ದೇಶದ ಜನರಿಗೆ ಮೋದಿ ಗ್ಯಾರಂಟಿ ಕುರಿತು ನಂಬಿಕೆ ಇದೆ- ಶಾಸಕ ಎಸ್.ಸುರೇಶ್ ಕುಮಾರ್

ದೇಶದ ಜನರಿಗೆ ಮೋದಿ ಗ್ಯಾರಂಟಿ ಕುರಿತು ನಂಬಿಕೆ ಇದೆ- ಶಾಸಕ ಎಸ್.ಸುರೇಶ್ ಕುಮಾರ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀರಾಮಮಂದಿರ ವಾರ್ಡ್ ನಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ರವರ ಪರ ಮನೆ, ಮನೆಗಳಿಗೆ ತೆರಳಿ ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಬಿಜೆಪಿ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರಮೋದಿ ರವರ 10ವರ್ಷದ ಸಾಧನೆಗಳನ್ನು ಮತದಾರರಿಗೆ ತಿಳಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮತಯಾಚನೆ ಮಾಡಿದರು.

ಎಸ್. ಸುರೇಶ್ ಕುಮಾರ್ ರವರು* ಮಾತನಾಡಿ ದೇಶದ ಜನರಿಗೆ ಮೋದಿ ಗ್ಯಾರಂಟಿ ಬಗ್ಗೆ ನಂಬಿಕೆ ಇದೆ .ಪ್ರಧಾನಿ ನರೇಂದ್ರಮೋದಿರವರ ಪರ ದೇಶದಲ್ಲಿ ಅಲೆ ಇದೆ. ಕಳೆದ 10ವರ್ಷದಲ್ಲಿ ಪ್ರಧಾನಿ ನರೇಂದ್ರಮೋದಿರವರ ಪಾರದರ್ಶಕ ಆಡಳಿತದಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.

ಜನಧನ್, ಮುದ್ರ ಯೋಜನೆ, ಪಿ.ಎಂ.ವಿಶ್ವಕರ್ಮ ಯೋಜನೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭವ ಮತ್ತು ಜನೌಷಧಿ ಕೇಂದ್ರಗಳು ಸ್ಥಾಪನೆ. ಕೇಂದ್ರ ಸರ್ಕಾರ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದ ಕಾರಣದಿಂದ ದೇಶದಲ್ಲಿರುವ 25ಕೋಟಿ ಬಡತನ ರೇಖೆಯಿಂದ ಕೆಳಗಿರುವ ಜನರು ಆರ್ಥಿಕವಾಗಿ ಸಬಲರಾಗಿದ್ದಾರೆ. ಕೇಂದ್ರ ಲೋಕಸಭಾ ಅಭ್ಯರ್ಥಿ ಪಿ.ಸಿ.ಮೋಹನ್ ರವರು ಬೆಂಗಳೂರುನಗರದ ಅಭಿವೃದ್ದಿ ಕುರಿತು ಲೋಕಸಭಾ ಸಭೆಯಲ್ಲಿ ಮಾತನಾಡಿ ನಗರಕ್ಕೆ ಸಬ್ ಅರ್ಬನ್ ರೈಲು ಮತ್ತು ಪ್ರಧಾನಿ ಅವಾಸ್ ಯೋಜನೆ ಮನೆಗಳ ನಿರ್ಮಾಣ ಯೋಜನೆ ಕಾರ್ಯಗತವಾಗಲು ಕಾರಣಕರ್ತರಾಗಿದ್ದಾರೆ.

ಸತತ 500ವರ್ಷಗಳ ಹೋರಾಟದ ಪ್ರತಿಫಲ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭವ್ಯ ಶ್ರೀರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವುದು. ಬಿಜೆಪಿ ನುಡಿದಂತೆ ನಡೆದ ಪಕ್ಷ. ದೇಶದ ಜನರಿಗೆ ಮೋದಿ ಗ್ಯಾರಂಟಿ ಬಗ್ಗೆ ನಂಬಿಕೆ ಇದೆ 400ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.

ಮಂಡಲ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಮಾಜಿ ಪಾಲಿಕೆ ಸದಸ್ಯರುಗಳಾದ ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್ ಮತ್ತು ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಸತೀಶ್ ಭಗವಾನ್,ಟಿ.ಎನ್.ರಮೇಶ್, ಕಿರಣ್, ಕೃಷ್ಣಮೂರ್ತಿ, ಮಂಜುನಾಥ್, ಮೋಹನ್ ರಾಜ್, ಪೂರ್ಣಿಮಾ ಪ್ರಧಾನಕಾರ್ಯದರ್ಶಿ ಮಹಿಳಾ ಮೋರ್ಚಾ, ರಾಧಾ ಅಧ್ಯಕ್ಷರು ಮಹಿಳಾ ಮೋರ್ಚಾ ರಾಮಮಂದಿರ ವಾರ್ಡ್, ಹೇಮಾ, ಶ್ಯಾಮಲ, ಚಂದ್ರಕಲಾ, ಜಯಂತಿ, ಚೈತನ್ಯ, ಹರಿಪ್ರಿಯಾ, ಸತ್ಯ, ಗಾಯತ್ರೀ, ಸವಿತಾ, ಪದ್ಮಆಶಾ, ಲೀಲಾವತಿ, ಕುಸುಮರವರು ಕಾರ್ಯಕರ್ತರುಗಳು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.