ಕುಡಿಯುವ ನೀರನ್ನು ಪೋಲು ಮಾಡಿದ ಬೆಂಗಳೂರಿನ 22 ಕುಟುಂಬಗಳಿಗೆ ಶಾಕ್‌! ಬರೋಬ್ಬರಿ 1.1 ಲಕ್ಷ ರೂ. ದಂಡ ಸಂಗ್ರಹ

ಕುಡಿಯುವ ನೀರನ್ನು ಪೋಲು ಮಾಡಿದ ಬೆಂಗಳೂರಿನ 22 ಕುಟುಂಬಗಳಿಗೆ ಶಾಕ್‌! ಬರೋಬ್ಬರಿ 1.1 ಲಕ್ಷ ರೂ. ದಂಡ ಸಂಗ್ರಹ

ಕುಡಿಯುವ ನೀರನ್ನು ಪೋಲು ಮಾಡಿದ ಬೆಂಗಳೂರಿನ 22 ಕುಟುಂಬಗಳಿಗೆ ಶಾಕ್‌! ಬರೋಬ್ಬರಿ 1.1 ಲಕ್ಷ ರೂ. ದಂಡ ಸಂಗ್ರಹ
ಕುಡಿಯುವ ನೀರನ್ನು ಪೋಲು ಮಾಡಿದ ಬೆಂಗಳೂರಿನ 22 ಕುಟುಂಬಗಳಿಗೆ ಶಾಕ್‌
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಭೀಕರ ನೀರಿನ ಸಮಸ್ಯೆ ತಲೆದೂರಿದೆ. ಇದರ ನಡುವೆ ಅನವಶ್ಯಕ ಚಟುವಟಿಕೆಗಳಿಗೆ ಕುಡಿಯುವ ನೀರನ್ನು ಬಳಸಿ ನೀರು ಪೋಲು ಮಾಡುತ್ತಿದ್ದ 22 ಕುಟುಂಬಗಳಿಗೆ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಜಲ ಮಂಡಳಿಯ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ಕುಟುಂಬಕ್ಕೆ 5 ಸಾವಿರ ರೂಪಾಯಿ ದಂಡವನ್ನು ಹಾಕಲಾಗಿದೆ.

Bengaluru Water Crisis

ಕುಡಿಯುವ ನೀರನ್ನು ಕಾರು ತೊಳೆಯಲು ಅಥವಾ ತೋಟಗಾರಿಕೆಗೆ ಬಳಸಿದ್ದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 22 ಮನೆಗಳಿಗೆ ದಂಡ ವಿಧಿಸಿದೆ. ಇದರಿಂದ 1.1 ಲಕ್ಷ ರೂ. ದಂಡ ಸಂಗ್ರಹವಾಗಿದೆ. ನಗರದ ವಿವಿಧ ಪ್ರದೇಶಗಳಿಂದ ದಂಡವನ್ನು ಸಂಗ್ರಹಿಸಲಾಗಿದ್ದು, ಬೆಂಗಳೂರು ದಕ್ಷಿಣದಿಂದ ಅತಿ ಹೆಚ್ಚು ಅಂದರೆ 80 ಸಾವಿರ ರೂ. ದಂಡ ಸಂಗ್ರಹವಾಗಿದೆ.

ಲಮಂಡಳಿಯ ಆದೇಶವನ್ನು ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸುವುದಾಗಿ ತಿಳಿಸಿತ್ತು. ಪುನರಾವರ್ತಿತ ಉಲ್ಲಂಘನೆಗಳಿಗೆ ಪ್ರತಿ ಬಾರಿ 500 ರೂ. ಹೆಚ್ಚುವರಿ ದಂಡ ವಿಧಿಸುವುದಾಗಿ ಮಂಡಳಿ ತಿಳಿಸಿತ್ತು. ಅದಲ್ಲದೇ ಹೋಳಿ ಆಚರಣೆಯ ಸಂದರ್ಭದಲ್ಲಿ ಪೂಲ್ ಪಾರ್ಟಿಗಳು ಮತ್ತು ರೇನ್‌ ಡ್ಯಾನ್ಸ್‌ಗೆ ಕಾವೇರಿ ಮತ್ತು ಬೋರ್‌ವೆಲ್ ನೀರನ್ನು ಬಳಸದಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಸೂಚನೆ ನೀಡಿತ್ತು.

ಅದಲ್ಲದೇ ನೀರಿನ ಸಂರಕ್ಷಣೆಗೆ ಹಲವು ವಿನೂತನ ಕಾರ್ಯಕ್ರಮಗಳನ್ನು ಪರಿಚಯಿಸಿರುವ ಬಿಡಬ್ಲ್ಯೂಎಸ್‌ಎಸ್‌ಬಿ, ನೀರಿನ ಬಳಕೆಯನ್ನು ಕಡಿಮೆ ಮಾಡಲು ಏರೇಟರ್‌ಗಳನ್ನು ಸ್ಥಾಪಿಸಲು ಹೋಟೆಲ್‌, ಅಪಾರ್ಟ್‌ಮೆಂಟ್‌ ಮತ್ತು ಕೈಗಾರಿಕೆಗಳಿಗೆ ಸೂಚನೆ ನೀಡಿತ್ತು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ!

ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇದರಿಂದ ಹಲವು ಕಡೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ಟ್ಯಾಂಕರ್‌ ಮಾಫಿಯಾ ಹೆಚ್ಚಾಗಿದ್ದು, ಜನರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ನೀರಿನ ಸಮಸ್ಯೆ ಕಾರಣಕ್ಕೆ ಬೆಂಗಳೂರಿನ ನಿವಾಸಿಗಳು ವರ್ಕ್‌ ಫ್ರಂ ಹೋಮ್‌ಗೆ ಮುಂದಾಗಿದ್ದಾರೆ. ಅದಲ್ಲದೇ ಪ್ಯಾಕೇಟ್‌ ಆಹಾರಗಳನ್ನು ಸೇವಿಸಲು ಮುಂದಾಗಿದ್ದು, ಮಾಲ್‌ಗಳಲ್ಲಿನ ಶೌಚಾಲಯವನ್ನು ಬಳಸುತ್ತಿದ್ದಾರೆ.

ಭಾರತದ 'ಸಿಲಿಕಾನ್ ವ್ಯಾಲಿ' ಬೆಂಗಳೂರು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಬೆಂಗಳೂರಿಗೆ 2,600 ಎಂಎಲ್‌ಡಿ ನೀರಿನ ಅವಶ್ಯಕತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಸಿಗುತ್ತಿರುವುದು ಕೇವಲ 2,100 ಎಂಎಲ್‌ಡಿ ನೀರು. ಇದರಲ್ಲಿ 1,470 ಎಂಎಲ್‌ಡಿ ನೀರು ಕಾವೇರಿ ನದಿಯಿಂದ ಬರುತ್ತಿದ್ದು, 650 ಎಂಎಲ್‌ಡಿ ಬೋರ್‌ವೆಲ್‌ನಿಂದ ಪಡೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು.