ಬೆಂಗಳೂರುನಗರದಲ್ಲಿ ಮತದಾರರು ಬಿಜೆಪಿ ಪಕ್ಷ, ಪ್ರಧಾನಿ ಮೇಲೆ ಇಟ್ಟಿರುವ ವಿಶ್ವಾಸದಿಂದ ಗೆಲುವು ಸಾಧ್ಯವಾಗಿದೆ-ಎಸ್.ಸುರೇಶ್ ಕುಮಾರ್

ಬೆಂಗಳೂರುನಗರದಲ್ಲಿ ಮತದಾರರು ಬಿಜೆಪಿ ಪಕ್ಷ, ಪ್ರಧಾನಿ ಮೇಲೆ ಇಟ್ಟಿರುವ ವಿಶ್ವಾಸದಿಂದ ಗೆಲುವು ಸಾಧ್ಯವಾಗಿದೆ-ಎಸ್.ಸುರೇಶ್ ಕುಮಾರ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಶ್ರೀ ರಾಮಮಂದಿರದಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದಿಂದ 4ನೇ ಬಾರಿಗೆ ಆಯ್ಕೆ ಪಿ.ಸಿ.ಮೋಹನ್ ರವರ ವಿಜಯೋತ್ಸವ ಕಾರ್ಯಕ್ರಮವನ್ನು ರಾಜಾಜಿನಗರ ಮಂಡಲ ಬಿಜೆಪಿ ಅಚರಣೆ ಮಾಡಿದರು.

ಮೇರುನಟ ಡಾ||ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮಾಡಿದರು. ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಮಂಡಲ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ರವರು, ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಶ್ರೀಮತಿ ಪುಷ್ಪಲತಾ ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ವಿಜಯಕುಮಾರ್, ದೀಪ ನಾಗೇಶ್, ಪ್ರತಿಮಾ ಕಾರ್ಯಕರ್ತರ ಜೊತೆಯಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಬೆಂಗಳೂರುನಗರದಲ್ಲಿ ಕೇಂದ್ರ, ಉತ್ತರ ಮತ್ತು ದಕ್ಷಿಣ ಗ್ರಾಮಾಂತರ ಪ್ರದೇಶ ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮತದಾರರು ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರಮದಿರವರು ಮೇಲೆ ಇಟ್ಟಿರುವ ವಿಶ್ವಾಸದಿಂದ ಗೆಲುವು ಸಾಧ್ಯವಾಗಿದೆ. ಮತದಾರರ ಋಣ ತೀರಿಸುಲು ಲೋಕಸಭಾ ಸದಸ್ಯರ ಜೊತೆಗೂಡಿ ಶ್ರಮಿಸಲಾಗುವುದು. ಕಾಂಗ್ರೆಸ್ ಪಕ್ಷ ಸಚಿವರಿಬ್ಬರು ಒಂದಂಕಿ ಬರುವುದಿಲ್ಲ ಬಿಜೆಪಿ ಎಂದು ಹೇಳಿದ್ದರು, ಅದರೆ ಮತದಾರರ ತೀರ್ಮಾನ ಕೊಟ್ಟಿದ್ದಾನೆ. 

10ವರ್ಷದ ಪ್ರಧಾನಿ ನರೇಂದ್ರಮೋದಿರವರ ಆಡಳಿತದಿಂದ ಉತ್ತಮ ಫಲಿತಾಂಶ ಬರಬೇಕಾಗಿತ್ತು ಅದರೆ ಫಲಿತಾಂಶದಲ್ಲಿ ಸ್ವಲ್ಪ ಸಿಹಿ ಕಡಿಮೆಯಾಗಿದೆ. ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವಿನಿಂದ ಜವಾಬ್ದಾರಿ ಹೆಚ್ಚಾಗಿದೆ, ಇನ್ನು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು. ಮುಂದಿನ ವಾರ ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಕೃಷ್ಣಮೂರ್ತಿ,ಕಿರಣ್, ಗಿರೀಶ್ ಗೌಡ, ರಾಕೇಶ್,ಮೋಹನ್ ರಾಜ್, ಅಮಿತ್ ಜೈನ್, ಗಾಂಧಿ, ವೆಂಕಟೇಶ್, ಯುವ ಬಿಜೆಪಿ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.