ಭಾರತ ಗ್ರೀನ್ ಹೈಡ್ರೋಜನ್ ಹಬ್‌ನಿಂದ ಸುಸ್ಥಿರ ಭವಿಷ್ಯ : ಸಚಿವ ಪ್ರಹ್ಲಾದ್ ಜೋಶಿ

Sustainable Future from India Green Hydrogen Hub: Minister Prahlad Joshi

ಭಾರತ ಗ್ರೀನ್ ಹೈಡ್ರೋಜನ್ ಹಬ್‌ನಿಂದ ಸುಸ್ಥಿರ ಭವಿಷ್ಯ : ಸಚಿವ ಪ್ರಹ್ಲಾದ್ ಜೋಶಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ನವದೆಹಲಿ: ಭಾರತ ಗ್ರೀನ್ ಹೈಡ್ರೋಜನ್ ಹಬ್ ಆಗಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ದೆಹಲಿಯಲ್ಲಿ ಸೆ.11ರಿಂದ 13ರವರೆಗೆ ನಡೆಯಲಿರುವ ಗ್ರೀನ್ ಹೈಡ್ರೋಜನ್ ಮಿಷನ್ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೈಡ್ರೋಜನ್ ಹಬ್‌ನಿಂದ ಸುಸ್ಥಿರ ಭವಿಷ್ಯ ನಿರ್ಮಾಣ ಸಾಧ್ಯ. ಭೂಮಂಡಲ ಸುರಕ್ಷತೆ ವಿಚಾರದಲ್ಲಿ ಭಾರತ ಜಾಗತಿಕ ನಾಯಕನಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಂತೆ ಭಾರತವೂ ಹೊಸ ಆವಿಷ್ಕಾರ ಶುರುಮಾಡಿದೆ ಎಂದರು. ಗ್ರೀನ್ ಹೈಡ್ರೋಜನ್ ಮಿಷನ್ ಅಂತಾರಾಷ್ಟ್ರೀಯ ಸಮ್ಮೇಳನದ ಉತ್ಪನ್ನ ಮತ್ತು ತಂತ್ರಜ್ಞಾನದ ಪ್ರದರ್ಶನದಲ್ಲಿ 120ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. 150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಿಕರು ಭಾಗವಹಿಸಲಿದ್ದಾರೆ ಎಂದ ಅವರು, ಗ್ರೀನ್ ಹೈಡ್ರೋಜನ್ ಸಂಬಂಧ ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ನೆದರ್ಲ್ಯಾಂಡ್ಸ್ ಬಗ್ಗೆ ಅಧಿವೇಶನಗಳಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಗ್ರೀನ್ ಕಾರ್ಯಕ್ರಮವನ್ನು ನವೀಕರಿಸಬಹುದಾದ ಹೊಸ ಮತ್ತು ಇಂಧನ ಸಚಿವಾಲಯವು ಭಾರತ ಸರ್ಕಾರದ ಪ್ರಧಾನ ವಿಜ್ಞಾನಿಗಳ ಕಚೇರಿಯ ಸಹಯೋಗದೊಂದಿಗೆ ಆಯೋಜಿಸುತ್ತಿದೆ.