ಸ್ಟಾರ್ ನಟರ ಸತಿ ಆಗೋದುತಪ್ಪಾ : ಟ್ವಿಂಕಲ್ ಖನ್ನಾ
ಅಂದಹಾಗೆ ಬಾಲಿವುಡ್ನ ನಟಿಯರು ಸ್ಟಾರ್ ನಟರ ಹೆಂಡತಿಯಾಗುವುದು ತಪ್ಪಾ ಎಂದು ಬಾಲಿವುಡ್ ನ ಸೂಪರ್ ಸ್ಟಾರ್ ನಟಿ ಟ್ವಿಂಕಲ್ ಖನ್ನಾ ಪ್ರಶ್ನೆಮಾಡಿದ್ದಾರೆ.
ಪತಿ ಸಮಸ್ಯೆ ಎದುರಿಸಿದಾಗ ಅದಕ್ಕೆ ಪತ್ನಿ ಕಾರಣ ಎಂಬ ರೀತಿಯಲ್ಲಿ ಹೇಳಲಾಗುತ್ತಿದೆ. ಇದಕ್ಕೆ ಟ್ವಿಂಕಲ್ ಖನ್ನಾ ಅವರು ಸೋಶಿಯಲ್ ಮೀಡಿಯಾ ಮೂಲಕ ಸರಿಯಾದ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಆಯಿತು. ಈ ದಾಳಿಗೆ ಕರೀನಾ ಕಪೂರ್ ಕಾರಣ ಎಂದು ಅನೇಕರು ದೂರಿದರು. ಸೈಫ್ ಮೇಲೆ ದಾಳಿ ನಡೆಯುತ್ತಿರುವಾಗ ಕರೀನಾ ಕಪೂರ್ ಅವರು ಗೆಳತಿಯರ ಜೊತೆ ಪಾರ್ಟಿ ಮಾಡುತ್ತಿದ್ದರು ಎಂದು ಅನೇಕರು ಹೇಳಿದ್ದರು. ಇದನ್ನು ಟ್ವಿಂಕಲ್ ಖನ್ನಾ ಅವರು ಖಂಡಿಸಿದ್ದಾರೆ. 'ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಇರುವಾಗ ಒಂದು ವದಂತಿ ಹರಡಿತ್ತು. ಸೈಫ್ ಮೇಲೆ ದಾಳಿ ನಡೆದಾಗ ಸಹಾಯಕ್ಕೆ ಕರೀನಾ ಅಲ್ಲಿ ಇರಲಿಲ್ಲ ಎಂದು ಹೇಳಲಾಯಿತು. ಆದರೆ, ಇದನ್ನು ಸಾಬೀತು ಮಾಡುವ ಯಾವುದೇ ಸಾಕ್ಷ್ಯ ಇರಲಿಲ್ಲ ಎಂದು ಹೇಳಿದ್ದಾರೆ.
'ವಿರಾಟ್ ಕೊಹ್ಲಿ ಅವರು ಕಡಿಮೆ ರನ್ಗೆ ಔಟ್ ಆದಾಗ ಅನುಷ್ಕಾ ಶರ್ಮಾ ಅವರನ್ನು ನಿಂದಿಸುತ್ತಾರೆ, ಈ ರೀತಿಯ ಅನೇಕ ಘಟನೆ ನಡೆದಿದೆ. ಪತಿಗೆ ಆಗುವ ತೊಂದರೆಗೆ ಪತ್ನಿಯರನ್ನು ದೂಷಿಸುವುದು ಇದೇ ಮೊದೇಲನು ಅಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.