಅಭಿವೃದ್ದಿಗೆ ಬಿಜೆಪಿ ಮತ ನೀಡಿ ಎಂದು ಮಾತಯಾಚನೆ.
ಕೇಸರಿ ಶಾಲು, ಬಿಜೆಪಿ ಬಾವುಟ ಮತ್ತು ಜೆಡಿಎಸ್ ಪಕ್ಷದ ಬಾವುಟಗಳು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಂಗೊಳಿಸುತ್ತಿತ್ತು. ಹಿರಿಯ ನಾಗರಿಕರು ಮತ್ತು ಮಹಿಳೆಯರು ಆಗಮಿಸಿ ಶುಭಾ ಕೋರುವ ದೃಶ್ಯಗಳು. ಜೈಶ್ರೀರಾಮ್ , ದೇಶಕ್ಕೆ ಮೋದಿ ಗ್ಯಾರಂಟಿ ಮತ್ತು ಕೇಂದ್ರದಲ್ಲಿ ಮೋದಿ, ದಕ್ಷಿಣದಲ್ಲಿ ಸೂರ್ಯ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು.