ಕರ್ನಾಟಕದ ಏಕೀಕರಣಕ್ಕೂ ಮಂಡ್ಯದ ಕೊಡುಗೆ ಅಪಾರ : ಸಚಿವ ಚೆಲುವರಾಯಸ್ವಾಮಿ

ಕರ್ನಾಟಕದ ಏಕೀಕರಣಕ್ಕೂ ಮಂಡ್ಯದ ಕೊಡುಗೆ ಅಪಾರ : ಸಚಿವ ಚೆಲುವರಾಯಸ್ವಾಮಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಮಂಡ್ಯ : ನಮ್ಮ ಮಂಡ್ಯದಲ್ಲಿಂದು ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಚೆಲುವರಾಯಸ್ವಾಮಿ ರವರು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು.

 ಈ ವೇಳೆ ಮಾತನಾಡಿದ ಅವರು ಅನೇಕ ಸಾಹಿತಿಗಳು, ಸಾಧಕರ ನೆಲೆವೀಡಾಗಿರುವ ನಮ್ಮ ಮಂಡ್ಯವು ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಜೊತೆ ಕರ್ನಾಟಕ ಏಕೀಕರಣಕ್ಕೂ ಮಂಡ್ಯದ ಕೊಡುಗೆ ಅಪಾರವಾಗಿದೆ.

ಆಲೂರು ವೆಂಕಟರಾಯರು, ಬೆನಗಲ್‌ ರಾಮರಾಯರು, ರಾ.ಹ. ದೇಶಪಾಂಡೆಯವರು, ಕರ್ಪೂರ ಶ್ರೀನಿವಾಸರಾವ್, ಎಂ.ವೆಂಕಟಕೃಷ್ಣಯ್ಯ ಆದಿಯಾಗಿ ಅನೇಕ ಮಹನೀಯರು ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸೋಣ.

ನಮ್ಮ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಅನೇಕ ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಎಲ್ಲರ ಏಳಿಗೆಗಾಗಿ ಶ್ರಮಿಸುತ್ತಿದೆ. ಆದರೆ, ದೇಶದ ಜಿಡಿಪಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ನಮ್ಮ ರಾಜ್ಯ ಕೇಂದ್ರ ಸರ್ಕಾರಕ್ಕೆ ಕಟ್ಟುವ ತೆರಿಗೆಯಲ್ಲಿ ನಮಗೆ ಸಿಗುತ್ತಿರುವುದು ಬಿಡಿಗಾಸು ಮಾತ್ರ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ತತ್ವಕ್ಕೆ ಅನುಗುಣವಾಗಿ ನಮ್ಮ ಸರ್ಕಾರ ಸದಾ ಜನಪರವಾಗಿ ಕೆಲಸ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ 21 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.