ತನ್ನ ದುರಾಡಳಿತದಿಂದ ಕೇವಲ 10 ತಿಂಗಳುಗಳಲ್ಲಿ ಕರ್ನಾಟಕವನ್ನು ಹಾಳುಗೆಡುವಿದ ಕಾಂಗ್ರೆಸ್: ಅಮಿತ್ ಶಾ
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ಕಟ್ಟಾಳು ಅಮಿತ್ ಶಾ ಅವರು ಲೋಕಸಭೆ ಚುನಾವಣಾ ಪ್ರಚಾರದ ಭಾಗವಾಗಿ ಶುಕ್ರವಾರ ಕರ್ನಾಟಕದ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕೇವಲ 10 ತಿಂಗಳಲ್ಲಿ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ದನನೀಯ ಸ್ಥಿತಿಗೆ ತಂದಿದೆ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೇವಲ 10 ತಿಂಗಳಲ್ಲಿ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಕರ್ನಾಟಕ ರಾಜ್ಯವನ್ನು ಪ್ರಕ್ಷುಬ್ಧತೆ ಮತ್ತು ಅವ್ಯವಸ್ಥೆಯತ್ತ ಕೊಂಡೊಯ್ಯಿತು.
ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ನೀಡುತ್ತಿದ್ದ ರೂ. 4,000 ಧನಸಹಾಯವನ್ನು ಏಕಾಏಕಿ ಸ್ಥಗಿತಗೊಳಿಸಿರುವುದು ಕೃಷಿ ಸಮುದಾಯದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಿರುವ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ಇಂತಹ ದೂರದೃಷ್ಟಿಯಿಲ್ಲದ ನೀತಿಗಳು ಸಾಮಾನ್ಯ ಜನರಿಗೆ ದ್ರೋಹ ಮಾಡುವುದಲ್ಲದೆ, ಆಡಳಿತದಲ್ಲಿ ಕಾಂಗ್ರೆಸ್ನ ಬದ್ಧತೆ ಮತ್ತು ದೂರದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಇದಲ್ಲದೆ, 'ಲವ್ ಜಿಹಾದ್' ವಿಷಯದ ಸುತ್ತಲಿನ ಸವಾಲುಗಳ ಸಂಕೇತವಾದ ನೇಹಾ ಪ್ರಕರಣಕ್ಕೆ ನ್ಯಾಯ ನೀಡಲು ಸಾಧ್ಯವಾಗದಿರುವುದು ಕಾಂಗ್ರೆಸ್ನ ಅಸಮರ್ಥತೆಯನ್ನು ಬಹಿರಂಗಪಡಿಸುತ್ತದೆ. ನೇಹಾ ಅವರಂತಹ ಸಂತ್ರಸ್ತರಿಗೆ ಪಕ್ಷವು ನ್ಯಾಯವನ್ನು ನೀಡಲು ಸಾಧ್ಯವಾಗದಿದ್ದರೆ, ಅಂತಹ ಸೂಕ್ಷ್ಮ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸುವುದು ಮಾತ್ರ ಕಾರ್ಯಸಾಧುವಾದ ಪರಿಹಾರವಾಗಿದೆ. ಇಂತಹ ನಿರ್ಣಾಯಕ ವಿಷಯಗಳನ್ನು ಪರಿಹರಿಸುವಲ್ಲಿನ ಕಾಂಗ್ರೆಸ್ನ ವೈಫಲ್ಯವು ಅದರ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆ ಕುರಿತು ಪ್ರಶ್ನೆ ಹುಟ್ಟು ಹಾಕುತ್ತದೆ.
ಹಲವಾರು ಪ್ರಯತ್ನಗಳ ಹೊರತಾಗಿಯೂ, ರಾಹುಲ್ ಗಾಂಧಿಯವರ ಕರ್ನಾಟಕ ರಾಜಕೀಯ ಪ್ರವೇಶ ಅಷ್ಟು ಯಶಸ್ಸನ್ನು ಪಡೆದಿಲ್ಲ. 20ಕ್ಕೂ ಹೆಚ್ಚು ಬಾರಿ ಲಾಂಚ್ ಆಗಲು ಪ್ರಯತ್ನಿಸಿದರೂ, ಲೆಕ್ಕವಿಲ್ಲದಷ್ಟು ರ್ಯಾಲಿಗಳನ್ನು ಮಾಡಿದರು, ಕಾಂಗ್ರೆಸ್ಸಿನ ಈ ಕುಡಿ ಮತದಾರರ ಪ್ರತಿಧ್ವನಿಯನ್ನು ಅರಿಯಲು ಹೆಣಗಾಡುತ್ತಲೇ ಇದೆ. ಜನರ ನಾಡಿ ಮಿಡಿತ ಅರಿಯುವಲ್ಲಿನ ಅವರ ಅಸಮರ್ಥತೆ, ಕಾಂಗ್ರೆಸ್ ನಾಯಕತ್ವದ ಬಗ್ಗೆ ಹೆಚ್ಚುತ್ತಿರುವ ಭ್ರಮನಿರಸನವನ್ನು ಎತ್ತಿ ತೋರಿಸುತ್ತದೆ. ಇದಲ್ಲದೆ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಕ್ಷವಾದ ಎಸ್ಡಿಪಿಐ ಜೊತೆ ಕಾಂಗ್ರೆಸ್ನ ಮೌನ ಮೈತ್ರಿಯು, ನೈತಿಕ ಸಮಗ್ರತೆ, ಕರ್ನಾಟಕದ ಶಾಂತಿ ಮತ್ತು ಸ್ಥಿರತೆಯೆಡೆಗಿನ ಪಕ್ಷದ ಬದ್ಧತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ. ಇಂತಹ ವಿವಾದಾತ್ಮಕ ಅಂಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನದೇ ಆದ ಮೌಲ್ಯಗಳನ್ನು ರಾಜಿ ಮಾಡಿಕೊಳ್ಳುವುದರ ಜೊತೆಗೆ ರಾಜ್ಯದ ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ.
ಇದಕ್ಕೆ ತದ್ವಿರುದ್ಧವಾಗಿ, ಬಿಜೆಪಿಯು ಕರ್ನಾಟಕದ ಭರವಸೆಯ ಕಿರಣವಾಗಿ ಹೊರಹೊಮ್ಮುತ್ತಿದೆ, ಅಂತರ್ಗತ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಎಲ್ಲಾ ನಾಗರಿಕರ ಕಲ್ಯಾಣಕ್ಕಾಗಿ ಅಚಲವಾದ ಬದ್ಧತೆಯ ದೃಷ್ಟಿಕೋನವನ್ನು ಹೊಂದಿದೆ. ತನ್ನ ಭರವಸೆಗಳನ್ನು ಈಡೇರಿಸುವ ಮತ್ತು ಪ್ರಗತಿಯ ವಾತಾವರಣವನ್ನು ಪೋಷಿಸುವ ದಾಖಲೆಯೊಂದಿಗೆ, ತೆವಳುತ್ತಾ ಸಾಗುತ್ತಿರುವ ಕಾಂಗ್ರೆಸ್ ನೇತೃತ್ವದ ಆಡಳಿತಕ್ಕೆ ಬಿಜೆಪಿ ವಿಶ್ವಾಸಾರ್ಹ ಪರ್ಯಾಯ ಆಯ್ಕೆಯಾಗಿದೆ.
ಕರ್ನಾಟಕವು ಮತ್ತೊಂದು ನಿರ್ಣಾಯಕ ಚುನಾವಣಾ ಘಟ್ಟವನ್ನು ಸಮೀಪಿಸುತ್ತಿರುವಾಗ, ಜನರ ಮುಂದಿರುವ ಆಯ್ಕೆಯು ಸ್ಪಷ್ಟವಾಗಿದೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸಧೃಡ ನಾಯಕತ್ವಕ್ಕೆ ಮತ ಹಾಕಿ, ಸಮೃದ್ಧಿ ಮತ್ತು ಸ್ಥಿರತೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದು ಅಥವಾ ಕಾಂಗ್ರೆಸ್ಸನ್ನು ಆರಿಸಿ, ಅನಿಶ್ಚಿತತೆ ಮತ್ತು ಹಿಂಜರಿತದ ಹಾದಿಯಲ್ಲಿ ಮುಂದುವರಿಯುವುದು. ಕಾಂಗ್ರೆಸ್ನ ವೈಫಲ್ಯಗಳು ಮತ್ತು ನ್ಯೂನತೆಗಳಿಗೆ ವೈರುಧ್ಯವಾಗಿ, ಕರ್ನಾಟಕದ ಉಜ್ವಲ ಭವಿಷ್ಯವನ್ನು ಬಲವಾಗಿ ಪ್ರತಿಧ್ವನಿಸುತ್ತಿರುವ ಬಿಜೆಪಿಯು, ರಾಜ್ಯದಲ್ಲಿ ಭರವಸೆ ಮತ್ತು ಪ್ರಗತಿಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ.
ಪ್ರಧಾನಿ ಮೋದಿಯವರ ಸರ್ಕಾರವು ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದೆ, ಕಾಂಗ್ರೆಸ್ನ ಭಯ ಹುಟ್ಟಿಸುವ ತಂತ್ರಗಳನ್ನು ತಳ್ಳಿ ಹಾಕಿ,370ನೇ ವಿಧಿಯನ್ನು ಯಶಸ್ವಿಯಾಗಿ ತೆಗೆದು ಹಾಕಿತು. ಇದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶವು ಪ್ರಗತಿಯೆಡೆಗೆ ಸಾಗುತ್ತಿರುವುದರ ನಿದರ್ಶನವಾಗಿದೆ.
ಕರ್ನಾಟಕವು ಮತ್ತೊಂದು ಚುನಾವಣಾ ಹಣಾಹಣಿಗೆ ಸಜ್ಜಾಗುತ್ತಿರುವಾಗ, ಭಾರತೀಯ ಜನತಾ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ವ್ಯತಿರಿಕ್ತ ನೀತಿ ನಿರೂಪಣೆಗಳ ಮೇಲೆ ಮತ್ತೊಮ್ಮೆ ಗಮನ ಹರಿಸುವುದು ಅವಶ್ಯಕವಾಗಿದೆ. ಕಾಂಗ್ರೆಸ್ ನೇತೃತ್ವದ ಆಡಳಿತ ತಪ್ಪು ಹೆಜ್ಜೆಗಳು ಮತ್ತು ವಿವಾದಗಳ ಸರಣಿಯೊಂದಿಗೆ, ರಾಜ್ಯವನ್ನು ಹಾಳುಗೆಡುವುತ್ತಿರುವಾಗ, ಬಿಜೆಪಿಯು ಸ್ಥಿರತೆ, ಪ್ರಗತಿ ಮತ್ತು ಪರಿಣಾಮಕಾರಿ ಆಡಳಿತದ ಭರವಸೆಯ ಮೂಲಕ ದಾರಿದೀಪವಾಗಿ ಹೊರಹೊಮ್ಮುತ್ತಿದೆ.