ಸೇವಾದಳ ಸಂಸ್ಥಾಪಕ ನಾ.ಸು.ಹರ್ಡೀಕರ್ ಅದರ್ಶ, ಸಿದ್ದಾಂತದಲ್ಲಿ ಸಾಗೋಣ, ಭವ್ಯ ಭಾರತ ನಿರ್ಮಾಣ ಮಾಡೋಣ- ಎಂ.ರಾಮಚಂದ್ರ
ಬೆಂಗಳೂರು: ಸೇವಾದಳ ಸಂಸ್ಥಾಪಕರಾದ ನಾ.ಸು.ಹರ್ಡೀಕರ್ ರವರ 136ನೇ ಜನ್ಮದಿನಾಚರಣೆ ಸಂಭ್ರಮಾಚರಣೆ. ಮಹಾತ್ಮ ಗಾಂಧಿಜೀ ಮತ್ತು ನಾ.ಸು.ಹರ್ಡೀಕರ್ ರವರ ಬಾವಚಿತ್ರಕ್ಕೆ ಕೆಪಿಸಿಸಿ ಸೇವಾದಳ ಅಧ್ಯಕ್ಷರಾದ ಎಂ.ರಾಮಚಂದ್ರರವರು ಪುಷ್ಪನಮನ ಸಲ್ಲಿಸಿದರು. ರಾಜ್ಯ ಸೇವಾದಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಸಿಹಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ.ರಾಮಚಂದ್ರರವರು ಮಾತನಾಡಿ ಸೇವಾದಳ ಸಂಸ್ಥಪಕರಾದ ನಾ.ಸು.ಹರ್ಡೀಕರ್ ರವರು ಶಿಸ್ತ್ರು, ಸೇವಾ ಮನೋಭಾವನೆಯಿಂದ ಸೇವಾದಳದಲ್ಲಿ ಜನಸೇವೆ ಮಾಡಬೇಕು ಎಂದು ಕಲಿಸಿಕೊಟ್ಟರು.
ಕೆಪಿಸಿಸಿ ರಾಜ್ಯ ಸೇವಾದಳ ವಿಭಾಗವು ರಾಜ್ಯಾದ್ಯಂತ ಉತ್ತಮ ಸಂಘಟನೆ ಮಾಡಿದೆ ಮತ್ತು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೇವಾದಳದ ಕಾರ್ಯಕರ್ತರು ಜನರ ನಡುವೆ ಉತ್ತಮ ಬಾಂದವ್ಯದಲ್ಲಿ ಸರ್ಕಾರದ ಯೋಜನೆಗಳು ತಲುಪಿಸುವಂತೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು, ರಾಷ್ಟ್ರಿಯ ಅಧ್ಯಕ್ಷರ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಘಟಪ್ರಭದಲ್ಲಿ ರಾಜ್ಯ ಸಮಾವೇಶ ಮಾಡಲಾಗುವುದು. ಸೇವಾದಳ ಸಂಸ್ಥಾಪಕರಾದ ನಾ.ಸು.ಹರ್ಡೀಕರ್ ರವರ ಆದರ್ಶ, ಸಿದ್ದಾಂತಗಳನ್ನು ಎಲ್ಲರೂ ಆಳವಡಿಸಿಕೊಂಡು ದೇಶದ ಅಭಿವೃದ್ದಿಗೆ ಶ್ರಮಿಸೋಣ ಎಂದು ಹೇಳಿದರು.